ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದವರು ಯಾರು? FactCheck
ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಬೈಕ್‍ನಲ್ಲಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ನಂತರ ಆತನನ್ನು ಬಂಧಿಸಲಾಗಿದೆ.
ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಿಸಿಟಿವಿ ದೃಶ್ಯದ ತುಣುಕನ್ನು ಭಾರತದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅಪ್ರಾಪ್ತ ಬಾಲಕಿಯರ ಗುಂಪಿನ ಬಳಿ ತಲೆಗೆ ಟೋಪಿ ಧರಿಸಿದ ಬೈಕ್‍ನಲ್ಲಿರುವ ವ್ಯಕ್ತಿಯನ್ನು ಈ ತುಣುಕಿನಲ್ಲಿ ತೋರಿಸಲಾಗಿದೆ. ಆತ ಅಲ್ಲಿ ಒಬ್ಬರ ನಂತರ ಇನ್ನೊಬ್ಬರಿಗೆ ಲೈಂಗಿಕ ಕಿರುಕುಳ ಕೊಡಲು ಆರಂಭಿಸುತ್ತಾನೆ. ಈ ವೀಡಿಯೊ ಮೂಲಕ ಟ್ವಿಟರ್ ಮತ್ತು ಫೇಸ್‍ಬುಕ್‍ನ ಜಾಲತಾಣಿಗರು ಮುಸ್ಲೀಮರ ವಿರುದ್ಧ ಕೋಮು ಆರೋಪ ಮಾಡುತ್ತಿದ್ದಾರೆ.
ಈ ಘಟನೆ ಪಾಕಿಸ್ತಾನದ ಪಂಜಾಬ್ ಜಿಲ್ಲೆಯದು ಎಂದು ಬೂಮ್ ಕಂಡುಹಿಡಿದಿದ್ದು, ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದಿದೆ. ಈ ಘಟನೆಗೆ ಕೋಮುವಾದಕ್ಕೆ ತಿರುಚಲು ಪ್ರಯತ್ನಿಸಿದ ಪೋಸ್ಟ್ ಕಾರ್ಡ್ ಸುದ್ದಿ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಮನಸ್ಸಿಗೆ ಘಾಸಿಗೊಳಿಸುವಂಥ ಆ ವಿಡಿಯೊ ತುಣುಕನ್ನು ಇಲ್ಲಿ ಸೇರಿಸದಿರಲು ನಾವು ನಿರ್ಧರಿಸಿದ್ದೇವೆ.

ಈ ವಿಡಿಯೊ ದೃಶ್ಯ ತುಣುಕು ಫೇಸ್‍ಬುಕ್‍ನಲ್ಲಿಯೂ ವೈರಲ್ ಆಗಿದೆ. ಅದರೊಂದಿಗೆ ಯಾವುದೇ ನೇರ ಸುಳ್ಳು ನಿರೂಪಣೆ ಇಲ್ಲವಾದರೂ, ಅಪರಾಧಿ ಒಬ್ಬ ಮುಸ್ಲಿಂ ಎಂಬ ಅಂಶವನ್ನು ಒತ್ತಿಹೇಳುವ ಅಡಿಬರಹದ ಜೊತೆ ಇದನ್ನು ಭಾರತದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ಘಟನೆಯ ಸುದೀರ್ಘ ವೀಡಿಯೊವನ್ನು ರಿಟ್ವೀಟ್ ಮಾಡಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಹೆಚ್ಚಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಅದರ ಸ್ಕ್ರೀನ್‍ಶಾಟ್ ಕೆಳಗೆ ಇದೆ.

ಪೊಲೀಸರು ಆರೋಪಿಯ ಗುರುತು ಬಹಿರಂಗಪಡಿಸಿಲ್ಲ. ಈ ಘಟನೆ ಡೇರಾಗಾಜಿಖಾನ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಟ್ವಿಟ್ಟರ್ ಬಳಕೆದಾರರ ಪ್ರಕಾರ, ಈ ಪ್ರದೇಶದಲ್ಲಿನ ವಾಟ್ಸಪ್‍ನಲ್ಲಿ ಪೊಲೀಸರು ಸುದ್ದಿ ನೀಡಿದ ನಂತರ ಕ್ರಮ ತೆಗೆದು ಕೊಳ್ಳಲು ನಿರಾಕರಿಸಿದರು ಎಂದು ವೀಡಿಯೊ ವೈರಲ್ ಆಗಿದೆ .

ನಂತರದ ಟ್ವೀಟ್‍ನಲ್ಲಿ ಪಂಜಾಬ್ ಪೊಲೀಸರು ಜೈಲು ಸರಳಿನ ಹಿಂದೆ ಇದ್ದಆರೋಪಿಯ ಚಿತ್ರವನ್ನು ಹಂಚಿಕೊಂಡಿದ್ದು, ಅವನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.

