ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸಿದ್ಧಗಂಗಾ ಶ್ರೀಗಳು : ಮಠಕ್ಕೆ ಕರೆದೊಯ್ಯಲು ‘ನಡೆದಾಡುವ ದೇವರು’ ಪಟ್ಟ

ಅನಾರೋಗ್ಯ ಕಾರಣದಿಂದ ತುಮಕೂರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ. ಶಿವಕುಮಾರ ಶ್ರೀಗಳು ಮಠಕ್ಕೆ ಕರೆದೊಯ್ಯಲು ಹಠ ಮಾಡುತ್ತಿದ್ದಾರೆ ಎಂದು ಕಿರಿಯ ಸ್ವಾಮಿಗಳು ತಿಳಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸಿದ್ಧಗಂಗಾ ಶ್ರೀಗಳು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮಠದಲ್ಲಿ ಚಿಕಿತ್ಸೆ ಕೊಡಲು ನಿರಾಕರಿಸಿದ ವೈದ್ಯರು ಪುನ: ಶ್ರೀಗಳಿಗೆ ಸೊಂಕು ತಗಲುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದ್ದಾರೆ.

ಈ ಕಾರಣದಿಂದ ಶ್ರೀಗಳಿಗೆ ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 5 ಗಂಟೆಗೆ ಎಂದಿನಂತೆ ಶ್ರೀಗಳಿಗೆ ರಕ್ತ ಹಾಗೂ ಹಲವಾರು ಪರೀಕ್ಷೆಗಳನ್ನು ಮಾಡಲಾಗಿದ್ದು ಭಕ್ತರು ಹೆದರುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದಾಗ ಒಂದೆರೆಡು ದಿನದಲ್ಲಿ ಚಿಕಿತ್ಸೆ ಮೂರ್ಣಗೊಳಿಸಿ ಮಠಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಸುಮಾಋಉ ದಿನಗಳಿಂದ ಶ್ರೀಗಳು ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದ್ದರಿಂದ ಶ್ರೀಗಳು ಮಠಕ್ಕೆ ಹೋಗಲು ಪಟ್ಟು ಹಿಡಿದಿದ್ದಾರೆ.

ಜೊತೆಗೆ ಶ್ರೀಗಳು ಇಷ್ಟು ದಿನಗಳವರೆಗೆ ಮಠವನ್ನು ಬಿಟ್ಟು ಇರದ ಕಾರಣದಿಂದಾಗಿ ಶ್ರೀಗಳು ಈ ರೀತಿ ಹೇಳುತ್ತಿರುವುದಾಗಿ ಕಿರಿಯ ಸ್ವಾಮಿಗಳು ತಿಳಿಸಿದ್ದಾರೆ. ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿದರೂ ವೈದ್ಯರು ಮಠಕ್ಕೆ ತೆರಳಲು ನಿರಾಕರಿಸುತ್ತಿದ್ದಾರೆ. ಕಾರಣ ಮಠದಲ್ಲಿ ಶ್ರೀಗಳಿಗೆ ಸೊಂಕು ತಗಲುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights