ಮನೆ ಬಾಗಿಲು ತೆಗೆಯುತ್ತಿದ್ದಂತೆ ಮಹಿಳೆಯ ತಲೆ ಮೇಲೆ ಇಳಿದ ಹಾವು..!

ಮಹಿಳೆಯೊಬ್ಬಳು ತನ್ನ ಮನೆಯ ಬಾಗಿಲು ತೆಗೆದಾಗ ಹಾವೊಂದು ಆಕೆಯ ತಲೆಯ ಮೇಲೆ ಇಳಿದ ಅಘಾತಕಾರಿ ಘಟನೆವೊಂದು ನಡೆದಿದೆ.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ,ಯುಎಸ್ ಮಿಸ್ಸಿಸ್ಸಿಪ್ಪಿಯ ಕ್ರಿಶ್ಚಿಯನ್ ಮಿಚೆಲ್ ಎಂಬ ಮಹಿಳೆ ಕಳೆದ ವಾರ ಕೆಲಸದಿಂದ ಮನೆಗೆ ಬಂದು ಮುಂಭಾಗದ ಬಾಗಿಲು ತೆರೆಯುತ್ತಿದ್ದಾಗ, ಬಾಗಿಲಿನ ಮೇಲಿದ್ದ ಹಾವು ಅವಳ ತಲೆಯ ಮೇಲೆ ಬಿದ್ದಿದೆ.

“ನನ್ನ ತಲೆಯ ಮೇಲೆ ಈ ಹೊಡೆತವನ್ನು ನಾನು ಅನುಭವಿಸಿದೆ. ನಾನು ಕೆಳಗೆ ನೋಡಿದೆ ಮತ್ತು ಹಾವು ಮನೆಯಲ್ಲಿ ನನ್ನ ಕಾಲುಗಳ ಮೇಲೆ ಇಳಿದಿದೆ” ಎಂದು ಮಿಚೆಲ್ ತಿಳಿಸಿದರು.

ಹಾವು ಸುಮಾರು 10 ಇಂಚು ಉದ್ದದ ಹಾವು ಅವಳ ತಲೆಯ ಮೇಲೆ ಇಳಿದು ಅಡುಗೆ ಮನೆಯೊಳಗೆ ನುಸುಳಿದೆ. ನಂತರ ಮಿಚೆಲ್ ತನ್ನ ಗಂಡನನ್ನು ಕರೆದು ಹಾವನ್ನು ಹೊರಗೆ ಹಾಕಿದ್ದಾರೆ. ಮಹಿಳೆ ಹಾವುಗಳನ್ನು ಪ್ರೀತಿಸುತ್ತಿರುವುದರಿಂದ ಅವಳು ಅದನ್ನು ಕೊಲ್ಲಲ್ಲಿಲ್ಲ. ಬದಲಾಗಿ ವಿಷಪೂರಿತ ಹಾವನ್ನು ಹೊರಹಾಕಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights