FACT CHECK | ಶ್ರೀನಗರ ಹೆದ್ದಾರಿಯಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹದ ದೃಶ್ಯಗಳನ್ನು ಅರುಣಾಚಲ ಪ್ರದೇಶದ್ದು ಎಂದು ತಪ್ಪಾಗಿ ಹಂಚಿಕೆ
ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ ಎಂದು ಪ್ರತಿಪಾದಿಸಿ ಸಾಮಾಜಿಕ ಮಧ್ಯಮಗಳಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಭೂಕುಸಿತದಿಂದ ರಸ್ತೆಯೊಂದರಲ್ಲಿ ಭಾರಿ ಪ್ರಮಾಣದ ಕೆಸರು ಮತ್ತು ಕಲ್ಲುಬಂಡೆಗಳು ಜಾರುವ ದೃಶ್ಯವನ್ನು ಕಾಣಬಹುದು.
ಫೇಸ್ಬುಕ್ನಲ್ಲಿ ‘ಡಾಮ್ ವೀಡಿಯೊಸ್’ ಎಂಬ ಬಳಕೆದಾರ ಈ ವೀಡಿಯೊವನ್ನು 2 ಜೂನ್ 2025ರಂದು ಹಂಚಿಕೊಂಡಿದ್ದು, ಇದು ಅರುಣಾಚಲ ಪ್ರದೇಶದ ಭೂಕುಸಿತ ಎಂದು ಬರೆದುಕೊಂಡಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದ ವರದಿಗಳಿಂದಾಗಿ ಜನರು ಆತಂಕಗೊಂದಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ದೃಶ್ಯಗಳು ನಿಜವಶಗಿಯೂ ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಆಗಿರುವ ವಿಡಿಯೋದ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಕುರಿತು ಕಾಶ್ಮೀರ ಸಮಾಚಾರ್ ಎಂಬ ಫೇಸ್ಬುಕ್ ಪುಟದಲ್ಲಿ ಈ ವೀಡಿಯೊವನ್ನು ಜಮ್ಮು ಮತ್ತು ಕಾಶ್ಮೀರದ ರಂಬನ್ನದ್ದು ಎಂದು ಹೇಳಿಕೊಂಡು ಅಪ್ಲೋಡ್ ಮಾಡಲಾದ ಪೋಸ್ಟ್ ಲಭ್ಯವಾಗಿದೆ.. “ಜಮ್ಮು-ಶ್ರೀನಗರ ಹೆದ್ದಾರಿಯ ರಂಬನ್ನಲ್ಲಿ ಹಠಾತ್ ಭೂಕುಸಿತದಿಂದ SHO ವಿಕ್ರಮ್ ಪರಿಹಾರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.

ಮೇ 9 ರಂದು ಯುನಿಕ್ ವಾಯ್ಸ್ ನ್ಯೂಸ್ನ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಅದರಲ್ಲಿ ಕೂಡ ಜಮ್ಮು-ಶ್ರೀನಗರ ಹೆದ್ದಾರಿಯ ರಂಬನ್ನದ್ದು ಎಂಬ ಹೇಳಿಕೆಯನ್ನು ಸಹ ನೀಡಿದ್ದೇವೆ. ಇಲ್ಲಿಯೂ ಸಹ, ವೀಡಿಯೊದಲ್ಲಿ ಕಾಣುವ ಪೊಲೀಸ್ ಅಧಿಕಾರಿ ಠಾಣಾ ಅಧಿಕಾರಿ ವಿಕ್ರಮ್ ಪರಿಹಾರ್ ಎಂದು ಉಲ್ಲೇಖಿಸಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ಬಗ್ಗೆ ಹಲವಾರು ವರದಿಗಳು ಬಂದಿವೆ. ಆದರೆ ಈ ಯಾವ ವರದಿಗಳಲ್ಲೂ ಕೂಡ ವೈರಲ್ ವಿಡಿಯೋಗೆ ಹೋಲಿಕೆಯಾಗುವಂತಹ ದೃಶ್ಯಗಳು ಕಂಡು ಬಂದಿಲ್ಲ. ಹೀಗಾಗಿ ವೈರಲ್ ವಿಡಿಯೋ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.
Over 33,000 Affected in Arunachal Pradesh As Incessant Rain Triggers Flash Floods And Landslides
ಒಟ್ಟಾರೆಯಾಗಿ ಹೇಳುವುದಾದರೆ, ಜಮ್ಮು-ಶ್ರೀನಗರ ಹೆದ್ದಾರಿಯ ರಂಬನ್ ಎಂಬಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹದ ದೃಶ್ಯಗಳನ್ನು ಅರುಣಾಚಲ ಪ್ರದೇಶದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವೈರಲ್ ಆಗುತ್ತಿರುವ ಸಿಂಹದ ವಿಡಿಯೋದ ಅಸಲೀಯತ್ತೇನು ಗೊತ್ತೇ?

