ಉಚಿತ ಹಾಲಿಗಾಗಿ ಸಾಮಾಜಿಕ ಅಂತರವಿಲ್ಲದೆ ಕಿ.ಮೀಟರ್ ಗಟ್ಟಲೆ ಕ್ಯೂ ನಿಂತ ಜನ..!

ನಿನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉಚಿತ ಹಾಲನ್ನು ಜನಸಾಮಾನ್ಯರಿಗೆ ಹಂಚಿ ಇನ್ಮುಂದೆ ಉಚಿತ ಹಾಲು ನೀಡುವುದಾಗಿ ಘೋಷಣೆ ಮಾಡಿದ್ದರು. ಇಂದು ಸಿಎಂ ಹೇಳಿದಂತೆ ಉಚಿತ ಹಾಲನ್ನು ಪಡೆದುಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಮುಗಿಗಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬಗರದ ಪಂತರಪಾಳ್ಯ, ಕಮಲನಗರದಲ್ಲಿ ಗುಂಪು ಗುಂಪಾಗಿ ಜನ  ಬಂದು ಉಚಿತ ಹಾಲು ಪಡೆಯುತ್ತಿರುವ ಘಟನೆ ಇಂದು ಎಲ್ಲೆಡೆ ಕಂಡು ಬಂದಿದೆ. ಇಷ್ಟು ಮಾತ್ರವಲ್ಲದೇ ಹಾಲಿಗಾಗಿ ಕಿ.ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತುಕೊಂಡ ದೃಶ್ಯಗಳು ಕಂಡು ಬಂದಿದೆ.ಈ ವೇಳೆ ಜನ ಸಾಮಾಜಿ ಅಂತರ ಕಾಯ್ದುಕೊಂಡಿರಲಿಲ್ಲ, ಮಾಸ್ಕ್ ಹಾಕಿರಲಿಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಹಾಲು ವಿತರಣೆಯನ್ನು ಬಂದ್ ಮಾಡಿದ್ದಾರೆ.

 

ಟಿ ದಾಸರಹಳ್ಳಿಯಲ್ಲಿ ಉಚಿತ ಹಾಲು ಪಡೆಯಲು ಜನ ಬೆಳ್ಳಂಬೆಳಿಗ್ಗೆ ಸಾಲುಗಟ್ಟಿ ನಿಂತ ದೃಶಗಳು ಕಂಡು ಬಂದಿದೆ. ಇವರನ್ನು ಚದುರಿಸಲು ಪೊಲೀಸರು ಹರಸಾಹಸವೇ ಪಡಬೇಕಾದ ಪರಿಸ್ಥಿತಿ ಪೊಲೀಸರಿಗೆ ಉಂಟಾಗಿತ್ತು. ಜೊತೆಗೆ ಜನಸಂದಣಿಯನ್ನು ಕಂಟ್ರೋಲ್ ಮಾಡಲು ಹೊಯ್ಸಳ ವಾಹನ ಬರಬೇಕಾಯಿತು.

ಮತ್ತೊಂದು ಸಂಗತಿ ಎಂದರೆ ಮೈಸೂರು ರೋಡ್ ನ ಪಂಥರಪಾಳ್ಯದಲ್ಲಿ ಹಾಲಿನ ವಾಹನಕ್ಕೆ ಜನರು ಮುಗಿಬಿದ್ದಿದ್ದು, ವಾಹನ ಬರುತ್ತಿದ್ದಂತೆ ಜನ ವಾಹನದ ಹಿಂದೆ ಓಡೋಡಿ ಬಂದಿದ್ದಾರೆ. ಈ ನೂಕು ನುಗ್ಗಲಾಟದಲ್ಲಿ ನೂರಾರು ಪ್ಯಾಕೇಟ್ ಹಾಲು ಮಣ್ಣು ಪಾಲಾಗಿದೆ. ಬೆಂಗಳೂರು ಮಾತ್ರವಲ್ಲದೇ ಚಿತ್ರದರ್ಗ, ಹಾಸನ ಜಿಲ್ಲೆಯಲ್ಲೂ ಉಚಿತ ಹಾಲಿಗಾಗಿ ಕಿ.ಮೀ ಗಟ್ಟಲೇ ಜನರು ಸಾಲಾಗಿ ನಿಂತಿದ್ದು ಕಂಡುಬಂದಿದೆ. ಇಂದು ಸಿಎಂ ಯಡಿಯೂರಪ್ಪನಂತೆ ಹೆಚ್ ಡಿ ರೇವಣ್ಣ ಕೂಡ ಸಾಮಾಜಿಕ ಻ಂತರ ಕಾಯ್ದುಕೊಳ್ಳದೇ , ಮಾಸ್ಕ್ ಹಾಕಿಕೊಳ್ಳದೇ ಹಾಲು ವಿತರಣೆ ಮಾಡಿದ್ದು ಕಂಡು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights