ಕೊರೊನಾಗೆ ಔಷಧಿ ಕಂಡುಹಿಡಿದ ಬಾಬಾ ರಾಮ್‌ದೇವ್‌; ಪ್ರಚಾರ ನಿಲ್ಲಿಸಿ ಎಂದ ಕೇಂದ್ರ ಸರ್ಕಾರ

ಪತಂಜಲಿ ಬ್ರಾಂಡ್‌ನ ಬಾಬಾ ರಾಮದೇವ್ ಅವರ ಆಯುರ್ವೇದ ಸಂಸ್ಥೆಯು ಕೊರೊನಾಗೆ  ಕೊರೋನಿಲ್(Coronil) ಎಂಬ ಔಷಧ ಕಂಡು ಹಿಡಿದಿದ್ದೇವೆ ಎಂದು ಹೇಳಿಕೊಂಡಿದೆ. ಅಲ್ಲದೆ, ಕೊರೊನಿಲ್‌ ಔಷಧಿಯು ಕೊರೊನಾ ರೋಗವನ್ನು ಗುಣಪಡಿಸಬಲ್ಲ ಔಷಧಿಯಾಗಿದೆ ಎಂದು ಫೇಕ್‌ನ್ಯೂಸ್‌ ಫ್ಯಾಕ್ಟರಿ ಪೋಸ್ಟ್‌ ಕಾರ್ಡ್‌ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕೊರೋನಿಲ್ ಸೇರಿದಂತೆ ಕೊರೋನಾಗೆ ಔಷಧದ ಕಿಟ್ ಅನ್ನ ನಿನ್ನೆ ಬಾಬಾ ಅನಾವರಣಗೊಳಿಸಿದ್ದಾರೆ.
ಕೊರೊನಿಲ್‌ ಬಗ್ಗೆ ಪ್ರಚಾರ ಆರಂಭಿಸಿರುವ ಪತಂಜಲಿ ಆಯುರ್ವೇದ ಸಂಸ್ಥೆಗೆ ಕೇಂದ್ರ ಸರ್ಕಾರವು ಕೊರೋನಿಲ್ ಪ್ರಚಾರವನ್ನು ನಿಲ್ಲಿಸಬೇಕೆಂದು ಹೇಳಿದೆ. ಔಷಧವನ್ನು ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಸಿಕ್ಕ ಮೇಲಷ್ಟೇ ಪ್ರಚಾರ ಮಾಡಿ, ಅಲ್ಲಿಯವರೆಗೂ ಅದರ ಮಾರ್ಕೆಟಿಂಗ್ ಕೆಲಸ ಮಾಡುವಂತಿಲ್ಲ ಎಂದು ಆಯುಷ್ ಇಲಾಖೆ ನೋಟೀಸ್ ನೀಡಿದೆ.

ಔಷಧದ ಹೂರಣ (Constituents), ಸಂಶೋಧನೆಯ ವಿವರ, ಸಾಂಸ್ಥಿಕ ನೀತಿ ಸಮಿತಿ ಅನುಮೋದನೆ; ಸಿಟಿಆರ್​ಐ ನೊಂದಣಿ ಮತ್ತು ಸಂಶೋಧನ ಫಲಿತಾಂಶದ ದತ್ತಾಂಶ ಇತ್ಯಾದಿ ವಿವರಗಳನ್ನ ನೀಡುವಂತೆ ಪತಂಜಲಿ ಸಂಸ್ಥೆಗೆ ಸರ್ಕಾರ ತಿಳಿಸಿದೆ.

ಪತಂಜಲಿ ಸಂಸ್ಥೆಯ ಕೊರೋನಿಲ್ ಔಷಧಕ್ಕೆ ಪರವಾನಿಗೆ ಮತ್ತು ಅನುಮೋದನೆಯ ವಿವರಗಳನ್ನ ನೀಡುವಂತೆ ಉತ್ತರಾ ಖಂಡ್ ಸರ್ಕಾರದ ಪರವಾನಿಗೆ ಪ್ರಾಧಿಕಾರಕ್ಕೆ ಕೇಂದ್ರ ಆಯುಷ್ ಇಲಾಖೆ ಮನವಿ ಮಾಡಿದೆ.

“ಕೋವಿಡ್-19ಗೆ ಚಿಕಿತ್ಸೆ ನೀಡಲು ಆಯುರ್ವೇದ ಔಷಧ ತಯಾರಿಸಿರುವುದಾಗಿ ಪತಂಜಲಿ ಆಯುರ್ವೇದ ಸಂಸ್ಥೆ ಹೇಳಿಕೊಂಡಿದ್ದು ಮಾಧ್ಯಮಗಳ ಸುದ್ದಿಯಿಂದ ಗೊತ್ತಾಯಿತು. ಔಷಧ ತಯಾರಿಕೆಗೆ ವೈಜ್ಞಾನಿಕ ಅಧ್ಯಯನದ ವಿವರ ಆಯುಷ್ ಇಲಾಖೆಗೆ ಗೊತ್ತಾಗಿಲ್ಲ. ಆದ್ದರಿಂದ ಔಷಧದ ಹೆಸರು, ಹೂರಣ, ಸಂಶೋಧನೆ ನಡೆಸಿದ ಆಸ್ಪತ್ರೆ ಅಥವಾ ಸ್ಥಳ, ನೀತಿ ನಿಯಾವಳಿ, ಸ್ಯಾಂಪಲ್ ಪ್ರಮಾಣ, ಅಧ್ಯಯನ ಫಲಿತಾಂಶದ ದತ್ತಾಂಶ ಮೊದಲಾದ ವಿವರಗಳನ್ನ ಆದಷ್ಟೂ ಬೇಗ ಕಳುಹಿಸುವಂತೆ ತಿಳಿಸಿದ್ದೇವೆ. ಇವುಗಳನ್ನ ಇಲಾಖೆಯಿಂದ ಪರಿಶೀಲನೆ ಆಗುವವರೆಗೂ ಜಾಹೀರಾತು ನೀಡುವುದಾಗಲೀ, ಪ್ರಚಾರ ಮಾಡುವುದಾಗಲೀ ಬೇಡ” ಎಂದು ನೋಟಿಫಿಕೇಶನ್​ನಲ್ಲಿ ಆದೇಶಿಸಲಾಗಿದೆ.

Coronil: Patanjali claims Covid medicine 'Coronil'; Centre seeks ...
ನಿನ್ನೆ ಉತ್ತರಾಖಂಡ್​ನ ಹರಿದ್ವಾರದಲ್ಲಿರುವ ಪತಂಜಲಿ ಆಯುರ್ವೇದ ಸಂಸ್ಥೆಯ ಮುಖ್ಯಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಬಾಬಾ ರಾಮದೇವ್ ಅವರು ಕೊರೋನಾಗೆ ಕೊರೋನಿಲ್ ಎಂಬ ಔಷಧ ಕಂಡುಹಿಡಿದಿರುವುದಾಗಿ ಘೋಷಿಸಿದ್ದರು. ಕ್ಲಿನಿಕಲ್ ಕೇಸ್ ಸ್ಟಡಿ ಮಾಡಿದ್ದು ಎಲ್ಲಾ ರೋಗಿಗಳು ಏಳು ದಿನದೊಳಗೆ ಗುಣಮುಖಗೊಂಡರು. ಶೇ. 69ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಚೇತರಿಸಿಕೊಂಡರು ಎಂದು ರಾಮದೇವ್ ಈ ಔಷಧದ ಕ್ಲಿನಿಕಲ್ ಟ್ರಯಲ್​ನ ಮುಖ್ಯಾಂಶ ತಿಳಿಸಿದ್ದರು.

ಬಾಬಾ ರಾಮದೇವ್ ಹೇಳಿಕೊಂಡ ಪ್ರಕಾರ, ಕೊರೋನಿಲ್ ಔಷಧಕ್ಕಾಗಿ ಜೈಪರದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಯಿತಂತೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights