ಭಾರತದಲ್ಲಿ 7 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : 22,252 ಹೊಸ ಕೇಸ್!

ಭಾರತದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದ್ದು 22,252 ಹೊಸ ಪ್ರಕರಣಗಳು ದಾಖಲಾಗಿ ಒಟ್ಟು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ಭಾರತದಲ್ಲಿ ಐದು ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದ್ದು ಮಂಗಳವಾರ 22,252 ಹೊಸ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ. ಈ ಪೈಕಿ 467 ಜನರು ಈ ಕಾಯಿಲೆಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 20,160 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಸತತ ಐದನೇ ದಿನವೂ 20,000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈವರೆಗೆ 2,59,557 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ಸುಮಾರು 61.13 ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ.

ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ವಿದೇಶಿಯರು ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ ವರದಿಯಾದ 467 ಸಾವುಗಳಲ್ಲಿ 204 ಮಹಾರಾಷ್ಟ್ರ, 61 ತಮಿಳುನಾಡು, ದೆಹಲಿಯಿಂದ 48, ಕರ್ನಾಟಕದಿಂದ 29, ಉತ್ತರ ಪ್ರದೇಶದಿಂದ 24, ಪಶ್ಚಿಮ ಬಂಗಾಳದಿಂದ 22, ಗುಜರಾತ್‌ನಿಂದ 17 ಸಾವುಗಳು ಸಂಭವಿಸಿವೆ.

ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ 11 ಸಾವುಗಳು ಸಂಭವಿಸಿದ್ದು, ಮಧ್ಯಪ್ರದೇಶ ಒಂಬತ್ತು, ಆಂಧ್ರಪ್ರದೇಶ ಏಳು, ಜಮ್ಮು ಮತ್ತು ಕಾಶ್ಮೀರ ಆರು, ರಾಜಸ್ಥಾನ ಮತ್ತು ಪಂಜಾಬ್ ತಲಾ ಐದು, ಬಿಹಾರ, ಕೇರಳ ಮತ್ತು ಒಡಿಶಾ ತಲಾ ಎರಡು; ಮತ್ತು ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್ ತಲಾ ಒಂದು ಸಾವು ಸಂಭವಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights