ನಂಬರ್ ಒನ್ ನಾಯಕಿ ಪಟ್ಟ ಸಿಕ್ಕ ಕರ್ನಾಟಕದ ನಟಿ ಯಾರು ಗೊತ್ತಾ..?
ಸಿನಿಮಾರಂಗದಲ್ಲಿ ಎಲ್ಲಾ ನಟಿಯರಿಗಿಂತಲೂ ನಂಬರ್ ಒನ್ ಸ್ಥಾನದಲ್ಲಿ ಇರಬೇಕು ಅನ್ನೋದು ಪ್ರತೀಯೊಬ್ಬ ನಟಿಯ ಆಸೆ. ಆದರೆ ಈ ರೇಸ್ ನಲ್ಲಿ ಅದೇಷ್ಟೇ ಜನರಿರಲಿ ನಂಬರ್ ಒನ್ ಸ್ಥಾನ ಒಲಿಯುವುದು ಕೇವಲ ಒಬ್ಬರಿಗೆ ಮಾತ್ರ.
ಹಾಗಾದ್ರ ಸಿನಿ ರಂಗದಲ್ಲಿ ಯಾರು ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ ಅನ್ನೋದಕ್ಕೆ ತಾವು ಥಟ ಅಂಥ ರಶ್ಮಿಕಾ ಮಂದಣ್ಣ ಎನ್ನಬಹುದು. ಹೀಗಂದುಕೊಂಡರೆ ಅದು ನಿಮ್ಮ ತಿಳುವಳಿಕೆ ತಪ್ಪು. ಯಾಕಂದ್ರೆ ನಂಬರ್ ಒನ್ ನಟಿಯ ಸ್ಥಾನ ಪಡೆಯುವ ರೇಸ್ ನಲ್ಲಿ ರಶ್ಮಿಕಾ ಇದ್ದಾರೆಯೇ ಹೊರತು ಅವರೇ ನಂಬರ್ ಒನ್ ಸ್ಥಾನದಲಿಲ್ಲ.
ಇನ್ಯಾರು? ಅನುಷ್ಕಾ ಶೆಟ್ಟಿ ಇರಬಹುದಾ..? ಇಲ್ಲಾ ಅವರು ಕೂಡ ಈ ರೇಸ್ ನಲ್ಲಿದ್ದಾರೆ ಹೊರತು ಅವರು ಕೂಡ ನಂಬರ್ ಒನ್ ನಟಿಯಲ್ಲ. ಹಾಗಾದ್ರೆ ಯಾರು..? ಸದ್ಯ ತೆಲುವು ಚಿತ್ರರಂಗದ ನಂಬರ್ ಒನ್ ನಾಯಕಿ ಯಾರು ಎಂಬುದು ಬಹಿರಂಗವಾಗಿದೆ.ತೆಲುಗು ಸಿನಿರಂಗದ ನಂಬರ್ ನಟಿ ಕರ್ನಾಟಕದವರೇ. ಆದರೆ, ಅದು ರಶ್ಮಿಕಾ ಮಂದಣ್ಣ ಅಲ್ಲ, ಅನುಷ್ಕಾ ಶೆಟ್ಟಿನೂ ಅಲ್ಲ. ಮತ್ಯಾರು..?ಸದ್ಯ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಂಬರ್ ನಟಿ ಪೂಜಾ ಹೆಗ್ಡೆಯಂತೆ. ದೊಡ್ಡ ದೊಡ್ಡ ಬ್ಯಾನರ್ನ ಚಿತ್ರಗಳಲ್ಲಿ ಇವರಿಗೆ ಅವಕಾಶ ಕೈಬೀಸಿ ಕರೆಯುತ್ತಿದೆ.
ತನಗೆ ನಂಬರ್ ಒನ್ ನಾಯಕಿ ಪಟ್ಟ ಸಿಕ್ಕ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ಈ ವಿಚಾರ ತಿಳಿದು ನನಗೆ ತುಂಬಾ ಸಂತಸವಾಗಿದೆ. ಇದು ಹೀಗೆಯೆ ಮುಂದುವರೆಯಲಿ ಎಂದು ಆಶಿಸುತ್ತೇನೆ, ಬಾಲಿವುಡ್ನಲ್ಲೂ ನಂಬರ್ 1 ನಾಯಕಿ ಆಗುವ ಆಸೆ ನನಗಿದೆ ಎಂದಿದ್ದಾರೆ.ಸದ್ಯ ಅಲ್ಲು ಅರ್ಜುನ್ ಜೊತೆಗಿನ ಅಲಾ ವೈಕುಂಟಪುರಂಲೋ ಸಿನಿಮಾದ ಬಹುದೊಡ್ಡ ಹಿಟ್ ನಂತರ ಅಖಿಲ್ ನಾಗಾರ್ಜುನ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಜುಲರ್ ಹಾಗೂ ಪ್ರಭಾಸ್ ಅವರ ಮುಂದಿನ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮೂಲತಃ ಕರ್ನಾಟಕದ ಮಂಗಳೂರು ಮೂಲದವರು. ಆದರೆ, ಅವರು ಬೆಳೆದಿದ್ದು ಮುಂಬೈನಲ್ಲಿ.