FACT CHECK | ಮೆಟ್ರೋ ರೈಲಿನಲ್ಲಿ ಯುವಕ-ಯುವತಿಯ ಕಿಸ್ಸಿಂಗ್ ವಿಡಿಯೋ ಇತ್ತೀಚಿನದಲ್ಲ
ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಯುವ ದಂಪತಿಗಳು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ, ಮೆಟ್ರೋ ರೈಲಿನಲ್ಲಿ ಒಬ್ಬ ಯುವಕ ಮತ್ತು ಯುವತಿ ಚುಂಬಿಸುತ್ತಿದ್ದಾರೆ. ಈ ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗಿದೆ. ದೆಹಲಿ ಮೆಟ್ರೋ ರೈಲನ್ನು ಓಯೋ ಹೋಟೆಲ್ಸ್ ಎಂದು ಮರುನಾಮಕರಣ ಮಾಡುವ ಬಗ್ಗೆ ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
दिल्ली मेट्रो का नाम oyo होटल होना चाहिए @gupta_rekha @LtGovDelhi @DelhiPolice https://t.co/qlKQ8Ip6H2
— Rahul Saini (@rahul_sain18850) April 13, 2025
ದೆಹಲಿ ಮೆಟ್ರೋವನ್ನು ಓಯೋ ಹೋಟೆಲ್ ಎಂದು ಮರುನಾಮಕರಣ ಮಾಡಬೇಕು – ಎಂದು ಶ್ರೀ ತ್ಯಾಗಿ ಎಂಬ ಹೆಸರಿನ ಎಕ್ಸ್ ಬಳಕೆದಾರರು ತಮ್ಮ ಖಾತೆಯಿಂದ ‘ದೆಹಲಿ ಮೆಟ್ರೋಗೆ ಸ್ವಾಗತ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೊವನ್ನು, ರಾಹುಲ್ ಸೈನಿ ಎಂಬ ಮತ್ತೊಬ್ಬ ಬಳಕೆದಾರರು ಅದನ್ನು ಮರು ಪೋಸ್ಟ್ ಮಾಡಿ, “ದೆಹಲಿ ಮೆಟ್ರೋವನ್ನು ಓಯೋ ಹೋಟೆಲ್ ಎಂದು ಮರುನಾಮಕರಣ ಮಾಡಬೇಕು” ಎಂದು ವಿಡಂಬನಾತ್ಮಕ ಕಾಮೆಂಟ್ ಮಾಡಿದ್ದಾರೆ. ಇದಲ್ಲದೆ, ದೆಹಲಿ ಮುಖ್ಯಮಂತ್ರಿ, ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಲಾಗಿದೆ.
![]()
ಈ ವಿಡಿಯೋದಲ್ಲಿ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವ ಜೋಡಿಯೊಂದು ಮೆಟ್ರೋ ಬಾಗಿಲಿನ ಬಳಿ ಕುಳಿತಿರುವುದನ್ನು ಕಾಣಬಹುದು, ಯುವತಿಯೊಬ್ಬಳು ಯುವಕನ ತೊಡೆಯ ಮೇಲೆ ಒರಗಿಕೊಂಡಿದ್ದಾಳೆ. ಎದುರಿಗಿರುವ ಸಹ ಪ್ರಯಾಣಿಕರನ್ನು ಲೆಕ್ಕಿಸದೆ ಆ ಯುವಕ ಯುವತಿಯನ್ನು ಚುಂಬಿಸುತ್ತಿದ್ದಾನೆ.
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಇತರ ಕೆಲವು ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿ ಯುವ ದಂಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ವಿಡಿಯೋ ತೆಗೆದವರು ಯಾರೇ ಆಗಿರಲಿ… ಅವರನ್ನು ಅಲ್ಲಿಯೇ ಹಿಡಿದು ಒದೆಯಬೇಕಿತ್ತು.” ಆಗಲೂ ಅವರು ಬದಲಾಗುವುದಿಲ್ಲ. “ಈ ಜನರು ಸಮಾಜವನ್ನು ಹಾಳು ಮಾಡುತ್ತಿದ್ದಾರೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಿದ್ದರೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದ ಬೆನ್ನಲ್ಲೆ ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆ ನಡೆದಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ದೆಹಲಿ ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ಚುಂಬಿಸುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೆಲವು ಕೀಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್ ಬಳಸಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೆಲವು ಸುದ್ದಿ ಲಿಂಕ್‌ಗಳು ಲಭ್ಯವಾಗಿವೆ. ಸುದ್ದಿಯನ್ನು ಪರಿಶೀಲಿಸಿದಾಗ, ಈ ವೀಡಿಯೊ ಎರಡು ವರ್ಷಗಳ ಹಿಂದಿನದು ಎಂದು ತಿಳಿದುಬಂದಿದೆ.
ಈ ವೀಡಿಯೊ ಮೇ 2023 ರಲ್ಲಿ ವೈರಲ್ ಆಗಿತ್ತು. ಈ ಘಟನೆಯ ಕುರಿತು ಸುದ್ದಿ ಲೇಖನವನ್ನು ಇಂಡಿಯಾ.ಕಾಮ್ ವೆಬ್‌ಸೈಟ್‌ನಲ್ಲಿ ಮೇ 11, 2023 ರಂದು ಪ್ರಕಟಿಸಲಾಗಿದೆ. ದೆಹಲಿ ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿ ಚುಂಬಿಸುತ್ತಿದ್ದಾಗ ಕೆಲವು ಪ್ರಯಾಣಿಕರು ಅದರ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ಯುವತಿ ಯುವಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಬರೆಯಲಾಗಿದೆ. ಅವರು ದೆಹಲಿ ಮೆಟ್ರೋ ರೈಲು ಆಡಳಿತಾಧಿಕಾರಿಗಳು ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ, ಜೋಡಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಟೈಮ್ಸ್ ನೌ ನವಭಾರತ್ ಒಂದು ವೀಡಿಯೊವನ್ನು ಸಹ ಪ್ರಕಟಿಸಿದೆ. ಹಾಗಾಗಿ ಈ ಘಮೆ ಎರಡು ವರ್ಷದ ಹಿಂದಿನದ್ದು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿ ಮತ್ತು ಯುವಕ ಚುಂಬಿಸುತ್ತಿರುವ ವಿಡಿಯೋ ಎರಡು ವರ್ಷಗಳ ಹಿಂದಿನದು. ಸಾಮಾಜಿಕ ಮಾಧ್ಯಮದಲ್ಲಿ ಹಳೆಯ ವೀಡಿಯೊವೊಂದನ್ನು ಮರು ಪೋಸ್ಟ್ ಮಾಡಲಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ಘಟನೆಯ ನಂತರ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಕ್ಫ್ (ತಿದ್ದುಪಡಿ) ಮಸೂದೆ 2024 ಚರ್ಚೆಯಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರೆ?

