ಸೆರೆ ಸಿಕ್ಕ ಚೀನೀ ಸೈನಿಕನನ್ನು ಪಿಎಲ್‌ಎಗೆ ಹಸ್ತಾಂತರಿಸಿದ ಭಾರತೀಯ ಸೇನೆ!

ಕೆಲ ದಿನಗಳ ಹಿಂದೆ ಪೂರ್ವ ಲಡಾಖ್‌ ಗಡಿ ಭಾಗದಲ್ಲಿ ಭಾರತೀಯ ಸೇನೆ ಸೆರೆಹಿಡಿದ್ದ ಚೀನಾ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಸೈನಿಕನನ್ನು ಚೀನಾ ಸೇನೆಗೆ ಭಾರತ ಹಸ್ತಾಂತರಿಸಿದೆ.

ಬುಧವಾರ(ಇಂದು) ಬೆಳಗ್ಗೆ ಚೀನಾದ ವಾಂಗ್‌ ಯಾ ಲಾಂಗ್‌ ಎಂಬ ಸೈನಿಕನನ್ನು ಪಿಎಲ್‌ಎಗೆ ಹಸ್ತಾಂತರಿಸಲಾಗಿದೆ.

ವಾಸ್ತ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ದಾರಿ ತಪ್ಪಿ ಭಾರತದ ಭೂಭಾಗ ಪ್ರವೇಶಿಸಿದ್ದ ಲಾಂಗ್‌ನನ್ನು ಡೆಮ್‌ಚೋಕ್ ವಲಯದಲ್ಲಿ ಭಾರತೀಯ ಸೇನೆ ಸೆರೆ ಹಿಡಿದಿತ್ತು.ಈತನನ್ನು ಪರಿಶೀಲನೆ ನಡೆಸಿದಾಗ ಆತನ ಜೇಬಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿತ್ತು. ಅದರಲ್ಲಿ ಆತನ ಜೆಜಿಯಾಂಗ್ ಪ್ರಾಂತ್ಯದ ಶಾಂಗ್‌ಕ್ಸಿಜೆನ್‌ ಪಟ್ಟಣಕ್ಕೆ ಸೇರಿದವ ಎಂದು ಬರೆಯಲಾಗಿತ್ತು.

ಬಳಿಕ ವಿಚಾರಣೆ ನಡೆಸಿದಾಗ ಆತ ಚೀನಾದ ಸೈನಿಕ ಎಂದು ಹೇಳಿದ್ದ. ಮೂಲಗಳ ಪ್ರಕಾರ ಆತನಿಂದ ಕೆಲವು ದಾಖಲೆಪತ್ರಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿತ್ತು. ಅಲ್ಲದೆ, ಚೀನಾ ಸೈನಿಕನನ್ನು ವಶಕ್ಕೆ ಪಡೆದಿರುವ ಬಗ್ಗೆ ಚೀನಾಗೆ ಮಾಹಿತಿ ನೀಡಲಾಗಿತ್ತು.

ಶಿಷ್ಟಾಚಾರದ ಪ್ರಕಾರ ಚೀನಿ ಸೈನ್ಯಕ್ಕೆ ಆತನನ್ನು ಹಿಂತಿರುಗಿಸುವ ಮೊದಲು ಕೆಲವು ನಿಯಮಾವಳಿಗಳ ಪಾಲನೆ ಪೂರ್ಣಗೊಳ್ಳಬೇಕಿದೆ. ಅದು ಮುಗಿದ ಹಿನ್ನೆಲೆ ವಾಂಗ್‌ ಯಾ ಲಾಂಗ್‌ ಎಂಬ ಸೈನಿಕನನ್ನು ಹಸ್ತಾಂತರಿಸಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಸೈನಿಕನನ್ನು ರಕ್ಷಿಸಲು ಆಮ್ಲಜನಕ, ಆಹಾರ ಹಾಗೂ ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಲಾಯಿತು ಎಂದು ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್‌ ತಿಂಗಳಿನಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಘರ್ಷಣೆಯಿಂದ ಉಂಟಾಗಿರುವ ಉದ್ವಿಘ್ನತೆಯನ್ನು ಶಮನ ಮಾಡಲು ಎರಡೂ ದೇಶಗಳ ನಡುವೆ ಮಾತುಕತೆಗಳು ನಡೆಯುತ್ತಿದ್ದು, 8ನೇ ಕಮಾಂಡರ್‌ ಮಟ್ಟದ ಸಭೆ ಎರಡು ದಿನಗಳಲ್ಲಿ ಸಂಧಾನ ಸಭೆ ನಡೆಯಲಿದೆ.


ಇದನ್ನೂ ಓದಿ: ಗಡಿ ಉದ್ವಿಗ್ನತೆಯ ನಡುವೆಯೂ ಭಾರತೀಯ ವೈದ್ಯನನ್ನು ಸ್ಮರಿಸಿದ ಚೀನಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights