ದೇಶದಲ್ಲಿ ಒಂದೇ ದಿನಕ್ಕೆ 22,752 ಹೊಸ ಕೊರೊನಾ ಕೇಸ್ : 482 ಸಾವು!

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 22,752 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು ,  482 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ದೇಶ 7.41 ಲಕ್ಷ ಕೊರೊನಾ ಪಾಸಿಟಿವ್ ಕೇಸಸ್ ಹೊಂದಿದೆ.

ಹೌದು…  ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ. ಸಾವಿನ ಸಂಖ್ಯೆ 20,000 ಕ್ಕೂ ಹೆಚ್ಚಿದೆ. ಮಾತ್ರವಲ್ಲದೇ ಕಳೆದ 24 ಗಂಟೆಗಳಲ್ಲಿ ರಾಷ್ಟ್ರವು 22,752 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು 482 ಜನ ಬಲಿಯಾಗಿದ್ದಾರೆ. ಮತ್ತೊಂದು ಆತಂಕಕಾರಿ ವಿಚಾರ ಅಂದರೆ ಹೆಚ್ಚು ಹಾನಿಗೊಳಗಾದ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಆಕ್ರಮಿಸಲು ಭಾರತ ರಷ್ಯಾವನ್ನು ಹಿಂದಿಕ್ಕಿದೆ.

ಇಂದಿನ ವರದಿ ಬಳಿಕ ದೇಶದಲ್ಲಿ 2,64,944 ಕೊರೊನಾ ವೈರಸ್ ಪ್ರಕರಣಗಳು ಸಕ್ರಿಯವಾಗಿದೆ. 4,56,831 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ಸಂಜೆಯವರೆಗೂ ಮಹಾರಾಷ್ಟ್ರದಲ್ಲಿ 5134 ಜನರಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ 3616 ಕೇಸ್, ದೆಹಲಿಯಲ್ಲಿ 2008 ಸೋಂಕು, ಕರ್ನಾಟಕದಲ್ಲಿ 1498 ಕೇಸ್, ತೆಲಂಗಾಣದಲ್ಲಿ 1879 ಸೋಂಕು ದೃಢವಾಗಿದೆ.  ಅಮೆರಿಕದಲ್ಲಿ ಹೊಸದಾಗಿ 55,442 ಕೇಸ್ ದಾಖಲಾಗಿದೆ. ಬ್ರೆಜಿಲ್‌ನಲ್ಲಿ 48,584 ಕೇಸ್ ವರದಿಯಾಗಿದೆ. ಭಾರತದಲ್ಲಿ 22,752 ಪ್ರಕರಣ ಪತ್ತೆಯಾಗಿದೆ. ಆ ಮೂಲಕ ಭಾರತ  ವಿಶ್ವದಲ್ಲಿ ಕೊರೊನಾ ಸೋಂಕಿತರ  ಸಂಖ್ಯೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights