ಕೇರಳ v/s ಕೊರೊನಾ :ಸೋಂಕು ಪೀಡಿತರ ಕೊಂಡಿ ಜಾಲಾಡಲು 15 ತಂಡ : ಕಂಡರಿಯದ ಸಮರ
ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಜಗತ್ತೇ ತಲ್ಲಣಗೊಂಡಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ 3,400 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಆದರೆ ಇದಕ್ಕೆ ಎದೆಗುಂದದ ದೇವರ ನಾಡು ಕೇರಳ ಸಾರಿರುವ ಸಮರ ನಿಜಕ್ಕೂ ರೋಚಕವಾಗಿದೆ. ಈ ಸಮರದಲ್ಲಿ ದೇಶದ ಇತರೆ ರಾಜ್ಯಗಳು ಕೊರೊನಾ ಓಡಿಸಲು ಕೈಜೋಡಿಸಿವೆ. ಅಷ್ಟಕ್ಕೂ ಕೊರೊನಾ ತಡೆಗೆ ಕೇರಳ ಮಾಡಿದ ಕೆಲಸವೇನು…? ಕೊರೊನಾ ತಡೆಯಲು ಇಡೀ ದೇಶಕ್ಕೆ ಮಾದರಿಯಾಗುವಂತೆ ಕೇರಳ ಕಂಡುಕೊಂಡ ಕ್ರಮವೇನು..?

ವಿಶ್ವದಾದ್ಯಂತ ಕೊರೊನಾ ಕರಾಳ ದಿನಗಳನ್ನು ತೋರುತ್ತಿದೆ. ಅಷ್ಟೇ ಅಲ್ಲ ಭಾರತದಲ್ಲೂ ಕೊರೊನಾ ಮಾರಣಾತಿಂಕ ಸೋಂಕು ವ್ಯಾಪಿಸುತ್ತಿದೆ. ಕರ್ನಾಟಕದಲ್ಲೂ ವಿಪರೀತ ಆತಂಕ ಸೃಷ್ಟಿಸಿದೆ. ಹಂದಿ, ಹಕ್ಕಿ ಜ್ವರ, ನಿಫಾ, ಹೆಚ್ 1 ಎನ್ 1 ಜ್ವರ ದಾಟಿದ ವಿಶ್ವಕ್ಕೆ ಸದ್ಯ ಕೊರೊನಾ ಭೀತಿ ಎದುರಾಗಿದೆ. ಇದಕ್ಕೆ ಸರಾಸರಿ 120 ರಾಷ್ಟ್ರಗಳು ಹೆಣಗಾಡುತ್ತಿವೆ. ಭಾರತ ಕೂಡ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿದೆ. ಅಷ್ಟಕ್ಕೂ ಇಡೀ ವಿಶ್ವಕ್ಕೆ ಮಾದರಿಯಾಗುವಂತೆ ಕೇರಳ ಕೊರೊನಾ ವಿರುದ್ಧ ಸೆಣಸಾಡುತ್ತಿರುವ ರೀತಿ ಹಾಗೂ ತಯಾರಿ ರೋಚಕ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸದ್ದಿಲ್ಲದೇ ಶುರುವಾದ ಸೋಂಕು ಪತ್ತಿಯಾದ ಮೊದಲ ವಾರವೇ ಡ್ರ್ಯಾಗನ್ ರಾಷ್ಟ್ರ ನಲುಗು ಹೋಗಿತ್ತು. ಅದೇ ಜನವರಿ ತಿಂಗಳಲ್ಲಿ ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. 2019 ಡಿ. ಕೊನೆ ವಾರದಲ್ಲಿ ಕೇರಳಕ್ಕೆ ಚೀನಾದ ವುಹಾನ್ ನಿಂದ ಬಂದ 3 ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಈ ವೇಳೆ ಕೇರಳ ಮಹಾ ಸಾಹಸವನ್ನೇ ಮಾಡಿತು. ಇದನ್ನ ಕಂಡು ದೇಶವೇ ಬೆರಗಾಗಿಬಿಟ್ಟಿದೆ. ಅದುವೇ ಕೇರಳ ಇಟ್ಟ ಧಿಟ್ಟ ಹೆಜ್ಜೆ ಕಾಂಟ್ಯಾಕ್ಟ್ ಟ್ರೇಸಿಂಗ್. ಆ ಮೂಲಕ ಯುದ್ಧ ಸಾರಿದ ಕೇರಳ ವೈರಸ್ ವಿರುದ್ಧ ಯಶಸ್ವಿ ಸೂತ್ರ ಬಳಕೆ ಮಾಡಿದೆ.
ಎಸ್… ಕೇರಳಕ್ಕೆ ಬಂದ 3 ವಿದ್ಯಾರ್ಥಿಗಳು ಚೀನಾದ ವುಹಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಇದೇ ನಗರದಿಂದ 3 ಜನ ತವರು ನಾಡು ಕೇರಳಕ್ಕೆ ಆಗಮಿಸಿದ್ದರು. ಇವರು ಆಗಮಿಸಿ 6 ದಿನಗಳ ನಂತರ ಕೊರೊನಾ ದೃಢಪಟ್ಟಿತ್ತು. ಆದರೆ ಇದಕ್ಕೆ ಎದೆ ಗುಂದದ ಕೇರಳ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಚೇತರಿಸಿಕೊಂಡು 3 ಜನ ಮನೆ ಸೇರಿದರು. ಅಷ್ಟಕ್ಕೂ ಮಹಾಮಾರಿಯನ್ನು ಓಡಿಸಲು ಕೇರಳ ಮಾಡಿದ ಸೂತ್ರಗಳನ್ನು ನೋಡೋಣ.

ಕೊರೊನಾದಿಂದ ಕೇರಳ ಸರ್ಕಾರ ಆತಂಕಗೊಂಡಿತ್ತು. ಆದರೆ ಅಸಮಾನ್ಯ ಸವಾಲನ್ನು ಧೈರ್ಯವಾಗಿ ತೆಗೆದುಕೊಂಡ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಾಜಾ ಅವರು ರಾಜ್ಯ ವಿಪತ್ತು ಘೋಷಿಸಿದರು. ತತಕ್ಷಣವೇ ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಮಾಡಲಾಯಿತು, ಜನಜಾಗೃತಿ ಮೂಡಿಸಲಾಯಿತು. ಜನರು ಗುಂಪು ಸೇರದಂತೆ ಮನವಿ ಮಾಡಲಾಯಿತು. ಮದುವೆ ಇತರೆ ಕಾರ್ಯಕ್ರಮ ಮುಂದೂಡಲಾಯಿತು. ಆ ಮೂಲಕ ಸೋಂಕು ಹರಡದಂತೆ ಜನ ಜಾಗೃತಿ ಮೂಡಿಸಲು 18 ತಂಡ ರಚಿಸಿದ್ರು ಆರೋಗ್ಯ ಸಚಿವೆ.

ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದ ಜನರನ್ನು ಸೂಕ್ತ ತಪಾಸಣೆಗೆ ಒಳಪಡಿಸುವುದರ ಜೊತೆಗೆ ಅಂಥವರು ಯಾರನ್ನ ಸಂಪರ್ಕ ಮಾಡಿದ್ದರು..? ಎಲ್ಲಿಗೆ ಹೋಗಿದ್ದರು..? ಯಾವ ಸ್ಥಳದಲ್ಲಿ ನೆಲೆಸಿದ್ದರು..? ಸಂಬಂಧಿಕರು ಯಾರು..? ಇಂತೆಲ್ಲಾ ವಿಚಾರಣೆಗಳನ್ನ ಕಾಂಟ್ಯಾಕ್ಟ್ ಟ್ರೇಸಿಂಗ್ ನ 18 ತಂಡ ಎಗ್ಗಿಲ್ಲದೇ ಮಾಡಲು ಶುರು ಮಾಡಿತ್ತು.

ಕೊರೊನಾ ಪತ್ತೆಯಾದ ಕೆಲವೇ ಗಂಟೆಯಲ್ಲಿ ಇಷ್ಟೇಲ್ಲಾ ಅಗ್ಯಗತ್ಯ ಕ್ರಮಗಳನ್ನು ಕೈಗೊಂಡರು ಆರೋಗ್ಯ ಸಚಿವೆ. ಅಷ್ಟೇ ಅಲ್ಲ ಸೋಂಕಿತರನ್ನು ಭೇಟಿ ಮಾಡಿದ್ದ 4,378 ಮಂದಿಯ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಿ ತಪಾಸಣೆ ಮಾಡಿಸಿದರು, ಇದರಲ್ಲಿ ಅನುಮಾನ ಬಂದ 388 ಜನರನ್ನ ಗೃಹ ಬಂಧನದಲ್ಲಿಟ್ಟು, ಕೊರೊನಾ ಲಕ್ಷಣಗಳು ಕಂಡು ಬಂದ 411 ಜನರಿಗೆ ದಿಗ್ಬಂದನ ಮಾಡಲಾಯಿತು, ಇದೇ ನೋಡಿ ಕೇರಳ ಕೊರೊನಾ ವಿರುದ್ಧ ಸಾರಿದ ಮಹಾನ್ ಯುದ್ಧ.
ಕೊರೊನಾ ಸೋಂಕು ದೇಹ ಸೇರಿದ ಸರಿಸುಮಾರು 14 ದಿನಗಳ ಬಳಿಕ ರೋಗ ಇರುವ ಲಕ್ಷಣಗಳು ಕಂಡುಬರುತ್ತವೆ. ಹೀಗಾಗಿ ಸರಿಸುಮಾರು 24 ದಿನಗಳ ವರೆಗೆ ಕೇರಳ ಸರ್ಕಾರ ಅನುಮಾನಾಸ್ಪದ ಜನರನ್ನು ತಪಾಸಣೆಗೆ ಒಳಪಡಿಸಿತು. ಈ ರೀತಿ ದಿಟ್ಟ ಹೆಜ್ಜೆ ಇಟ್ಟ ಕೇರಳ ಸರ್ಕಾರದಿಂದಾಗಿ 3 ಜನ ಚೇತರಿಸಿಕೊಂಡು ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಸಾವನ್ನು ಹೊತ್ತು ತಂದ ಕೊರೊನಾ ವಿರುದ್ಧ ಸೆಣೆಸಾಡಲು ಸವಾಲಾಗಿ ಸ್ವೀಕರಿಸಿ ಕೇರಳ ಅದನ್ನು ಹೊಡೆದು ಓಡಿಸಿದೆ, ಅದರೊಂದಿಗೆ ಯುದ್ಧ ಮಾಡಲು ಸಿದ್ಧಗೊಂಡಿದೆ. ಇಂತಹ ಕ್ರಮಗಳು ನಮ್ಮ ಸರ್ಕಾರಕ್ಕೂ ಪಾಠ. ದೇವರ ನಾಡಿನ ಇಂತಹ ಸೂತ್ರಗಳ ಬಗ್ಗೆ ತಿಳಿಯಲು ತೆಲಂಗಾಣ ಮತ್ತು ಇತರ ರಾಜ್ಯಗಳು ಕೇರಳದತ್ತ ಮುಖ ಮಾಡಿವೆ.

ಆದರೆ ಮೂರು ವಿದ್ಯಾರ್ಥಿಗಳು ಗುಣ ಮುಖರಾಗಿ ಮನೆ ಸೇರಿದ ಬಳಿಕ ಇಷ್ಟೆಲ್ಲಾ ಕಟ್ಟೆಚ್ಚರ ವಹಿಸಿದರೂ ಬಳಿಕ ಇಟಲಿಯಿಂದ ಬಂದ ಮೂರು ಜನ ಕೊರೊನಾ ಎನ್ನುವ ಪೆಡಂಭೂತವನ್ನ ಮೈಗಂಟಿಸಿಕೊಂಡು ಬಂದಿದ್ದಾರೆ. ಆದರೂ ಎದೆಗುಂದದ ಕೇರಳ ಸರ್ಕಾರ ಕಟ್ಟುನಿಟ್ಟಿನ ಕ್ರಗಳನ್ನು ಜಾರಿಗೆ ತಂದು ಕೊರೊನಾ ತಡೆಗೆ ಹೋರಾಟ ಮಾಡುತ್ತಿದೆ. ವಿದೇಶದಿಂದ ಬಂದವರು ತಪಾಸಣೆ ಮಾಡಲೇಬೇಕು. ಮಾಡಿಸಿಕೊಳ್ಳದವರ ವಿರುದ್ಧ ಕಠಿಣ ಕ್ರಮ ಜರಿಗಿಸುವುದಾಗಿ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಕೇರಳ ಇಷ್ಟೆಲ್ಲಾ ಕ್ರಮಗಳನ್ನ ತುರ್ತಾಗಿ ತೆಗೆದುಕೊಳ್ಳಲು ಕಾರಣವೇನು..? ಇಂಥಹ ಯೋಜನೆಗಳು ಕ್ಷಣಾರ್ಧದಲ್ಲಿ ಕೇರಳಕ್ಕೆ ಹೊಳೆದಿದ್ದು ಹೇಗೆ ಗೊತ್ತಾ..? ಅದುವೇ ಕೊರೊನಾ ಸೋಂಕುವಿನಂತೆ 2018ರಲ್ಲಿ ಹರಡಿದ ನಿಫಾ ರೋಗ ಕಲಿಸಿದ ಪಾಠದಿಂದ.

ನಿಫಾ ಸೋಂಕು ಕೇರಳಕ್ಕೆ ಕಲಿಸಿದ ಪಾಠವೇನು…?
ಕೇರಳ ಕೊರೊನಾ ಓಡಿಸಲು ಕಠಿಣ ಕ್ರಮಗಳನ್ನು ಪಾಲಿಸುತ್ತಿದೆ. ಇದರ ಗುಟ್ಟೇನು? ನಿಫಾ ದಿಂದ ಪಾಠ ಕಲಿತ ಕೇರಳ ಕಂಡುಕೊಂಡ ಕಾಂಟ್ಯಾಕ್ಟ್ ಟ್ರೇಸಿಂಗ್.
ಹೌದು… ಕೇರಳದಲ್ಲಿ 2018 ರಲ್ಲಿ ಮಾರಣಾಂತಿಕ ನಿಫಾ ಮಹಾಮಾರಿ ಕಾಣಿಸಿಕೊಂಡಿತ್ತು. ಭೀಕರ ವಿಪತ್ತು ಮೂಡಿಸಿತ್ತು. ಬಾವುಲಿ ಮತ್ತು ಪ್ರಾಣಿಗಳಿಂದ ಸೃಷ್ಟಿಯಾಗುವ ನಿಫಾ ಥೇಟ್ ಕೊರೊನಾ ನದಂತೆ ಮನುಷ್ಯ ನಿಂದ ಮನುಷ್ಯನಿಗೆ ಹರಡುತ್ತಿತ್ತು. ಈ ಮಹಾಮಾರಿಯನ್ನು ಓಡಿಸಲು ಆಗ ಕೇರಳ ಸರ್ಕಾರ ಇದೇ ಕಾಂಟ್ಯಾಕ್ಟ್ ಟ್ರೇಸಿಂಗ್ ಕ್ರಮ ಬಳಕೆ ಮಾಡಿತ್ತು. ನಿಫಾ ಸೋಂಕು ಹರಡದಂತೆ ಪಟ್ಟು ಬಿಡದೆ ಮಾಡಿದ ಕಾರ್ಯ ಕಾಂಟ್ಯಾಕ್ಟ್ ಟ್ರೇಸಿಂಗ್ ಯಶಸ್ವಿಯಾಗಿತ್ತು. ಸದ್ಯ ಇದೇ ಮಾರ್ಗವನ್ನು ಅನುಸರಿಸುತ್ತಿರುವ ಕೇರಳ ಸರ್ಕಾರ ಮಹಾಮಾರಿ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಕ್ರಮಗಳನ್ನು ತುರ್ತಾಗಿ ಜರುಗಿಸಿ ಸೋಂಕಿನ ವಿರುದ್ಧ ಯುದ್ಧಕ್ಕೆ ನಿಂತಿದೆ. ಈ ರೀತಿ ಸಜ್ಜುಗೊಳ್ಳುತ್ತಿರು ಕೇರಳ ಈ ದೇಶದ ಉಳಿದ ರಾಜ್ಯಗಳಿಗೂ ಮಾದರಿ ಸರಿ. ಇದೇ ರೀತಿ ಕ್ರಮಗಳನ್ನು ಇನ್ನುಳಿದ ರಾಜ್ಯಗಳು ಅನುಸರಿಸಿದರೆ ಕಣ್ಮರೆಯಲ್ಲಿ ಕಾಡುತ್ತಿರುವ ಕೊರೊನಾ ಪೆಡಂಭೂತವನ್ನು ಕಣ್ಣಿಗೆ ಕಾಣದಂತೆ ನಾಶ ಮಾಡಬಹುದು.
ಜಗತ್ತಿನಾದ್ಯಂತ 1.26 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲಾಗಿದೆ. ಅದರಲ್ಲಿ 4635 ಜನರು ಪ್ರಾಣ ಕಳೆದುಕೊಂಡಿದ್ದಾರೆ.ಭಾರತದಲ್ಲಿ ಇದುವರೆಗೂ ಒಟ್ಟು 73 ಕೊರೊನಾ ಕೇಸ್ಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸಿದೆ. ಅದರಲ್ಲಿ 56 ಜನ ಭಾರತೀಯರಿಗೆ ಹಾಗೂ 17 ಜನ ವಿದೇಶಿಯರು ಒಳಗೊಂಡಿದ್ದಾರೆ. ಮಹಾಮಾರಿ ಕೊರೋನಾ ವೈರಸ್ಗೆ ಕಲಬುರ್ಗಿಯಲ್ಲಿ 70 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇದು ದೇಶದಲ್ಲಿಯೇ ಕೊರೋನಾ ವೈರಸ್ನಿಂದ ಸಾವಿಗೀಡಾದ ಮೊದಲ ಪ್ರಕರಣವಾಗಿದೆ.
-ಸುನೀತಾ ಭಂಡಾರಿ

