ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ: ಭಾರತ್ ಸೇನಾ ಸಂಘದ ಕಾರ್ಯಕರ್ತನ ಬಂಧನ

ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಪ್ರಕಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕೊಯಮತ್ತೂರಿನ ಪೊಡನೂರ್ ಪೊಲೀಸರು ಬಂಧಿಸಿದ್ದಾರೆ.

ಭಾರತ ಸೇನಾದ ಸದಸ್ಯ, ಚೆಟ್ಟಿಪಲಯಂ ರಸ್ತೆಯ 21 ವರ್ಷದ ಎಂ ಅರುಣ್ ಕೃಷ್ಣನ್ ಎಂಬತಾ ಪೆರಿಯಾರ್ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

“ಅರುಣ್ ಕೃಷ್ಣನ್ ಭಾರತ್ ಸೇನಾದ ಕೊಯಮತ್ತೂರಿನ ದಕ್ಷಿಣ ಜಿಲ್ಲಾ ಸಂಘಟಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಡೆಪ್ಯುಟಿ ಕಮಿಷನರ್ ಜಿ ಸ್ಟಾಲಿನ್ ಹೇಳಿದ್ದಾರೆ.

ಸಮಾಜದಲ್ಲಿ ಗಲಭೆ ಉಂಟುಮಾಡುವ ಉದ್ದೇಶ ಸೆಕ್ಷನ್ 153 ಮತ್ತು 153  A, ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಹರಡುವ ಆರೋಪ ಸೆಕ್ಷನ್ 504 ರ ಅಡಿಯಲ್ಲಿ ಅರುಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸುಂದರ್ ಪುರಂ ನ ಅಯ್ಯರ್ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇರುವ ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದರಿಂದಾಗಿ ಪೆರಿಯಾರ್ ಗೆ ಅವಮಾನವಾಗಿದೆ ಎಂದು ದ್ರಾವಿಡಾರ್ ಕಳಗಂ ಹಾಗೂ ತಂಥಿ ಪೆರಿಯಾರ್ ದ್ರಾವಿಡಾರ್ ಕಳಗಂ ಸಂಘಟನೆಯ ಸದಸ್ಯರು ಆರೋಪಿಸಿ ಈ ಕೃತ್ಯಕ್ಕೆ ಕಾರಣವಾದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights