ದಲಿತರಿಗೆ ಸೇರಬೇಕಿದ್ದ ಭೂಮಿ ಪರರ ಪಾಲು : ಫಲಾನುಭವಿಗಳಿಂದ ಹೋರಾಟ

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಕಂಪ್ಲಿ ಹೋಬಳಿ ಹಂಪಾದೇವನಹಳ್ಳಿ ಗ್ರಾಮದ ಸರ್ಕಾರಿ ಭೂಮಿ ಸರ್ವೇ ನಂಬರ್ 3b2 125.22 ಎಕರೆಗಳಿದ್ದು ಸದರಿ ಕೆಲ ಎಕರೆಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ದಲಿತ ಕುಟುಂಬಗಳು 40 ವರ್ಷಗಳಿಂದ ಭೂಮಿಯನ್ನು ಅಭಿರುದ್ಧಿಪಡಿಸಿಕೊಂಡು ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದು ಪಟ್ಟಕ್ಕಾಗಿ 57 ಅರ್ಜಿ ಹಾಕಿ, ಹಕ್ಕಿಗಾಗಿ ಕರ್ನಾಟಕ ಜನಶಕ್ತಿ, ಕರ್ನಾಟಕ ಮಾದಿಗ‌ ರಕ್ಷಣಾ ವೇದಿಕೆ, ಮಹಿಳಾ ಮುನ್ನಡೆ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಘಟಕಗಳ ನೆರವು ಪಡೆದು ಹೋರಾಟ ನಡೆಸಲಾಗುತ್ತಿವೆ.

ಹೋರಾಟದ ಕಾರಣ ಇಷ್ಟೇ ಇಡೀ125 ಎಕರೆಯಲ್ಲಿ ಕೆಲವೇ ಎಕರೆಗಳು ದಲಿತ ಕುಟುಂಬಗಳು ಕೃಷಿ ಮಾಡುತ್ತಿರುವ ಸಂದರ್ಭದಲ್ಲಿ ಕುತಂತ್ರ, ಭ್ರಷ್ಟ ಅಧಿಕಾರಿಗಳ ತಪ್ಪು ವರದಿಯಿಂದ ದಲಿತ ಕುಟುಂಬಗಳು ಕೃಷಿ ಮಾಡುತ್ತಿರುವ ಭೂಮಿಯಲ್ಲಿ ಸರ್ಕಾರಿ ಯೋಜನೆಗಳನ್ನು ತಂದು ಹಾಕಲಾಗಿದೆ.

ಇದನ್ನು ಪ್ರತಿಭಟಿಸಿ ನಮ್ಮ ಸಂಘಟನೆಗಳು ಸತತ 5 ವರ್ಷಗಳಿಂದ ಭೂ ರಹಿತ ಕುಟುಂಬಗಳ ನೆರವಿಗೆ ಧಾವಿಸಿದ್ದು ಅಕ್ರಮಗಳ ದಾಖಲೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅಕ್ರಮಗಳ ತನಿಖೆ ನಡಸಿ ಭೂ ರಹಿತ ದಲಿತ ಕುಟುಂಬಗಳಿಗೆ ಭೂಮಿಯನ್ನು ನ್ಯಾಯ ಸಮ್ಮತವಾಗಿ ಕಾನೂನು ಬದ್ದವಾಗಿ ದೊರಕಿಸಿಕೊಡುವ ನಿಟ್ಟಿನಲ್ಲಿ ತಾಲೂಕು ಕಂದಾಯ,ಸರ್ವೇ ಅಧಿಕಾರಿಗಳ ನೆರವನ್ನು ಪಡೆದು ಇಂದು 19/12/2019 ರಂದು ಸದರಿ ಈ ಪೈಕಿಯ ಜಮೀನುನಲ್ಲಿ ಕೆ.ಸಿದ್ದಪ್ಪ ತಂದೆ ಮಲ್ಲಪ್ಪ ಅವರು ಸುಮಾರು 40 ವರ್ಷಗಳಿಂದ ಮೇಲ್ ಪಟ್ಟು ಕೃಷಿ ಬೆಳೆ ಮಾಡಿಕೊಂಡು ಬಂದಿರುತ್ತಾರೆ.

ಇದರ ಪರಿಣಾಮವಾಗಿ 1986-2007 ರ ವರೆಗೆ ಪಹಣಿಯಲ್ಲಿ ಬಂದಿರುತ್ತಾರೆ. ಇದರ ನಂತರ ಸದರಿ ಯವರನ್ನು ಪಹಣಿಯಿಂದ ಕೈ ಬಿಟ್ಟಿರುತ್ತಾರೆ ಇದಕ್ಕೆ ಕಾರಣ ಗೊತ್ತಿಲ್ಲ. ಆದರು ಸಹ ಸದರಿ ಯವರು‌ ಭೂಮಿಯಲ್ಲಿ ಉಳುಮೆ ಮಾಡುವುದನ್ನು ಬಿಟ್ಟಿಲ್ಲ‌. ಈಗಲೂ ಸದರಿ 5 ಎಕರೆ ಜಮೀನಿನಲ್ಲಿ ಭತ್ತದ ಬೇಳೆ ಇರುತ್ತದೆ‌.

ಈ ವಾಸ್ತವ ಅಂಶವನ್ನು ತಿಳಿಯಲು ಮಾನ್ಯ ಸಹಾಯಕ ಆಯುಕ್ತರು ಹೊಸಪೇಟೆ ಇವರ ಆದೇಶದ ಮೇರಿಗೆ ಮಾನ್ಯ ತಹಶಿಲ್ದಾರ್ ಕಂಪ್ಲಿ ಇವರು ಸಹಾಯಕ ನಿರ್ದೇಶಕರು ಭೂ ಸರ್ವೆ ಇಲಾಖೆಯ ಪರಿ ವೀಕ್ಷಕರಿಗೆ ಆದೇಶ ನೀಡಿರುತ್ತಾರೆ. ಇವುಗಳ ಆದಾರ ಇಟ್ಟುಕೊಂಡು ತಾಲೂಕು ಸರ್ವೆಯವರು ಹಾಗೂ ಹಂಪಾದೇವನ ಹಳ್ಳಿ ಗ್ರಾಮದ ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿಯವರು ಕಂಪ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಕೆ.ಸಿದ್ದಪ್ಪ ತಂದೆ ಮಲ್ಲಪ್ಪ ಇವರು ಮಾಡುತ್ತಿರುವ ಜಮೀನಿನ ಸ್ಥಳಕ್ಕೆ ಭೇಟಿ ಕೊಟ್ಟು ಪೈರಿನ ಮದ್ಯೆಯೇ ಸರ್ವೇ ನಡೆಸಿ ಗಡಿ ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ಚನ್ನಮ್ಮ, ಯಲ್ಲಮ್ಮ. ಸಿ, ಸಿದ್ದಪ್ಪ ಟೈಲರ್, ಕಾಡು ಸಿದ್ದಪ್ಪ, ಬಸಪ್ಪ, ಹನುಮಂತಪ್ಪ, ಶಾಂತಪ್ಪ, ಧನಂಜಯ, ಸ್ಥಳೀಯ ಗ್ರಾಮಸ್ಥರು ಇದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights