Good News : ಬಿಎಂಟಿಸಿಯಲ್ಲಿ ಹೊಸ ದರ ನಿಗದಿ, ಬಸ್ನಲ್ಲೇ ಟಿಕೆಟ್ ವಿತರಣೆ..
ಲಾಕ್ ಡೌನ್ 4.0 ಸಡಿಲಗೊಂಡು ಬಿಎಂಟಿಸಿ ಬಸ್ ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಪ್ರಯಾಣ ದರವನ್ನು ಮಾತ್ರ ದಿನ, ವಾರ ಮತ್ತು ಮಾಸಿಕ ಪಾಸ್ಗಳದರವನ್ನೂ ಬದಲಾಯಿಸಿತ್ತು. ಆದರೀಗ ಈ ಪ್ರಯಾಣ ದರದಲ್ಲಿ ಇಳಿಕೆಯಾಗಿ ಪ್ರಯಾಣಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಹೌದು… ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಜನರಿಗೆ ಬಸ್ ಪ್ರಯಾಣದ ದರ ಬಿಸಿ ಮುಟ್ಟಿಸಿತ್ತು. ಹೀಗಾಗಿ ಕೆಲಸಕ್ಕೆ ಹೋಗುವ ಅನೇಕ ಜನ ತೊಂದರೆ ಕೂಡ ಅನುಭವಿಸುವಂತಾಗಿತ್ತು. ಇದನ್ನರಿತ ಸಾರಿಗೆ ಇಲಾಖೆ ಪ್ರಯಾಣಿಕರ ದರವನ್ನು ಇಳಿಕೆ ಮಾಡಿದೆ. ಸದ್ಯ 70 ರೂಪಾಯಿ ಇದ್ದ ದಿನದ ಪಾಸಿನ ದರ ಈಗ 50 ರೂಪಾಯಿ ಆಗಿದೆ.
ನಾಳೆಯಿಂದ 2 ಕಿ.ಮೀ. ಒಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ 5 ರೂ., 3 ರಿಂದ 4 ಕಿ.ಮೀ.ವರೆಗೆ 10 ರೂ., 5 ರಿಂದ 6 ಕಿ.ಮೀ.ವರೆಗೆ 15 ರೂ., 7 ರಿಂದ 14 ಕಿ.ಮೀ. ವರೆಗೆ 20 ರೂ. ಹಾಗೂ 41 ಕಿ.ಮೀ.ನಿಂದ ಹಾಗೂ ಹೆಚ್ಚಿನ ದೂರದವರೆಗೆ 30 ರೂ. ದರ ನಿಗದಿ ಮಾಡಲಾಗಿದೆ. ಬಿಎಂಟಿಸಿ ದರ ಪರಿಷ್ಕರಣೆಯ ಪ್ರಸ್ತಾಪನೆಗೆ ಸರ್ಕಾರ ಕೂಡ ಹಸಿರು ನಿಶಾನೆ ತೋರಿದೆ.
ಜೊತೆಗೆ ಬಸ್ನಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರು ಒತ್ತಡ ಹೇರಿದ್ದರು. ಹೀಗಾಗಿ, ನಾಳೆಯಿಂದ ಬೆಂಗಳೂರಿನಲ್ಲಿ ಹೊಸ ಬಸ್ ಟಿಕೆಟ್ ದರದೊಂದಿಗೆ, ಬಸ್ನಲ್ಲೇ ಟಿಕೆಟ್ ನೀಡಲು ಮುಂದಾಗಿದೆ.

