ಗಂಟೆಗೆ 300 KM ವೇಗದಲ್ಲಿ ಬೈಕ್‌ ಓಡಿಸಿದ ಯುವಕ ಪೊಲೀಸರಿಗೆ ಅತಿಥಿ: ವಿಡಿಯೋ ವೈರಲ್‌

ಬೆಂಗಳೂರಿನ ಎಲೆಕ್ಟ್ರಾನ್‌ ಸಿಟಿ ಫ್ಲೈಓವರ್‌ನಲ್ಲಿ 300 kmph ವೇಗದಲ್ಲಿ ಬೈಕ್ ಓಡಿಸುತ್ತಿದ್ದವನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆ ಮೂಲಕ ತನ್ನ ಜೀವ ಮತ್ತು ಇತರರ ಜೀವಗಳೊಂದಿಗೆ ಚೆಲ್ಲಾಟವಾಡಿದ ಆರೋಪದ ಮೇಲೆ ಪೊಲೀಸರು ಆತನ ಬೈಕ್ ವಶಪಡಿಸಿಕೊಂಡಿದ್ದಾರೆ.

ಸ್ವತಃ ತಾನೇ ದೇಹಕ್ಕೆ ಕ್ಯಾಮರ ಫಿಕ್ಸ್ ಮಾಡಿಕೊಂಡು 300 kmph ವೇಗದಲ್ಲಿ ಬೈಕ್ ಓಡಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಅದರ ಒಂದು ನಿಮಿಷದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಜಾಡು ಹಿಡಿದು ಬೆಂಗಳೂರಿನ ಸಿಸಿಬಿ ಪೊಲೀಸರು ಆತನ ಯಮಹಾ 1000 ಸಿಸಿ ಬೈಕ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕೇಂದ್ರ ಕ್ರೈಮ್ ಬ್ರಾಂಚ್‌ನ ಜಂಟಿ ಪೊಲೀಸ್ ಕಮಿಷನರ್ ಆದ ಸಂದೀಪ್ ಪಾಟೀಲ್‌ರವರು ಟ್ವಿಟ್ಟರ್‌ನಲ್ಲಿ ವಿವರಣೆ ನೀಡಿದ್ದಾರೆ. ಆ ವಿಡಿಯೋವನ್ನು ಪೋಸ್ಟ್ ಮಾಡಿ ಬೈಕ್ ವಶಪಡಿಸಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಎರಡು ಬದಿಯಿಂದ ವಾಹನಗಳು ಚಲಿಸುತ್ತಿರುವಾಗ 300 kmph ವೇಗದಲ್ಲಿ ಬೈಕ್ ಓಡಿಸುವುದು ತೀರಾ ಅಪಾಯಕಾರಿ ಪ್ರಯೋಗವಾಗಿದೆ. ಇದು ಕೇವಲ ಆ ಸವಾರನಲ್ಲದೆ ಆ ರಸ್ತೆಯಲ್ಲಿ ಚಲಿಸುತ್ತಿರುವ ಎಲ್ಲರ ಜೀವಕ್ಕೂ ಅಪಾಯಕಾರಿಯಾಗುತ್ತದೆ. ಹಾಗಾಗಿ ಆತನ ಸಾಹಕ ಕೃತ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಹಲವರು ಕಿಡಿಕಾರಿದ್ದಾರೆ.

ಸುರಕ್ಷಿತವಾಗಿ ಪ್ರಯಾಣ ಮಾಡುವುದು ಎಲ್ಲರ ದೃಷ್ಟಿಯಿಂದಲೂ ಒಳ್ಳೇಯದು ಎಂದು ಹಲವಾರು ಜನ ಸಲಹೆ ನೀಡಿದ್ದಾರೆ.


ಇದನ್ನೂ ಓದಿ:  ಬೈಕ್ ಮುಟ್ಟಿದ್ದಕ್ಕಾಗಿ ದಲಿತ ಯುವಕನ ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ: 18 ಜನರ ವಿರುದ್ಧ FRI

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights