ರಾಜಸ್ಥಾನ್: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 3 ದಿನಗಳ ಕಾಲ ಗ್ಯಾಂಗ್ ರೇಪ್!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಹುಡುಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆಕ್ರೋಶದ ಮಧ್ಯೆ, ಈಗ ಮತ್ತೊಂದು ಪ್ರಕರಣ ರಾಜಸ್ಥಾನದಿಂದ ಹೊರಬಿದ್ದಿದೆ.

ಇಬ್ಬರು ಅಪ್ರಾಪ್ತ ವಯಸ್ಕರನ್ನು ಅಪಹರಿಸಿ ಸತತ 3 ದಿನಗಳ ಕಾಲ ಅತ್ಯಾಚಾರ ಮಾಡಲಾಗಿದೆ.  ರಾಜಸ್ಥಾನದ ಬರಾನ್ ನಿಂದ ಅಪಹರಿಸಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಜೈಪುರ ಮತ್ತು ಕೋಟಾಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರ ಮೇಲೆ ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಆದಾಗ್ಯೂ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ಹೇಳಿಕೆಯಲ್ಲಿ ಅತ್ಯಾಚಾರ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ 13 ಮತ್ತು 15 ವರ್ಷ ವಯಸ್ಸಿನ ಬಾಲಕಿಯರ ತಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿ, ಇಬ್ಬರು ಆರೋಪಿಗಳು ಅಪ್ರಾಪ್ತ ವಯಸ್ಸಿನ ತಮ್ಮ ಹೆಣ್ಣುಮಕ್ಕಳನ್ನು ಸೆಪ್ಟೆಂಬರ್ 18 ರ ರಾತ್ರಿ ತಮ್ಮೊಂದಿಗೆ ಜಿಲ್ಲೆಯನ್ನು ತೊರೆಯುವಂತೆ ಆಮಿಷವೊಡ್ಡಿದರು. ನಂತರ ಅವರನ್ನು ಕೋಟಾ ಮತ್ತು ಜೈಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಮತ್ತು ಇತರ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ. ಸೆಪ್ಟೆಂಬರ್ 21 ರಂದು ಇಬ್ಬರು ಬಾಲಕಿಯರು ಕೋಟಾದಲ್ಲಿ ಪತ್ತೆಯಾಗಿದ್ದಾರೆ.

ಅಪ್ರಾಪ್ತ ಬಾಲಕಿಯರು ತಮ್ಮ ಹೇಳಿಕೆಯಲ್ಲಿ ಅತ್ಯಾಚಾರದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿಕೊಂಡರೆ, ಇಬ್ಬರು ಕ್ಯಾಮೆರಾದಲ್ಲಿ ಮಾದಕ ದ್ರವ್ಯ ಮತ್ತು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಒಪ್ಪಿಕೊಂಡರು.

ಈ ಮಧ್ಯೆ ಇಬ್ಬರು ಅಪ್ರಾಪ್ತ ವಯಸ್ಕರ ಕುಟುಂಬ ಆರೋಪಿಗಳ ವಿರುದ್ಧ ದೂರು ನೀಡದಿರಲು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದರು.

ಘಟನೆಯ ಬಗ್ಗೆ ಬಾಲಕಿಯರ ತಂದೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಘಟನೆಯ ಬಗ್ಗೆ ಬಾಲಕಿಯರು ಪೊಲೀಸರಿಗೆ ಹೇಳಿದಾಗ, ಆರೋಪಿಗಳು ಪೊಲೀಸರ ಮುಂದೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯರ ಕುಟುಂಬ ಆರೋಪಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights