CET exam :ಕೊರೋನಾ ಭೀತಿಯಲ್ಲಿ ವ್ಯಾಪಕ ವಿರೋಧ, ಟ್ವಿಟರಿನಲ್ಲಿ ಜೋರಾದ ಅಭಿಯಾನ…

ಕೊರೊನಾ ಭೀತಿಯಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರು  cet ಪರೀಕ್ಷೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ದಯವಿಟ್ಟು CET ಪರೀಕ್ಷೆ ಮುಂದೂಡಿ ಎಂದು  ಟ್ವಿಟರಿನಲ್ಲಿ #postponekcet ಅಭಿಯಾನ ಜೋರಾಗಿಮಾಡುತ್ತಿದ್ದಾರೆ.. ರಾಜ್ಯದಲ್ಲಿ, ಅದರಲ್ಲಿಯೂ ಬೆಂಗಳುರಿನಲ್ಲಿ ಕೊರೋನಾ ಹೆಚ್ಚಳದ ಹಿನ್ನೆಲೆಯಲ್ಲಿ ಮಾಸಾಂತ್ಯಕ್ಕೆ ನಿಗದಿಯಾಗಿರುವ cet ಪರೀಕ್ಷೆಗಳನ್ನು ಮುಂದೂಡುವಂತೆ ಸರಕಾರದ ಮೇಲೆ ತೀವ್ರ ಒತ್ತಡ ಹಾಕಲಾಗುತ್ತಿದೆ.

ಈ ಸಂಬಂಧ ಟ್ವಟರಿನಲ್ಲಿ ಅಭಿಯಾನವೇ ಆರಂಭವಾಗಿದ್ದು, ಅಸಂಖ್ಯಾತ ವಿದ್ಯಾರ್ಥಿ-ಪೋಷಕರು ಪರೀಕ್ಷೆ ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ದೇಶಾದ್ಯಂತ ಎಲ್ಲೆ ರಾಜ್ಯಗಳಲ್ಲಿಯೂ ಪರೀಕ್ಷೆಗಳು ಮುಂದೂಡಿಕೆಯಾಗಿರುವಾಗ ಇಲ್ಲಿ ಪರೀಕ್ಷೆ ನಡೆಸುವುದಾದರೂ ಯಾವ ಪುರುಷಾರ್ಥಕ್ಕೆ. ಕಾಲೇಜು ಸದ್ಯ ಆರಂಭವಾಗುವ ಲಕ್ಷಣಗಳಿಲ್ಲ. ಸದ್ಯದ ಮಟ್ಟಿಗೆ cet ಪರೀಕ್ಷೆ ಮುಂದೂಡಿ ಎಂಬ ಆಗ್ರಹ ಮುಗಿಲು ಮುಟ್ಟಿದೆ.

ಬೆಂಗಳುರಿನ್ಲಲಿ ಕೊರೊನಾ ಪರಿಸ್ಥಿತಿ ಉಲ್ಬಣಿಸಿದ್ದು, ಮಂಗಳವಾರ ರಾತ್ರಿಯಿಂದ ಲಾಕ್‌ಡೌನ್ ಸಹ ಘೋಷಣೆ ಮಾಡಲಾಗಿದೆ. ಹೀಗಿದ್ದೂ ಮಾಸಾಂತ್ಯಕ್ಕೆ cet ಪರೀಕ್ಷೆ ನಡೆಸುವುದು ಅರ್ಥರಹಿತ ಅಲ್ಲವೇ ಎಂಬುದು ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ. ಈ ಸಾಲಿನ cet ಪರೀಕ್ಷೆಗಳು ಜುಲೈ 30 ಮತ್ತು 31ಕ್ಕೆ ನಿಗದಿಯಾಗಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಿಕೆ ಇಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ವಿದ್ಯಾರ್ಥಿ-ಪೋಷಕ ಸಮುದಾಯದ ಆಗ್ರಹಕ್ಕೆ ಕಿವುಡಾಗಿ ಸರಕಾರವು ಇತ್ತೀಚೆಗಷ್ಟೇ SSLC ಪರೀಕ್ಷೆಗಳನ್ನು ಹಠಕ್ಕೆ ಬಿದ್ದು ನಡೆಸಿತ್ತು. ಹೀಗಾಗಿ cet ಪರೀಕ್ಷೆ ಮುಂಡೂಡಿಕೆ ಅನುಮಾನ ಎಂದೇ ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights