ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾರಲ್ಲಿ ಕೊರೊನಾ ಸೋಂಕು ಪತ್ತೆ….

ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಸ್ವತ: ಟ್ವೀಟ್ ಮಾಡಿರುವ ಧ್ರುವ ಸರ್ಜಾ ತಮಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಖಚಿತಪಡಿಸಿದ್ದಾರೆ.

ಈ ಬಗ್ಗೆ ಧ್ರುವಾ ಸರ್ಜಾ ಟ್ವಿಟ್ ಮಾಡಿರುವುದು ಹೀಗೆ : “ ನನಗೂ ನನ್ನ ಪತ್ನಿಗೂ ಕೊರೊನಾ ಪಾಸಿಟವ್ ಬಂದಿದೆ. ರೋಗಲಕ್ಷಣ ಕಡಿಮೆ ಇದ್ದು, ನಾವು ಆಸ್ಪತ್ರೆಗೆ ದಾಖಲಾಗಲು ನಿರ್ಧರಿಸಿದ್ದೇವೆ. ಬೇಗ ಗುಣಮುಖರಾಗಲಿದ್ದೇವೆ  ಅನ್ನೋ ನಂಬಿಕೆ ಇದೆ. ನಮ್ಮೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದವರೂ ಕೂಡ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಮನೆಯಲ್ಲಿರಿ. ಸುರಕ್ಷಿತವಾಗಿರಿ ಎಂದು ಧ್ರುವ ಟ್ವೀಟ್ ಮಾಡಿದ್ದಾರೆ.

https://twitter.com/DhruvaSarja/status/1283322008965648384?ref_src=twsrc%5Etfw%7Ctwcamp%5Etweetembed%7Ctwterm%5E1283322008965648384%7Ctwgr%5E&ref_url=https%3A%2F%2Fkannada.news18.com%2Fnews%2Fentertainment%2Fkannada-actor-action-price-dhruva-sarja-and-wife-prerana-tests-coronavirus-positive-rmd-412311.html

ಇತ್ತೀಚೆಗೆ ಹೆಚ್ಚು ಜನರ ಸಂಪರ್ಕಕ್ಕೆ ಧ್ರುವ ಸರ್ಜಾ ಬಂದಿದ್ದರು.ಅವರ ಅಣ್ಣ ಚಿರಂಜೀವಿ ಸರ್ಜಾ ಅವರ ಸಾವಿನ ಬಳಿಕ ಆರೋಗ್ಯದಲ್ಲಿ ವ್ಯತ್ಯಯ ುಂಟಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಈ ಅವಧಿಯಲ್ಲಿ ಕೊರೊನಾ ಅಂಟಿದೆ ಎನ್ನಲಾಗುತ್ತಿದೆ. ಧ್ರುವ ಕುಟುಂಬದವರೆಲ್ಲರನ್ನೂ ಟೆಸ್ಟ್ ಗೆ ಒಳಪಡಿಸಲಾಗಿದೆ. ಅಣ್ಣನ ಸಾವಿನಿಂದ ತುಂಬಾನೇ ಸೊರಗಿದ್ದ ಧ್ರುವಾ ಸರ್ಜಾ ಅವರ ಬಗ್ಗೆ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights