ಕೊರೊನಾ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಮತ್ತೊಂದು ಆಘಾತ..!

ಕೊರೊನಾ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಮತ್ತೊಂದು ಆಘಾತ ಕಾದಿದೆ.. ಅದೆನೆಂದರೆ 130ಕೋಟಿ ಭಾರತಿಯರಿಗೆ ಕೊವಿದ್ 19 ಲಸಿಕೆ ಹಾಕಿಸಲು ಮೋದಿ ಸರಕಾರದ ಬಳಿ ಅಷ್ಟು ಹಣವಿದಿಯೇ ಎಂದು…

ಜನರ ಬದುಕನ್ನು ಹೈರಾಣಾಗಿಸಿರುವ ಕೊರೋನಾ ವೈರಾಣು ಸೋಂಕು ತಡೆಗೆ ತಯಾರಾಗುತ್ತಿರುವ ಲಸಿಕೆ ಎಲ್ಲರಿಗೂ ನೀಡಲು ಎಷ್ಟು ಖರ್ಚಾಗಬಹುದು? ಈ ಪ್ರಶ್ನೆಗೆ ಭಾರತೀಯ ಸಿರಮ್ ಸಂಸ್ಥೆಯ ಮುಖ್ಯಸ್ಥರೇ ಉತ್ತರ ನೀಡಿದ್ದಾರೆ. ಅವರು ಹೇಳುವ ಅಂಕಿ ಅಂಶ ಕೇಳಿದರೇ ಜನ ದಂಗಾಗುವುವದಂತೂ ಖಂಡಿತ.

ಸಿರಮ್ ಸಂಸ್ಥೆ ಮುಖ್ಯಸ್ಥ ಅಡರ್ ಪೂನಾವಾಲ ಹೇಳುವ ಪ್ರಕಾರ ದೇಸದ ಪ್ರತಿಯೊಬ್ಬರಿಗೂ ಕೋವಿಶೀಲ್ಡ್ ಲಸಿಕೆ ಹಾಕಿಸಲು ಕೇಂದ್ರ ಸರಕಾರ 80 ಸಾವಿರ ಕೋಟಿ ರೂ ವೆಚ್ಚ ಭರಿಸಬೇಕಾಗುತ್ತದೆ. ಆಕ್ಸ್ಫರ್ಡ್ ವಿವಿ ಹಾಗೂ ಆಸ್ಟ್ರಾ ಜೆನೆಕಾ ಫಂಶೀ ಜಂಟಿ ಸಹಯೋಗದಲ್ಲಿ ತಯಾರಾಗುತ್ತಿರುವ ಕೋವಿಶೀಲ್ಡ್ ಲಸಿಕೆಯ ಪ್ರಯೋಗದ ಹೊಣೆಯನ್ನು ಭಾರತದಲ್ಲಿ ಸಿರಮ್ ಸಂಸ್ಥೆ ವಹಿಸಿಕೊಂಡಿದೆ.

ದೇಶದ ವಿವಿಧೆಡೆ ಪ್ರಯೋಗ ಎರಡು ಹಾಗೂ ಮೂರನೇ ಹಂತದಲ್ಲಿ ಇದ್ದು, ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗುವ ನಿರೀಕ್ಷೆ ಇದೆ. ಈ ಲಸಿಕೆಯನ್ನು ಎಲ್ಲ ದೇಶವಾಸಿಗಳಿಗೆ ಲಭ್ಯವಾಗುವಂತೆ ಮಾಡಲು ಸರಕಾರ ಭಾರೀ ಮೊತ್ತದ ಹಣ ವ್ಯಯ ಮಾಡಬೇಕಿದೆ. ಇದು ಸರಕಾರದ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಪೂನಾವಾಲ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೇ ಎಲ್ಲರಿಗೂ ಕೋವಿಶೀಲ್ಡ್ ಲಸಿಕೆ ಹಾಕಲು ಕನಿಷ್ಟ ಎರಡು ವರ್ಷ ತಗುಲಲಿದೆ ಎಂದೂ ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights