ಶಿಕ್ಷಕಿಯರ ಶೌಚಾಲಯದಲ್ಲಿ ಸಿಸಿಟಿವಿ ಇಟ್ಟು ಬ್ಲಾಕ್‌ಮೇಲ್: ಸಂಬಂಳವಿಲ್ಲದೆ ದುಡಿಯುತ್ತಿದ್ದ ಶಿಕ್ಷಕಿಯರು!

ಶಾಲೆಯ ಮಹಿಳಾ ಶೌಚಾಲಯದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಸುಮಾರು 52ಕ್ಕೂ ಹೆಚ್ಚು ಶಿಕ್ಷಕಿಯರನ್ನು ಬ್ಲಾಕ್‌ಮೇಲ್‌ ಮಾಡಿ ಸಂಬಳವಿಲ್ಲದೆ ಹಲವು ತಿಂಗಳು ದುಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಪ್ರತಿ ತಿಂಗಳು ಶಿಕ್ಷಕಿಯರು ಸಂಬಂಧ ಕೇಳಿದಾಗ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, ಸಂಬಳ ಕೊಡದೆ ಬ್ಲಾಕ್‌ಮೇಟ್‌ ಮಾಡಲಾಗುತ್ತಿತ್ತು. ಹೀಗೆ ಹಲವು ತಿಂಗಳುಗಳ ಕಾಲ ಸಂಬಳ ಇಲ್ಲದೆ ದುಡಿದಿರುವ ಶಿಕ್ಷಕಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಖಾಸಗಿ ಚಿತ್ರಗಳನ್ನು ಚಿತ್ರೀಕರಿಸಿ ಸಂಬಂಳ ಕೊಡದೆ ಬ್ಲಾಕ್‌ಮೇಲ್‌ ಮಾಡಲಾಗುತ್ತಿದೆ. ಮಾನಕ್ಕೆ ಅಂಜಿ ಹಲವು ತಿಂಗಳು ಉಚಿತವಾಗಿ ದುಡಿದಿದ್ದು, ತಮ್ಮ ಬಾಕಿ ಇರುವ ಸಂಬಳ ತಮಗೆ ಸಿಗುವಂತೆ ಸಹಾಯ ನೀಡಬೇಕು ಎಂದು ಶಿಕ್ಷಕಿಯರು ಪೊಲೀಸರನ್ನು ಕೇಳಿದ್ದಾರೆ.

ಶಿಕ್ಷಕಿಯರ ದೂರಿನ ಆಧಾರ ಮೇಲೆ ಶಾಲೆಯ ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 354 (ಎ) (ಲೈಂಗಿಕ ಕಿರುಕುಳ) ಮತ್ತು 354 (ಸಿ) (ವಾಯ್ಯುರಿಸಮ್) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

‘ಕೊರೊನಾ ಸಂದರ್ಭದಿಂದಾಗಿ ಸಂಬಳ ನೀಡುವುದು ಕಷ್ಟವಾಗಿದೆ. ಹಾಗಾಗಿ ಕೆಲವು ತಿಂಗಳ ಸಂಬಳ ನೀಡಲಾಗಿಲ್ಲ. ಆದರೆ, ಶಿಕ್ಷಕಿಯರು ಹೇಳಿದಂತೆ ಬ್ಲಾಕ್‌ಮೇಲ್‌ ಮಾಡಿಲ್ಲ. ಮಹಿಳೆಯರ ಶೌಚಗೃಹದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಆದರೆ ಜೆಂಟ್ಸ್ ಶೌಚಗೃಹದಲ್ಲಿ ಅಳವಡಿಸಿರುವುದು ನಿಜ. ಕೆಲವು ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಶೌಚಗೃಹದಲ್ಲಿಯೇ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುರುಷರ ಶೌಚಗೃಹದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ’ ಎಂದು ಶಾಲೆಯ ಕಾರ್ಯದರ್ಶಿ ಹೇಳಿದ್ದಾರೆ.


ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್‌ ನಿರ್ಧಾರ, ಉಳಿಯುತ್ತಾ ಬಿಜೆಪಿ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights