ರಂಗಯಾತ್ರೆ ಮುಗಿಸಿ ಇಹಲೋಹ ತ್ಯಜಿಸಿದ ಸುಭದ್ರಮ್ಮ ಮನ್ಸೂರು

ಕರ್ನಾಟಕದ ಹಿರಿಯ ರಂಗಭೂಮಿ ಕಲಾವಿದೆ, ಖ್ಯಾತ ಗಾಯಕಿ ಸುಭದ್ರಮ್ಮ ಮನ್ಸೂರ್ ನಿನ್ನೆ (ಬುಧವಾರ) ಮಧ್ಯರಾತ್ರಿ 11.30 ರ ಸುಮಾರಿಗೆ ತಮ್ಮ ರಂಗಪಯಣವನ್ನು ಮುಗಿಸಿ ಜೀವನದ ನಾಟಕಕ್ಕೆ ತೆರೆ ಎಳೆದಿದ್ದು, ಇತಿಹಾಸದ ಪುಟ ಸೇರಿದ್ದಾರೆ.

ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದ ಮನೆಯಲ್ಲಿ ವಾಸವಾಗಿದ್ದ 81 ವರ್ಷ ವಯಸ್ಸಿನ ಅವರು 11 ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೆ ಪರಿಚಯವಿದ್ದವರು ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದು, ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಬೆಳೆದು ಬಂದವರು, ಪೌರಾಣಿಕವಾಗಿ ರಕ್ತ ರಾತ್ರಿಯ ನಾಟಕದ ದ್ರೋಪದಿ ಪಾತ್ರ ಮತ್ತು ಸಾಮಾಜಿಕವಾಗಿ ಹೇಮರೆಡ್ಡಿ ಮಲ್ಲಮ್ಮನ ಪಾತ್ರ ಅಚ್ಚಳಿಯದೇ ಪ್ರೇಕ್ಷಕರ ಮನದಲ್ಲಿ ಎಂದೆಂದಿಗೂ ಇರುವಂತಹುದಾಗಿವೆ.

ಇನ್ನು ಅವರ ಸುಮಧುರ ಕಂಠದಿಂದ ವಚನಗಳ ಗಾಯನದಲ್ಲಿ ಮೂಡಿ ಬರುತ್ತಿದ್ದ ಅಕ್ಕಮಹಾದೇವಿಯ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಮತ್ತು ಹೇಮರೆಡ್ಡಿ ಮಲ್ಲಮ್ಮಳ ನಾಟಕದ ‘ಜಯವೆಂದು ಬೆಳಗುವೆ ಮಲ್ಲಿಕಾರ್ಜುನನೆ” ಹಾಡುಗಳು ಎಂದಿಗೂ ಕೇಳುಗರ ಕರ್ಣದಲ್ಲಿ ಗುನುಗುತ್ತಲೇ ಇರುತ್ತವೆಂದರೆ ಆಶ್ಚರ್ಯವಲ್ಲ.
ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದ ಅವರು ಸುಮಧುರ ಸುಗಮ ಸಂಗೀತದ ಹಾಡುಗಳು ಕೇಳದವರಿಲ್ಲ.
ಕಳೆದ ವರ್ಷದ ವರೆಗೂ ಅವರು ಮುಖಕ್ಕೆ ಬಣ್ಣಹಚ್ಚಿ ನಟನೆ ಮಾಡಿದವರು, 1939 ರಿಂದ ಆರಂಭವಾದ ಅವರ ಈ ಜಗತ್ತಿನ ಬದುಕಿನ ಪಯಣ 2020 ರಲ್ಲಿ ಕೊನೆಗೊಂಡಿದೆ.

ಹಂಪಿ ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

ಅವರ ಮನೆಯ ಬಳಿ ಪಾರ್ಥಿವ ಶರೀರವನ್ನು ಇಡಲಾಗಿದ್ದು ಇಂದು ಸಂಜೆ ಮಧ್ಯಾಹ್ನ 3 ಗಂಟೆಗೆ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರಘಾಟನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ರಂಗಮಂದಿರದಲ್ಲಿ ಪುತ್ಥಳಿ:

ಮೃತರ ದರ್ಶನ ಪಡೆದ ಬಳ್ಳಾರಿ ನಗರದ ಶಾಸಕ ಗಾಲಿ ಸೋಮಶೇಖರ ರೆಡ್ಡಿ. ಸುಭದ್ರಮ್ಮ ನಿಧನದಿಂದ ನಾಡಿನ ಸಾಂಸ್ಕøತಿಕ ವೈಭವವನ್ನು ಕಳೆದುಕೊಂಡತಾಗಿದೆ. ಅವರ ನೆನಪು ಸದಾ ಇರುವಂತೆ ನಗರದ ರಂಗಮಂದಿರದ ಆವರಣದಲ್ಲಿ ಸುಭದ್ರಮ್ಮ ಅವರ ಪುತ್ಥಳಿಯನ್ನು ಪ್ರತಿಷ್ಟಾಪಿಸಲಿದೆಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಅವರು ಜಿಲ್ಲೆಯ ಹಿರಿಯ ರಂಗಕಲಾವಿದೆ ಸುಭದ್ರಮ್ಮ ಅವರ ನಟನೆ ಮತ್ತು ಗಾಯನವನ್ನು ಸ್ಮರಿಸಿದ್ದಾರೆ.

ಅಲ್ಲದೆ ಹಂದ್ಯಾಳಿನ ಮಹಾದೇವತಾತ ಕಲಾ ಸಂಘದ ಪುರುಷೋತ್ತಮ ಅವರು ರಂಗಭುಮಿ ಪ್ರವೇಶ ಮಾಡುತ್ತಿದ್ದ ನಟ, ನಟಿಯರಿಗೆಲ್ಲ ದಾರಿ ದೀಪದಂತೆ ಅವರು ಮಾರ್ಗದರ್ಶಕರಾಗಿ ಎಲ್ಲರಿಗೂ ಒಂದು ರೀತಿ ಅಮ್ಮ ಎಂಬಂತೆ ಇದ್ದರೆಂದಿದ್ದಾರೆ.


ಇದನ್ನೂ ಓದಿಕನ್ನಡ ಚಿತ್ರರಂಗದಲ್ಲಿ ಶುರುವಾಗುತ್ತಿದೆ ಹೊಸ ಅಲೆ; ಚಿತ್ರರಂಗದ ಚಹರೆ ಬದಲಿಸುವುದೇ FUC

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights