FACT CHECK | ವಕ್ಫ್ (ತಿದ್ದುಪಡಿ) ಮಸೂದೆ 2024 ಚರ್ಚೆಯಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರೆ?

ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಚರ್ಚೆಯ ನಂತರ ವಕ್ಫ್ (ತಿದ್ದುಪಡಿ) ಮಸೂದೆ 2024 ಅಂಗೀಕಾರವಾಗಿದೆ. ಆದರೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಸೂದೆಯ ಚರ್ಚೆಯ ಸಮಯದಲ್ಲಿ ಗೈರುಹಾಜರಾಗಿದ್ದರು ಆದರೆ ಮತ ಚಲಾಯಿಸಲು ಮಾತ್ರ ತಡರಾತ್ರಿ ಬಂದರು ಎಂದು ಹೇಳಿಕೊಳ್ಳುವ ವೀಡಿಯೊ ತುಣುಕೊಂದು ಪ್ರಸಾರವಾಗುತ್ತಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರಿನಿಂದ ಇಳಿದು ಸಂಸತ್ ಭವನದ ಒಳಗೆ ಹೋಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಅವರು ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ಚರ್ಚೆ ನಡೆಯುವಾಗ ಲೋಕಸಭೆಯ ಕಲಾಪಕ್ಕೆ ಬೆಳಿಗ್ಗೆಯಿಂದ ಗೈರಾಗಿದ್ದರು; ಆದರೆ, ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ರಾತ್ರಿ 10 ಗಂಟೆಗೆ ಸಂಸತ್‌ಗೆ ಬಂದರು ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರ ‘ಕರಣ್ ಕುಮಾರ್ ಸ್ವಾಮಿ’ ಅವರು ವೈರಲ್ ವೀಡಿಯೊವನ್ನು “ಹಿಂದೂಗಳೇ, ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ನೋಡಿ… ರಾಹುಲ್ ಗಾಂಧಿ ಬೆಳಿಗ್ಗೆಯಿಂದ ಸದನದಲ್ಲಿ ಇರಲಿಲ್ಲ…. ಆದರೆ ಈಗ ರಾತ್ರಿ 10 ಗಂಟೆಗೆ, ಅವರು ನಿಮ್ಮ ಆಸ್ತಿಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಉದ್ದೇಶದಿಂದ ವಕ್ಫ್ ಮಸೂದೆಯ ವಿರುದ್ಧ ಮತ ಚಲಾಯಿಸಲು ಸಂಸತ್ತಿಗೆ ತಲುಪಿದ್ದಾರೆ! ಎಲ್ಲಾ ಬೆಳವಣಿಗೆಗಳ ನಂತರ ಅವರು ಫಿರೋಜ್ ಅವರ ಮೊಮ್ಮಗ.” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ಸರ್ಚ್ ಮಾಡಿದಾಗ, ಕೆಲವು ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಸುದ್ದಿ ವರದಿಗಳ ಪ್ರಕಾರ, ಮಸೂದೆಯನ್ನು ಅಂಗೀಕರಿಸುವ ಮೊದಲು ಲೋಕಸಭೆಯಲ್ಲಿ 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಲಾಯಿತು. ಒಟ್ಟು 288 ಸದಸ್ಯರು ಪರವಾಗಿ ಮತ ಚಲಾಯಿಸಿದರೆ, 232 ಸದಸ್ಯರು ಅದನ್ನು ವಿರೋಧಿಸಿದರು.

ಚರ್ಚೆಯ ಸಂಪೂರ್ಣ ವೀಡಿಯೊ ಭಾರತೀಯ ಸಂಸತ್ತಿನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಅಸ್ಸಾಂನ ಜೋರ್ಹತ್‌ನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಧ್ಯಾಹ್ನ 1:16 ಕ್ಕೆ ಮಸೂದೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ ರಾಹುಲ್ ಸದನದಲ್ಲಿದ್ದರು.

ನಂತರ, ಸಂಜೆ 6:00 ರ ಸುಮಾರಿಗೆ, ಕೇರಳದ ಅಲಪ್ಪುಳದ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಸೂದೆಯ ಕುರಿತು ಮಾತನಾಡುತ್ತಿದ್ದಾಗ, ರಾಹುಲ್ ಕೂಡ ಲೋಕಸಭೆಯಲ್ಲಿದ್ದರು.

ಹಲವಾರು ಇತರ ಸುದ್ದಿ ವರದಿಗಳು ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಸದನದಲ್ಲಿ ಇದ್ದರು ಎಂಬುದನ್ನು ದೃಢಪಡಿಸುತ್ತವೆ.

ಆದರೆ, ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ರಾಹುಲ್ ಭಾಗವಹಿಸಲಿಲ್ಲ ಎಂದು ಸುದ್ದಿ ಸಂಸ್ಥೆ IANS ವರದಿ ಮಾಡಿದೆ.

 

 

ಸರ್ಕಾರದ ಒಡೆತನದ ಸಂಸದ್‌ ಟಿವಿಯ ದೃಶ್ಯಾವಳಿ ಪರೀಕ್ಷಿಸಿದಾಗ, ವಕ್ಫ್ ಮಸೂದೆ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಇತರೆ ನಾಯಕರ ಜತೆ ರಾಹುಲ್ ಅವರೂ ಕುಳಿತಿರುವುದು ಕಂಡಿತು. ವಕ್ಫ್ ಮಸೂದೆ ಕುರಿತ ಚರ್ಚೆಯ ವೇಳೆ, ಬೆಳಿಗ್ಗೆ ಅವರು ಕಲಾಪದಲ್ಲಿ ಹಾಜರಿದ್ದುದು ಖಚಿತವಾಯಿತು. ರಾಹುಲ್ ಸಂಸತ್‌ಗೆ ಬರುವ ವಿಡಿಯೊ ಹಂಚಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ ಮಾತ್ರ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು ಎಂಬ ಹೇಳಿಕೆ ನಕಲಿ. ಚರ್ಚೆಯ ಸಮಯದಲ್ಲಿಯೂ ಅವರು ಹಾಜರಿದ್ದರು. ಚರ್ಚೆ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರಣ, ಸಂಸದರು ಮಧ್ಯಂತರವಾಗಿ ವಿರಾಮಗಳನ್ನು ತೆಗೆದುಕೊಂಡರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಪ್ರಧಾನಿ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights