JDS : ಗೌಡರ ನೆರವಿಗೆ ಚುನಾವಣಾ expert ಪ್ರಶಾಂತ್ ಕಿಶೋರ್, ಹೋರಾಟಕ್ಕೆ ಹೊಸ ತಂತ್ರ..

ಚುನಾವಣಾ ತಂತ್ರಗಳನ್ನು ಹೆಣೆಯುವುದರಲ್ಲಿ ಚತುರ ಎಂದೇ ಹೆಸರಾಗಿರುವ ಪ್ರಶಾಂತ್ಕಿಶೋರ್‍ ಅವರ ಸೇವೆಯನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ಜೆಡಿಎಸ್ ನಿರ್ಧರಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬಿಹಾರದಲ್ಲಿ ನಿತೀಶರ ಜೆಡಿಯು ಘಟಬಂಧನ, ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಮತ್ತು ತೆಲಂಗಾಣದಲ್ಲಿ ವೈಎಸ್‌ಆರ್‍ ಪಕ್ಷಗಳ ಪರ ಚುನಾವಣಾ ತಂತ್ರಜ್ಞನಾಗಿ ಯಶಸ್ಸು ಸಾಧಿಸಿರುವ ಪ್ರಶಾಂತ್ ಕಿಶೋರ್ ಅವರ ಸೇವೆಯನ್ನು ಬಳಸಿಕೊಳ್ಳಲು ನಾವೂ ನಿರ್ಧರಿಸಿದ್ದೇವೆ.

ಈ ಸಂಬಂಧ ಪ್ರಶಾಂತ್ ಅವರ ಜೊತೆ ಒಂದು ಸುತ್ತಿನ ಮಾತುಕತೆಯೂ ಆಗಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶ ಇದ್ದು, ಸೂಕ್ತ ಸಮಯದಲ್ಲಿ ಅವರನ್ನು ಜೆಡಿಎಸ್ ರಣತಂತ್ರ ಹೆಣೆಯಲು ಬಳಸಿಕೊಳ್ಳಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ಲೋಕಸಭೆ ಮತ್ತು ಮೂರು ತಿಂಗಳ ಹಿಂದೆ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಜೆಡಿಎಸ್‌ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಇದೆ. ಇದನ್ನು ಹೋಗಲಾಡಿಸಲು ಮುಂದಿನ ಚುನಾವಣೆಯಲ್ಲಿ ಸೂಕ್ತ ರಣನೀತಿ ರಚಿಸಿಕೊಂಡು ಅಖಾಡಕ್ಕೆ ಧುಮುಕುವುದು ಜೆಡಿಎಸ್ ಲೆಕ್ಕಾಚಾರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.