ಭಾನುವಾರ ಲಾಕ್‌ಡೌನ್; ಮಾಸ್ಕ್ ಧರಿಸದೆ ಹೊರಗೆ ಬಂದವರಿಗೆ ಭಾರಿ ದಂಡ!
ಭಾನುವಾರ ಲಾಕ್‌ಡೌನ್ ಇದ್ದರೂ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬಂದವರಿಗೆ ಬಿಬಿಎಂಪಿ ಮಾರ್ಷಲ್‌ಗಳು ದಂಡ ವಿಧಿಸಲಾಯಿತು.
ಬೆಂಗಳೂರಿನ ಪೂರ್ವ ವಲಯದ ಹೆಬ್ಬಾಳ ವಿಭಾಗದಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದವರಿಗೆ ಬಿಬಿಎಂಪಿ ಮಾರ್ಷಲ್ ಹಾಗೂ ಬೆಂಗಳೂರು ನಗರ ಪೊಲೀಸರು ದಂಡ ಹಾಕಿದರು.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾನುವಾರ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಿದ್ದರೂ ಜನರು ಲಾಕ್‌ಡೌನ್ ಪಾಲನೆ ಮಾಡಿಲ್ಲ.
ನಗರದ ಹಲವು ಕಡೆಗಳಲ್ಲಿ ಜನರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದರು. ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸರ್ಕಾರ ಬಿಬಿಎಂಪಿ ತಿಳಿಸಿದೆ.
ಹೀಗಿದ್ದರೂ ನಿಯಮಗಳನ್ನು ಪಾಲನೆ ಮಾಡಿದಿದ್ದ ಜನರಿಗೆ ದಂಡ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.