SSLC exam : ನೆರೆ ರಾಜ್ಯಗಳಲ್ಲೂSSLC ಪರೀಕ್ಷಾ ಕೇಂದ್ರ, ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳು
ಕೊರೊನಾ ತಡೆಗಟ್ಟುವ ಜವಾಬ್ದಾರಿಯ ನಡುವೆಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಗಡಿ ಬಭಾಗದಲ್ಲಿ ವಾಸಿಸುವ ವಿದ್ಯಾರ್ಥಿಗಳ ಅನುಕೂಲಕ್ಕೆಂದು ಮುಂದಿನ ತಿಂಗಳು ನಡೆಯಲಿಉರವ SSLC ಪರೀಕ್ಷೆಗೆ ರಾಜ್ಯ ಸರಕಾರದ ಮಹತ್ವದ ತೀರ್ಮಾನ ಕೈಗೊಂಡಿದೆ.

ಗಡಿ ಪ್ರದೇಶದ ವಿದ್ಯಾರ್ಥಿ ಸಮುದಾಯ ಕೊರೋನಾ ಸಂದರ್ಭದಲ್ಲಿ ದೂರುದೂರುಗಳಿಗೆ ಪ್ರಯಾಣ ಮಾಡದಂತೆ ತಡೆಯಲು ನೆರೆಯ ರಾಜ್ಯಗಳಲ್ಲಿ ಸಹ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಪರೀಕ್ಷಾ ಕೊಠಡಿಗೆ ಬರುವ ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ.. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ಮೀಸಲು. ಪರೀಕ್ಷೆ ಆರಂಭಕ್ಕೋ ಅರ್ಧ ತಾಸು ಮುಂಚೆ ಬರುವಂತೆ ಸೂಚನೆ. ಪ್ರತಿ ಕೇಂದ್ರಗಳಲ್ಲಿ ಓರ್ವ ಮುಖ್ಯ ಮೇಲ್ವಿಚಾರಕ ನೇಮಕ ಮಾಡಲಾಗುತ್ತಿದೆ..

ಇದರಿಂದ ಗಡಿಯಾಗೆ ಇದ್ದರೂ ರಾಜ್ಯದೊಳಗೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ ಅದರಂತೆ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಗೋವಾದ ಗಡಿ ಭಾಗಗಲ್ಲಿರು SSLC ವಿದ್ಯಾರ್ಥಿ ಸಮೂಹ ಅಲ್ಲಿಯೇ ಪರೀಕ್ಷೆ ಬರಡಯಲು ಅನುಕೂಲವಾಗಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಲಾಕ್ಡೌನ್ ಕಾರಣ ಎರಡು ತಿಂಗಳಿಂದ ಮುಂದೂಡಲಾಗಿದ್ದSSLC ಪರೀಕ್ಷೆಗಳನ್ನು ಮುಂದಿನ ತಿಂಗಳು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. SSLC ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು ಎಂಟು ಲಕ್ಷದ ನಲವತ್ತೆಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಎಸ್ಎಸ್ ಎಲ್ ಸಿ ಪರೀಕ್ಷೆ. ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳು. 43,720 ಕೊಠಡಿಗಳು ಮೀಸಲು. ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ. ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ವತಿಯಿಂದ ಮಾಸ್ಕ್ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಮಧ್ಯೆ ಇತರ ಕೆಲ ರಾಜ್ಯಗಳಲ್ಲಿ ಅನುಸರಿಸಿದಂತೆಯ ರಾಜ್ಯದಲ್ಲಿಯೂ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬಹುದಿತ್ತು ಎಂಬ ವಾದಕ್ಕೆ ಸುರೇಶ್ ಕುಮಾರ್ ಉತ್ತರಿಸಿದ್ದಾರೆ. ಪರೀಕ್ಷೆ ಬೇಕು ಎಂದು ಮಕ್ಕಳೇ ಹಠಕ್ಕೆ ಬಿದ್ದಿದ್ದರು. ಅವರ ಒಳಿತಿಗಾಗಿ ಪರೀಕ್ಷೆ ನಡೆಸಲಾಗುತ್ತಿದೆಯೇ ಹೊರತು ಯಾರದ್ದೋ ಪರತಿಷ್ಠೆಗಾಗಿ ಅಲ್ಲ ಎಂದು ಸುರೇಶ್ ಹೇಳಿದ್ದಾರೆ.
ಜು. 1ರಿಂದ CBSE ಪರೀಕ್ಷೆ
ಇದೇ ಸಮಯ CBSE ಮಾದರಿಯ ಹತ್ಸಿತು ಹಾಗೂ ಹನ್ನೆರಡನೇ ತರಗತಿಗಳಿಗೆ ಸಹ ವಾರ್ಷಿಕ ಪರೀಕ್ಷಾ ದಿನಾಮಖವನ್ನು ಘೋಷಣೆ ಮಾಡಲಾಗಿದೆ. ಅದರಂತೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಜುಲೈ 1ರಿಂದ ಜುಲೈ 15ರವರೆಗೆ ನಡೆಯಲಿದೆ. ಹಾಗೆಯೇ 12ನೇ ತರಗತಿ ಪರೀಕ್ಷೆಗಳು ಕೂಡ ಜುಲೈ 1 ರಿಂದ 15ರವರೆಗೆ ನಡೆಯಲಿದೆ.

