ಶಾಲಾ-ಕಾಲೇಜುಗಳ ಆರಂಭದ ಗೊಂದಲಗಳಿಗೆ ತೆರೆ ಎಳೆದ ಸಚಿವ ಎಸ್. ಸುರೇಶ್ ಕುಮಾರ್!

ಕೊರೊನಾ ಲಾಕ್ಡೌನ್ ನಿಂದಾಗಿ ಶಾಲಾ-ಕಾಲೇಜುಗಳು ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿವೆ. ಆದರೆ ಶಾಲಾ-ಕಾಲೇಜುಗಳು ಯಾವಾಗ ಆರಂಭವಾಗುತ್ತವೆ ಅನ್ನೋದಕ್ಕೆ ಪೋಷಕರಲ್ಲಿ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಇಂದು ಪ್ರಾಥಮಿಕ ಶಿಕ್ಷಣ ಸಚಿವರು ಪೋಷಕರ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಾವಿನ್ನು ಶಾಲಾ-ಕಾಲೇಜುಗಳ ರೀ ಓಪನ್ ಬಗ್ಗೆ ಚರ್ಚೆ ಮಾಡಿಲ್ಲಾ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸದ್ಯಕ್ಕೆ ಶಾಲಾ‌-ಕಾಲೇಜು‌ ಪ್ರಾರಂಭ ಇಲ್ಲ. ಶಾಸಕರ‌, ಸಂಸದರ‌ ಅಭಿಪ್ರಾಯ ಹಾಗೂ ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಜೊತೆ ಸಂವಾದದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

ಕೊರೊನಾ ಮಹಾಮಾರಿ ಸೋಂಕು ದಿನದಿಂದ ಜನರ ದೇಹವನ್ನು ಎಗ್ಗಿಲ್ಲದೇ ಸೇರಿಕೊಳ್ಳುತ್ತಿದೆ. ಇದರ ನಡುವೆಯೂ ಶಾಲಾ-ಕಾಲೇಜುಗಳ ರೀ ಓಪನ್ ಗೆ ತಯಾರಿ ನಡೆದಿದೆ ಎನ್ನುವ ಸುಳ್ಳು ಹೇಳಿಕೆಗಳು ಸುಳಿದಾಡುತ್ತಿದ್ದವು. ಆದರೆ ಇದಕ್ಕೆ ನಾವಿನ್ನೂ ಆ ಬಗ್ಗೆ ಯೋಚಿಸಿಲ್ಲ ಎಂದು ಬೀದರ್ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಸಚಿವ ಸುರೇಶ್‌ಕುಮಾರ್ ಫೇಸ್‌ಬುಕ್ ನಲ್ಲಿ‌ ಸ್ಪಷ್ಟನೆ ನೀಡಿದ್ದಾರೆ. 0:17

ಈಗಾಗಲೇ ಆನ್​ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಸೆಪ್ಟೆಂಬರ್ 21ರಿಂದ ವಿದ್ಯಾರ್ಥಿಗಳು ಶಾಲೆಗೆ ಬಂದು ಪಾಠಕ್ಕೆ ಸಂಬಂಧಿಸಿದ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು ಎನ್ನಲಾಗಿತ್ತು. ಆದರೆ, ಕೊರೋನಾ ಸೋಂಕು ಹೆಚ್ಚಾಗಿದ್ದರಿಂದ ಸೆಪ್ಟೆಂಬರ್ 30ವರೆಗೆ ಯಾವ ವಿದ್ಯಾರ್ಥಿಗಳೂ ಶಾಲೆಗೆ ಬರುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಶಾಲಾ-ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಇನ್ನೂ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೂಡ ಸ್ಪಷ್ಟನೆ ನೀಡಿದ್ದರು. ರಾಜ್ಯಾದ್ಯಂತ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಸದ್ಯಕ್ಕೆ ಕಾಲೇಜುಗಳನ್ನು ಆರಂಭಿಸುವುದಿಲ್ಲ. ಆ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಕಾಲೇಜು, ಶಾಲೆಗಳ ಆರಂಭದ ಬಗ್ಗೆ ಪೋಷಕರು, ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲಗಳೂ ಬೇಡ ಎಂದು ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights