ಬಿಹಾರ ಫಲಿತಾಂಶ: BJP ವಿರುದ್ಧ ಟ್ವಿಟರ್‌ನಲ್ಲಿ #BiharRejectNDA ಟ್ರೆಂಡಿಂಗ್‌!

ಬಿಹಾರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದ್ದು, ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಟ್ವಿಟರ್‌ನಲ್ಲಿ ಬಿಹಾರದ ಜನರು ಬಿಜೆಪಿ ಮತ್ತು ನಿತೀಶ್‌ ಕುಮಾರ್‌ ವಿರುದ್ಧ #BiharRejectNDA ಎಂದು ಟ್ವೀಟ್‌ ಮಾಡುತ್ತಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ.

ಬಿಹಾರವು ಬೌದ್ ವಿಹಾರ ಎಂಬ ಹೆಸರಿನಿಂದ ಬಂದಿದೆ. ಆದರೆ, ಇಂದು ಬಿಹಾರವನ್ನು ನೋಡಿ, ಶಿಕ್ಷಣವಿಲ್ಲ, ಉದ್ಯೋಗವಿಲ್ಲ, ಆರೋಗ್ಯ ವ್ಯವಸ್ಥೆಯಿಲ್ಲ, ಉತ್ತಮ ಶಿಕ್ಷಣ ವ್ಯವಸ್ಥೆಯಿಲ್ಲ. ಬಿಹಾರದಲ್ಲಿ ಬದಲಾವಣೆ ಬೇಕಿದೆ. #BiharRejectNDA ಎಂದು ಸುರಜ್‌ ಜಿ ನಾಯಕ್ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮೋದಿಯ ಯೋಜನಾ ರಹಿತ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕತೆ ಅಧೋಗತಿ ತಲುಪಿದೆ. ಭಾರತದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಮೋದಿ ವಿಫಲರಾಗಿದ್ದರೆ. ವಲಸಿಗರ ವಿಚಾರದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ. #BiharRejectNDA ಎಂದು ದನಂಜಯ ರಾಯ್ ಟ್ವೀಟ್‌ ಮಾಡಿದ್ದಾರೆ.

ದೇಶದ ವ್ಯವಸ್ಥೆಯಿಂದ ಏನುನ್ನು ನಿರೀಕ್ಷಿಸಲು ಸಾಧ್ಯ. ರಾಜ್ಯದ ಜನರು 9ನೇ ವಿಫನೇ ವ್ಯಕ್ತಿಯನ್ನು ಮತ್ತೆ ಸಿಎಂ ಆಗಿ ಆಯ್ಕೆ ಮಾಡಲು ಸಾಧ್ಯವೇ? ನಿಮಗೆ ಅರ್ಹವಾದದ್ದನ್ನು ನೀವು ಪಡೆಯುತ್ತೀರಿ… ಎಂದು ಸ್ಟೈಲ್‌ರಗ್‌ ಎಂಬ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಮೋದಿ ಅದೃಷ್ಟ ಮಾಡಿದ್ದರು. ಲೋಕಸಭಾ ಚುನಾವಣೆ ಕೊರೊನಾ ಸಂದರ್ಭದಲ್ಲಿ ನಡೆಯಲಿಲ್ಲ. ಇಲ್ಲವಾಗಿದ್ದರೆ ನಿತೀಶ್‌ ರೀತಿಯಲ್ಲೇ ಅವರೂ ಸಹ ಮುಖಭಂಗ ಎದುರಿಸುತ್ತಿದ್ದರು ಎಂದು ಸ್ವಾತಿ ಜೆ ಅವರು ಟ್ವೀಟ್‌ ಮಾಡಿದ್ದಾರೆ.

ಸದ್ಯ ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಮುನ್ನಡೆಯಲ್ಲಿದ್ದು 131 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್‌ 101 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ: ಎನ್‌ಡಿಎ ಮುನ್ನಡೆ; ಗೆದ್ದೇಗೆಲ್ಲತ್ತೇವೆ ಎಂಬ ವಿಶ್ವಾಸದಲ್ಲಿ ಮಹಾಘಟಬಂಧನ್

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights