ಗುಜರಾತ್‌ನ ರಾಜ್‌ಕೋಟ್ನಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 4.5 ರಷ್ಟು ಕಂಪಿಸಿದ ಭೂಮಿ!
ಗುಜರಾತ್‌ನ ರಾಜ್‌ಕೋಟ್ ದಲ್ಲಿ ಮ್ಯಾಗ್ನಿಟ್ಯೂಡ್ 4.5 ಭೂಕಂಪನ ಸಂಭವಿಸಿದೆ.
ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗುರುವಾರ ಬೆಳಿಗ್ಗೆ 7: 40 ಕ್ಕೆ ರಿಕ್ಟರ್ ಮಾಪಕದಲ್ಲಿ 4.5 ರಷ್ಟು ಭೂಕಂಪನ ಸಂಭವಿಸಿದೆ.
ಗುಜರಾತ್‌ನಲ್ಲಿ ಮುಂಜಾನೆ ಸಂಭವಿಸಿದ ಭೂಕಂಪದ ನಡುಕ ರಾಜ್‌ಕೋಟ್, ಜಾಮ್‌ನಗರ್, ಜುನಾಗರ್ ಮತ್ತು ಸುರೇಂದ್ರನಗರ ಪ್ರದೇಶಗಳಲ್ಲಿ ನಡುಕ ಸಂಭವಿಸಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡಲೇ ರಾಜ್‌ಕೋಟ್‌ನ ಸ್ಥಳೀಯ ಆಡಳಿತದೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ. ಗುಜರಾತ್‌ನ ಕಚ್ ಜಿಲ್ಲೆಯ ಭಚೌದಿಂದ 14 ಕಿ.ಮೀ ದೂರದಲ್ಲಿ ಜುಲೈ ೫ ರಂದು 4.2 ತೀವ್ರತೆಯ ಭೂಕಂಪನ ದಾಖಲಾಗಿತ್ತು.

