ಸರ್ಕಾರ ಅನುಮತಿಯಿಲ್ಲದೆ ಕಾರ್ಖಾನೆಗಳನ್ನು ಮುಚ್ಚುವಂತಿಲ್ಲ, ಕಾರ್ಮಿಕರನ್ನು ಉದ್ಯೋಗದಿಂದ ತೆಗೆಯುವಂತಿಲ್ಲ; ರಾಜ್ಯ ಸರ್ಕಾರ

ಸರ್ಕಾರದ ಅನುಮತಿ ಇಲ್ಲದೆ, 100ಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು ಸ್ವಯಂ ನಿರ್ಧಾರದಿಂದ ಮುಚ್ಚುವಂತಿಲ್ಲ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಹೆಚ್ಚು ಕಾರ್ಮಿಕರು ದುಡಿಯುವ ಕಾರ್ಖಾನೆಗಳು ಸರ್ಕಾರದ ಗಮನಕ್ಕೆ ತರದೆ, ಅನುಮತಿ ಪಡೆಯದೆಯೇ ಮುಚ್ಚವಂತಿಲ್ಲ. ಲಾಕ್‌ಡೌನ್‌ ಸಿಡಿಲಿಕೆಯಾದ ನಂತರ ಹಲವು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಕಾರ್ಖಾನೆಗಳು ಕೆಲಸದಿಂದ ತೆಗೆದುಹಾಕಿದ್ದಾರೆ ಎಂಬ ದೂರುಗಳು ಬಂದಿವೆ.

Yellapur: Have acted upon Siddaramaiah's instructions - Rebel MLA ...

ಅಂತಹ ಕಾರ್ಖಾನೆಗಳನ್ನು ಗುರ್ತಿಸಿ, ಪಟ್ಟಿ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತೀಯೊಬ್ಬ ಕಾರ್ಮಿಕನಿಗೂ ರೂ. 5,000ದಂತೆ ಸರ್ಕಾರ ಪರಿಹಾರ ನೀಡಲಿದೆ. 85,000 ಕಾರ್ಮಿಕರ ಪೈಕಿ ಈಗಾಗಲೇ 60,000 ಕಾರ್ಮಿಕರಿಗೆ ಇದರಿಂದ ಲಾಭವಾಗಿದೆ. ಉಳಿದವರ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಪರಿಹಾರ ವಿಸ್ತರಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇಲಾಖೆಯಲ್ಲಿ ಈ ವರೆಗೂ 7.80 ಲಕ್ಷ ಕಾರ್ಮಿಕರ ಪೈಕಿ 3.34 ಲಕ್ಷ ಕಾರ್ಮಿಕರ ಕುರಿತು ಮಾಹಿತಿ ಇದೆ. ಉಳಿದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಕಾರ್ಮಿಕರ ಕಲ್ಯಾಣಕ್ಕಾಗಿ ರೂ.1000 ಮೀಸಲಿಡಲಾಗುತ್ತದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights