ಆತ್ಮಹತ್ಯೆಗೆ ಯತ್ನಿಸಿದ ಗೂಳಿಹಟ್ಟಿ ಶೇಖರ್ : ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆಂದ ಶಾಸಕ ಎಂ.ಚಂದ್ರಪ್ಪ…!

ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿರುವ ವಿಚಾರ ತಮಗೆಲ್ಲಾ ತಿಳಿದೇ ಇದೆ. ಆದರೆ ಇವರ ಪರವಾಗಿ ಬ್ಯಾಟಿಂಗ್ ಮಾಡಿದ ಚಿತ್ರದುರ್ಗದ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಕಾನೂನು ಬಾಹೀರವಾದ ಮಾತುಗಳನ್ನಾಡಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ಶಾಸಕರು ‘ ಪ್ರಾರಂಭದಲ್ಲಿ ಶೋ ಕೊಟ್ಟುಕೊಂಡು ಬರುವ ಪೊಲೀಸರು ಬಂದ ಸ್ವಲ್ಪ ದಿನಗಳ ಬಳಿಕ ಅಕ್ರಮ ಮರಳು ದಂಧೆಕೋರರೊಂದಿಗೆ ಶಾಮೀಲಾಗಿ ಸಾಮಾನ್ಯರಿಗೆ ತೊಂದರೆ ಕೊಡುತ್ತಾರೆ. ಹೀಗಾಗಿ ಅವರ ಠಾಣೆಗೆ ಬೆಂಕಿ ಹಚ್ಚುತ್ತೇವೆ. ಸಾಮಾನ್ಯರಿಗೆ ತೊಂದರೆ ಕೊಟ್ಟರೆ ಸಿಕ್ಕ ಸಿಕ್ಕಲೇ ಪೊಲೀಸರ ಮೇಲೆ ಹಲ್ಯೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದರೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ  ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು ಯತ್ನಿಸಿದಾಗ ಬೆಂಬಲಿಗರು ಅದನ್ನು ತಡೆದಿದ್ದಾರೆ. ಗೂಳಿಹಟ್ಟಿ ಶೇಖರ್ ಅವರ ಕಿವಿ, ಮೂಗು, ಬಾಯೊಳಗೆ ಪೆಟ್ರೋಲ್ ಹರಿದುಹೋಗಿದೆ. ಬೆಂಬಲಿಗರು ಸರಿಯಾದ ಸಮಯಕ್ಕೆ ಅವರನ್ನು ತಡೆಯದೇ ಹೋಗಿದ್ದರೆ ಬೆಂಕಿ ಕಡ್ಡಿ ಗೀರಿಕೊಂಡಿರುತ್ತಿರು. ಗೂಳಿಹಟ್ಟಿ ಶೇಖರ್ ಅವರನ್ನು ಸದ್ಯಕ್ಕೆ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಚಿತ್ರದುರ್ಗದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪೊಲೀಸರ ವಿರುದ್ಧ ಮನಬಂದಂತೆ ಆರೋಪ ಮಾಡಿದ್ದಾರೆ. ಈ ಹೇಳಿಕೆಗಳನ್ನು ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲೂ ಪ್ರಕಟಿಸುವಂತೆ ಅವರು ಹೇಳಿಕೆ ನೀಡಿದ್ದಾರೆ. ತಪ್ಪು ಪೊಲೀಸರದ್ದಾಗಿರಬಹುದು ಆದರೆ ಒಬ್ಬ ಜನಪ್ರತಿನಿಧಿಯಾಗಿ, ಶಾಸಕಾಂಗವನ್ನು ರಚಿವಂತವರಾಗಿ, ಮತ್ತೊಬ್ಬರಿಗೆ ಮಾರದಿಯಾಗಿ ಇರಬೇಕು ಶಾಸಕ ಎಂ.ಚಂದ್ರಪ್ಪ ಕಾನೂನು ಬಾಹೀರವಾಗಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights