ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ ರಾಜಸ್ಥಾನ ರಾಯಲ್ಸ್​ ತಂಡದ ಭರ್ಜರಿ ಗೆಲುವು!

ಸಂಜು ಸ್ಯಾಮ್ಸನ್​ ಅವರ ಅಬ್ಬರ ಆಟ ಮತ್ತ ರಾಹುಲ್​ ತಿವೇಟಿಯಾ ಅವರ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ ರಾಜಸ್ಥಾನ ರಾಯಲ್ಸ್​ ತಂಡ4 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಹೊಸ ಇತಿಹಾಸ ಬರೆದಿದೆ.

ಐಪಿಎಲ್​ನಲ್ಲಿ ಈ ಎಂದು ಕೇಳದ ದಾಖಲೆಯೊಂದನ್ನ ಸ್ಟೀವ್​ ಸ್ಮೀತ್​ ನೇತೃಥ್ವದ ರಾಜಸ್ತಾನ ರಾಯಲ್ಸ್​ ತಂಡ ಮಾಡಿದೆ. ಇದಕ್ಕೆ ಇಲ್ಲಿನ ಶಾರ್ಜಾ ಮೈದಾನ ಸಾಕ್ಷಿಯಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡ ಕನ್ನಡಿಗ ಮಯಾಂಕ್​ ಅಗರ್​ವಾಲ್​ (106) ಅವರ ಶತಕ ​ದ ನೆರವಿನಿಂದ 223 ರನ್​ ಗಳಿಸಿತು.
ಮಯಾಂಕ್​ ಅಗರ್​ವಾಲ್ ಕೇವಲ 26 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.ಜೊತೆಗೆ ಮಯಾಂಕ್​ಗೆ ಐಪಿಎಲ್​ನಲ್ಲಿ ಚೊಚ್ಚಲ ಶತಕವಾಗಿದೆ.

224 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ ನಾಯಕ ಸ್ಟೀವ್​ ಸ್ಮಿತ್​ (50),ಸಂಜು ಸ್ಯಾಮ್ಸನ್​ (85),ರಾಹುಲ್​ಥೇವಾಟಿಯಾ (53) ರನ್​ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್​ 19.3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 226 ರನ್​ಗಳಿಸಿ ಗೆಲುವಿನ ಕೇಕೆ ಹಾಕಿತು. ರಾಹುಲ್​ ತೆವಾಟಿಯಾ ಶೆಲ್ಡನ್​ ಕಾಟ್ರೆಲ್​ ಅವರ 18ನೇ ಓವರ್​ನಲ್ಲಿ ಐದು ಸಿಕ್ಸರ್​ ಚೆಚ್ಚಿ ಅಬ್ಬರಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights