ರಾಜ್ಯ ಬಜೆಟ್ ಗೆ ಭಾರೀ ಟೈಟಲ್ ಕೊಟ್ಟ ವಿಪಕ್ಷ ನಾಯಕರು – ಯಾರು? ಏನೇಳಿದ್ರು..?

ಬಹುನಿರೀಕ್ಷಿತ ರಾಜ್ಯದ ಬಜೆಟ್ ಮಂಡನೆಯಾಗುತ್ತಿದ್ದಂತೆ ವಿಪಕ್ಷ ನಾಯಕರು ಬಜೆಟ್ ಬಗ್ಗೆ ಖಾರವಾಗಿ ಟೀಕಿಸಿದ್ದಾರೆ. ಹಾಗಾದ್ರೆ ಯಾರು..? ಏನೇಳಿದ್ರು..? ಅನ್ನೋದರ ಸವಿಸ್ತಾರ ಇಲ್ಲಿದೆ ನೋಡಿ.

ಉಪ್ಪು-ಖಾರ ಇಲ್ಲದ, ದಿಕ್ಕು-ದೆಸೆ ಇಲ್ಲದ ಬಜೆಟ್ – ಡಿಕೆಶಿ ಟೀಕೆ

ರಾಜ್ಯ ಬಜೆಟ್ ಕುರಿತಾಗಿ ಮಾಜಿ ಸಚಿವ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಲ್ಲಿ ಉಪ್ಪುಖಾರ ಇರುತ್ತೆ. ಆದರೆ ಈ ಬಜೆಟ್ ನಲ್ಲಿ ಖಾರನೂ ಇಲ್ಲ ಶಕ್ತಿನೂ ಇಲ್ಲ. ಹುರುಪಿನಲ್ಲಿ ಸರ್ಕಾರ ಮಾಡಿದ್ರು ಅದರಂತೆ ಬಜೆಟ್ ಇಲ್ಲ, ಧ್ವನಿನೂ ಇಲ್ಲ, ಹಣನೂ ಇಲ್ಲ ಎಂದು ಟೀಕಿಸಿದ್ದಾರೆ.

ಪುಟ ತುಂಬಿಸಲು ಬಜೆಟ್ ಮಾಡಿದ್ದಾರೆ – ಪ್ರಿಯಾಂಕ ಖರ್ಗೆ

ಈ ಬಜೆಟ್ ನಲ್ಲಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ದೊರೆತಿಲ್ಲ. ಪುಟ ತುಂಬಿಸಲು ಬಜೆಟ್ ಮಾಡಿದ್ದಾರೆ. ಹೈದರಾಬ್ ಕರ್ನಾಟಕವನ್ನು ಕಲ್ಯಾಣ ಮಾಡುತ್ತಿದ್ದೇವೆ ಎಂಬುದು ನಾಮಕಾವಸ್ಥೆಗೆ ಮಾತ್ರ. ಈ ಸರ್ಕಾರದಲ್ಲಿ ಏನಾದ್ರು ಪಡಿಯಬೇಕು ಅಂದ್ರೆ ತೀವ್ರ ಹೋರಾಟ ಮಾಡಬೇಕಿದೆ ಎಂದು ಖಾರವಾಗಿ ನುಡಿದಿದ್ದಾರೆ.

ರಾಜ್ಯ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿಲ್ಲ – ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಇನ್ನೂ ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಮಾರ್ಗದಲ್ಲೇ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆರ್ಥಿಕವಾಗಿ ಮೋದಿ ಯಾವ ರೀತಿ ದೇಶಕ್ಕೆ ಕೊಡುಗೆ ಕೊಡುತ್ತೇನೆ ಎಂದಿದ್ದಾರೋ ಅದೇ ರೀತಿ ಕೊಡುತ್ತೇನೆ ಎಂದಿದ್ದಾರೆ. ನಮ್ಮ ರಾಜ್ಯ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿಲ್ಲ ಎಂದರು.

ಗೊಂದಲವಿರುವ ಬಜೆಟ್- ಯುಟಿ ಖಾದರ್ 

ಯಾವುದೇ ಸ್ಪಷ್ಟತೆ ಇಲ್ಲದ , ಗೊಂದಲವಿರುವ ಬಜೆಟ್ ಇದು. ಜನರನ್ನು ಕತ್ತಲಲ್ಲಿ ಇಡುವ ಬಜೆಟ್ ಇದಾಗಿದೆ. ಹಿಂದಿನ ಯೋಜನೆಗಳ ಬಗ್ಗೆ ಎಲ್ಲೂ ಉಲ್ಲೇಖ ಮಾಡಿಲ್ಲ. ಅನ್ನಭಾಗ್ಯ ಬಗ್ಗೆ ಪ್ರಸ್ತಾಪ ಮಾಡಿಲ್ಲ.  ಇದು ಜನರಿಗೆ ಬೇಕಾದ ಬಜೆಟ್ ಅಲ್ಲ ಎಂದಿದ್ದಾರೆ. ಜನವಿರೋಧಿ ಬಜೆಟ್ ಕಾಟಾಚಾರಕ್ಕೆ ಮಾಡಿದ ಬಜೆಟ್ ಆಗಿದೆ.

ರೈತರ ಕಣ್ಣಿಗೆ ಮಣ್ಣು ಎರಚುವ ಬಜೆಟ್ – ಈಶ್ವರ್ ಖಂಡ್ರೆ

ಅತ್ಯಂತ ನಿರಾಶಾದಾಯಕ ಬಜೆಟ್ ನೀರಸ ಬಜೆಟ್ ಇದಾಗಿದೆ. ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಆಗಿದೆ. ಅತೀವೃಷ್ಟಿಯ ಬೆಳೆ ನಷ್ಟ ಆಗಿದೆ, ಯಾವುದೇ ಪೂರಕ ಕಾರ್ಯಕ್ರಮಗಳಿಲ್ಲ. 10000 ಕೋಟಿ ಖೋತಾ ಇದೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹರ ಮಾಡಿದೆ. ಕೇಂದ್ರದ ತೆರಿಗೆ ಪಾಲು 3.54  ಇಳಿದಿದೆ. ನಮಗೆ ಬರಬೇಕಾದ ನ್ಯಾಯುತ ಪಾಲು ಬಂದಿಲ್ಲ. ಕಳೆದ ವರ್ಷ 12000 ಕೋಟಿ ಈ ವರ್ಷ 11000 ಕೋಟಿಗೆ ಕಡಿತ ಮಾಡಲಾಗಿದೆ. ಕೇಂದ್ರ 25000 ಕೋಟಿ ಕಡಿತ ಮಾಡಿ ನಮ್ಮ ಆರ್ಥಿಕತೆಗೆ ಧಕ್ಕೆ ಮಾಡಿದೆ.

ಇದರಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ – ಆರ್.ವಿ ದೇಶಪಾಂಡೆ  

ಪ್ರವಾಸೋದ್ಯಮ ಕುಸಿದು ಬಿದ್ದಿದೆ. ಕೈಗಾರಿಕೋದ್ಯಮ ಕುಸಿದು ಬಿದ್ದಿದೆ. ನಿರುದ್ಯೋಗ ಸಮಸ್ಯೆ ಇದೆ. ಕೈಗಾರಿಕಾ ಅಭಿವೃದ್ಧಿಗೆ, ಕೌಶಲ್ಯ ಅಭಿವೃದ್ಧಿಗೆ ಯಾವುದೇ ಹಣ ಇಟ್ಟಿಲ್ಲ. ಇದರಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ.

ಬಜೆಟ್ ನಲ್ಲಿ ಸ್ವಲ್ಪ ಬುಕ್ ಚಿಕ್ಕದು ಮಾಡಿದ್ದಾರೆ. ಅದು ಬಿಟ್ರೆ ವಿಶೇಷ ಏನಿಲ್ಲ – ಶಾಸಕ ಶಿವಲಿಂಗೇಗೌಡ

ಶಾಸಕ ಶಿವಲಿಂಗೇಗೌಡ ಮಾತನಾಡಿ, ಬಜೆಟ್ ನಲ್ಲಿ ಸ್ವಲ್ಪ ಬುಕ್ ಚಿಕ್ಕದು ಮಾಡಿದ್ದಾರೆ. ಅದು ಬಿಟ್ರೆ ವಿಶೇಷ ಏನಿಲ್ಲ. ಹೊಸ ಯೋಜನೆಗಳು, ಹೊಸ ಕಾರ್ಯಕ್ರಮಗಳನ್ನು ಕೋಡೋದ್ರಲ್ಲಿ ಭದ್ದತೆ ಇಲ್ಲ.

ಇದು ಸಪ್ಪೆ ಬಜೆಟ್ – ಎಂಬಿ ಪಾಟೀಲ್

ಇದು ಸಪ್ಪೆ ಬಜೆಟ್ ಅಂದಿದ್ದಾರೆ ಎಂಬಿ ಪಾಟೀಲ್, ಸಿಎಂ ಬಿಎಸ್ ವೈ ಕೇಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಡಂಗೂರ ಸಾರಿದ್ದಾರೆ.21000 ಕೋಟಿ ನೀರಾವರಿಗೆ ಮೀಸಲಿಟ್ಟಿದ್ದಾರೆ. ಎಲ್ಲಾ ಯೋಜನೆಗಳ ವೆಚ್ಚಗಳು 15000 ಕೋಟಿಗೂ ಹೆಚ್ಚಾಗಲಿದೆ. ಹೀಗಾಗಿ ಕೃಷ್ಣ ಮೇಲ್ದಂಡೆ ಯೋಜನೆಗೆ ಅನ್ಯಾಯವಾಗಿದೆ.ಗೋವಿಂದ ಕಾರಜೋಳ ಒಬ್ಬರು ಬಂಪ್ ಮಾಸ್ಟರ್.

ಇದು ಮುಖ್ಯಮಂತ್ರಿ ಬಜೆಟ್ ಅಲ್ಲ ಅಧಿಕಾರಿಗಳ ಬಜೆಟ್ – ಬಂಡೆಪ್ಪ ಕಾಶೆಂಪುರ್

ಇದು ಮುಖ್ಯಮಂತ್ರಿ ಬಜೆಟ್ ಅಲ್ಲ ಅಧಿಕಾರಿಗಳ ಬಜೆಟ್. ಡೀಸೆಲ್ ಪೆಟ್ರೋಲ್ ಬೆಲೆ ಏರಿಸಿ ಹೊರೆ ಏರಿದ್ದಾರೆ. ಶುಗರ್ ಫ್ಯಾಕ್ಟರಿ ಪುನಶ್ಚೇತಕ್ಕೆ ಯೋಜನೆಗಳಿಲ್ಲ. ನೀರಾವರಿ ಯೋಜನೆಗಳಿಲ್ಲ, ಯುವಕರಿಗೆ ಪ್ರೋತ್ಸಾಹ ನೀಡೋ ಬಜೆಟ್ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights