ಕೊರೋನಾ ವೈರಸ್‌ನಿಂದ ಮಕ್ಕಳು ಸುರಕ್ಷಿತರೇ? WHO ಹೇಳಿದ್ದೇನು?

ಚೀನಾದಲ್ಲಿ ಕೊರೋನಾ ವೈರಸ್ ಮೊದಲಿ ಬಾರಿಗೆ ಕಾಣಿಸಿಕೊಂಡ ವುಹಾನ್ ನಗರದಲ್ಲಿ ನವೆಂಬರ್ 2019ರಿಂದ ಜನವರಿ 2020ರ ವರೆಗೆ ಒಂದೇ ಒಂದು ಮಗುವಿಗೂ ಕೊರೋನಾ ವೈರಸ್ ತಗುಲಿಲ್ಲ.

ಚೀನಾದಾದ್ಯಂತ ಒಟ್ಟು 1,099 ಕೋರನಾ ವೈರಸ್ ಪೀಡಿತ ಜನರ ಅಧ್ಯಯನ ನಡೆಸಲಾಗಿದ್ದು, ಈ ಪೈಕಿ, ಶೇ. 0.9 ರಷ್ಟು ಮಾತ್ರ ಒಂಬತ್ತು ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವೈರಸ್‌ ತಗುಲಿದೆ ಎಂದು ತಿಳಿದುಬಂದಿದೆ.

ಇದುವರೆಗಿನ ಸಂಶೋಧನೆಗಳ ಪ್ರಕಾರ, ಮಕ್ಕಳಿಗೂ ಕೊರೋನಾ ವೈರಸ್ ತಗುಲುತ್ತದೆ. ಆದರೆ ವಯಸ್ಕರಂತೆ ಅವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಮಕ್ಕಳು ವಯಸ್ಕರಂತೆ ಅನಾರೋಗ್ಯಕ್ಕೀಡಾಗುವುದಿಲ್ಲ. ಪೂರ್ಣ ಪ್ರಮಾಣದ ಮಾಹಿತಿ ಗೊತ್ತಿಲ್ಲದ ಕಾರಣಗಳಿಂದಾಗಿ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಹೇಳಿದ್ದಾರೆ.

ಮಕ್ಕಳಲ್ಲಿ ಕೊರೋನಾ ವೈರಸ್ ಎದುರಿಸುವ ರೋಗ ನಿರೋಧಕ ಶಕ್ತಿ ಇರಬಹುದು. ಆದರೆ ಆ ಬಗ್ಗೆ ಇನ್ನು ಖಚಿತವಾಗಿ ತಿಳಿದುಬಂದಿಲ್ಲ ಎಂದಿದ್ದಾರೆ.

2003ರಲ್ಲಿ ಕಾಣಿಸಿಕೊಂಡ ಸಾರ್ಸ್-ಸಿಒವಿ-2 ಸಹ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights