ಕಾಬೂಲ್ ನಲ್ಲಿ ಗುಂಡಿನ ದಾಳಿ – 32 ಜನ ಮೃತ – 58 ಮಂದಿಗೆ ಗಂಭೀರ ಗಾಯ

ನೆನ್ನೆ  (ಶುಕ್ರವಾರ) ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದು 32 ಜನ ಮೃತ ಪಟ್ಟು, 58 ಮಂದಿ ಗಂಭೀರ ಗಾಯಗೊಂಡ ದಾರುಣ ಘಟನೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ನಡೆದಿದೆ.

ಶಿಯಾ ಪಂಗಡದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ಮಾಡಲಾಗಿದ್ದು ಕೂದಲೆಳೆ ಅಂತರದಲ್ಲಿ ಕೆಲವರು ಪಾರಾಗಿದ್ದಾರೆ. 1995ರಲ್ಲಿ ಆಫ್ಘಾನಿಸ್ತಾನದ ಹಜಾರಾ ಜನಾಂಗದ ನಾಯಕ ಅಬ್ದುಲ್​​ ಅಲಿ ಮಜಾರಿ ಅವರ ಹತ್ಯೆಯ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಈ ದಾಳಿ ನಡೆಸಲಾಗಿದೆ. ಇಲ್ಲಿ ವಿಪಕ್ಷ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ದಾಳಿಯಲ್ಲಿ ಪ್ರತಿಪಕ್ಷ ನಾಯಕ ಅಬ್ದುಲ್ಲಾ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐಸಿಸ್​ (ಇಸ್ಲಾಮಿಕ್​ ಸ್ಟೇಟ್​ ಗ್ರೂಪ್​) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಆಫ್ಘಾನಿಸ್ತಾನದ ಐಎಸ್​ ಸಂಸ್ಥೆ ದೇಶದ ಅಲ್ಪಸಂಖ್ಯಾತ ಶಿಯಾ ಸಮುದಾಯದ ವಿರುದ್ಧ ಯುದ್ಧ ಘೋಷಿಸಿದೆ. ನಿನ್ನೆ ಶಿಯಾ ಸಮುದಾಯವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. 1995ರಲ್ಲಿ ಆಫ್ಘಾನಿಸ್ತಾನದ ಹಜಾರಾ ಜನಾಂಗದ ನಾಯಕ ಅಬ್ದುಲ್​​ ಅಲಿ ಮಜಾರಿ ಅವರ ಹತ್ಯೆಯ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಈ ದಾಳಿ ನಡೆಸಲಾಗಿದೆ. ಹಜಾರಾ ಸಮುದಾಯದವರು ಬಹುತೇಕರು ಶಿಯಾ ಜನಾಂಗೀಯರೇ ಆಗಿದ್ದಾರೆ. ವರದಿ ಪ್ರಕಾರ, ಮೃತಪಟ್ಟವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights