“ಬೆಂಗಳೂರು ಮಗ್ಗುಲಲ್ಲಿದ್ದರು ಅಲ್ಲಿನ ವಾಸಿಗಳಿಗೆ ಮೂಲಭೂತ ಸೌಕರ್ಯ ಮಾತ್ರ ಮರೀಚಿಕೆ”

ದೇಶದ ಪ್ರತಿಯೊಬ್ಬ ನಾಗರೀಕನಿಗು ಮೂಲಭೂತ ಸೌಕರ್ಯ ಕಡ್ಡಾಯವಾಗಿ ದೊರೆಯಬೇಕು ಎಂಬುದು ಸಂವಿಧಾನದ ಮೂಲ ಆಶಯವಾಗಿದೆ. ಆದರೆ ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಬನ್ನೇರುಘಟ್ಟ ಸಮೀಪದ ಗೊಲ್ಲಹಳ್ಳಿ ಕಾಲೋನಿ ವಾಸಿಗಳಿಗೆ ಮಾತ್ರ ಮೂಲಭೂತ ಸೌಕರ್ಯಗಳು ಇನ್ನೂ ದೊರೆಯದಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಅಲ್ಲಿ ಸುಮಾರು 500ಕ್ಕೂ ಅಧಿಕ ಕುಟುಂಬಗಳು ನೆಲೆಸಿ ಜೀವನ ನಡೆಸುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ನಿಲ್ಲಲು ಸೂರಿಲ್ಲವಾಗಿದೆ. ಇಂದಿಗೂ ಬಹುತೇಕರು ಗುಡಿಸಲುಗಳಲ್ಲೇ ವಾಸ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ತಗಡು ಶೀಟುಗಳ ನಡುವೆ ಶೌಚಕ್ಕೆ ಕೂರುವಂತಾಗಿದೆ.

ಕೂಲಿ ಮಾಡಿ ಜೀವನ ನಡೆಸುವ ಮುಗ್ದ ಜನ ಇಂದಿಗೂ ಮುರುಕಲು ಗುಡಿಸಲುಗಳಲ್ಲೇ ವಾಸ ಮಾಡುತ್ತಿದ್ದಾರೆ.‌ ಸರ್ಕಾರ ಮಾತ್ರ ಬಡವರಿಗೆ ಆಶ್ರಯ ಮನೆ ನಿರ್ಮಾಣಕ್ಕೆ ಕೋಟಿ ಕೋಟಿ ವ್ಯತಿಸುತ್ತಿದೆ. ಬಯಲು ಮುಕ್ತ ಶೌಚಾಲಯದ ಬಗ್ಗೆ ಸರ್ಕಾರ ಅರಿವು ಮೂಡಿಸಿದರೆ ಸಾಲದು ಸೂಕ್ತ ಸೌಲಭ್ಯ ಕಲ್ಪಿಸಬೇಕು. ಆದ್ರೆ ಇಲ್ಲಿನ ವಾಸಿಗಳು ಆನೇಕ ಬಾರಿ ನಿವೇಶನಗಳಿಗೆ ಹಕ್ಕುಪತ್ರ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇಲ್ಲಿಯವರೆಗೆ ಯಾರಿಗೂ ಹಕ್ಕುಪತ್ರ ವಿತರಣೆಯಾಗಿಲ್ಲ.

ಹಕ್ಕುಪತ್ರ ಇಲ್ಲದೆ ಇರುವುದರಿಂದ ಅನಧಿಕೃತ ಮನೆಗಳು ಎಂದು ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಸಹ ನೀಡುತ್ತಿಲ್ಲ. ಕುಡಿಯಲು ಶುಧ್ಧ ನೀರಿನ ವ್ಯವಸ್ಥೆ ಇಲ್ಲವಾಗಿದೆ. ರಸ್ತೆ ಒಳ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ವಿದ್ಯುತ್ ಸಂಪರ್ಕ ಅಹ ಬಹುತೇಕ ಮನೆಗಳಿಗೆ ಕಲ್ಪಿಸಿಲ್ಲ ಎನ್ನುವ ಇಲ್ಲಿನ ವಾಸಿಗಳು ಚುನಾವಣೆ ಸಮಯದಲ್ಲಿ ಬರುವ ನಾಯಕರುಗಳು ಇಂದ್ರ ಚಂದ್ರನ ಸ್ವರ್ಗದ ಆಸೆ ತೋರಿಸಿ ಓಟು ಹಾಕಿಸಿಕೊಳ್ತಾರೆ ಬಳಿಕ ಯಾವುದೇ ಸೌಲಭ್ಯ ಕೊಡಿಸುವುದಿಲ್ಲ. ಪ್ರಶ್ನಿಸಿದ್ರೆ ದಬ್ಬಾಳಿಕೆ ಮಾಡ್ತಾರೆ ಎಂದು ರಾಜಮ್ಮ, ಅನಸೂಯಮ್ಮ ಸೇರಿದಂತೆ ಸ್ಥಳೀಯ ವಾಸಿಗಳು ಆಳಲನ್ನು ತೋಡಿಕೊಂಡಿದ್ದಾರೆ.

ಆದ್ರೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾತ್ರ ಗೊಲ್ಲಹಳ್ಳಿ ಕಾಲೋನಿ ಜಾಗ ಮೂಲತಃ ಸರ್ಕಾರಿ ಜಾಗವಾಗಿದೆ. ಕಂದಾಯ ಇಲಾಖೆಗೆ ಸುಪರ್ದಿನಲ್ಲಿ ಇದೆ. ಹಾಗಾಗಿ ಪಂಚಾಯ್ತಿ ವತಿಯಿಂದ ಯಾವುದೇ ದಾಖಲೆ ನೀಡಲು ಬರುವುದಿಲ್ಲ. ಆದರು ಅಲ್ಲಿನ ವಾಸಿಗಳಿಗೆ ಕುಡಿಯುವ ನೀರು ಮತ್ತು ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ಆಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಇಲ್ಲಿನ ವಾಸಿಗಳು 94 ಸಿಸಿ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಂಡರೆ ಮಾತ್ರ ಪಂಚಾಯ್ತಿ ವತಿಯಿಂದ ಇತರೆ ಸೌಕರ್ಯ ಒದಗಿಸಲು ಸಾಧ್ಯ ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿ ರವಿ ಕುಮಾರ್ ತಿಳಿಸಿದ್ದಾರೆ.

ಕಾನೂನು ಕಟ್ಟಳೆಗಳು ಆದೇನೆ ಇರಲಿ ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಜನರ ಸ್ಥಿತಿ ಹೀಗಾದರೆ ಗಡಿ ಬಾಗದ ಜನರ ಸ್ಥಿತಿ ಹೇಗಾಗಬೇಡ. ಹಾಗಾಗಿ ಇಲ್ಲಿನ ಮುಗ್ದ ಜನರಿಗೆ ನಿಲ್ಲಲು ಸೂರು ಮತ್ತು ಸೌಲಭ್ಯ ಕಲ್ಪಿಸಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ. ಇನ್ನಾದರು ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಬಡಪಾಯಿ ಜನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇನ್ನಾದರು ಕ್ರಮ ವಹಿಸಲಿ ಎಂಬುದು ನಮ್ಮ ಆಶಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights