ರೈತ ವಿರೋಧಿ ಕಾಯ್ದೆಗಳ ವಿರುದ್ಧ SDPI ‘ಕೃಷಿ ಸಂಹಾರ – ಬಿಜೆಪಿ ಹುನ್ನಾರ’ ಅಭಿಯಾನ!

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿಗೊಳಿಸುತ್ತಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ದ SDPI ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ’ಜಾಗೋ ಕಿಸಾನ್’ ಅಭಿಯಾನ ಆರಂಭಿಸುತ್ತಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ ’ಕೃಷಿ ಸಂಹಾರ ಬಿಜೆಪಿ ಹುನ್ನಾರ’ ಎಂಬ ಶಿರ್ಷಿಕೆಯ ಅಡಿಯಲ್ಲಿ ರೈತ ಜಾಗೃತಿ ಅಭಿಯಾನವನ್ನು ಅಕ್ಟೋಬರ್‌ 15 ರಿಂದ 31 ರವರೆಗೆ ನಡೆಸಲಿದೆ.

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ, ಸಂತೆಗಳಲ್ಲಿ, ಹಳ್ಳಿಗಳಲ್ಲಿ ರೈತರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಲಾಗುತ್ತದೆ. ರೈತ ಹೋರಾಟಗಾರರ ಸಮಾಲೋಚನಾ ಸಭೆಯನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಕೂಡಾ ಭಾಗವಹಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರವು PFI ಮತ್ತು SDPI ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆದಿತ್ತೇ? ಡೀಟೇಲ್ಸ್‌

“ಪಕ್ಷದ ಜಿಲ್ಲಾಮಟ್ಟದ ಎಲ್ಲಾ ಪದಾಧಿಕಾರಿಗಳಿಗೆ ಕಾಯ್ದೆಯೂ ಯಾವ ರೀತಿಯಲ್ಲಿ ಲೋಪದೋಷದಿಂದ ಕೂಡಿದೆ ಎಂಬ ಕಾರ್ಯಗಾರ ಈಗಾಗಲೇ ನಡೆದಿದೆ. ಅಭಿಯಾನದ ಪೋಸ್ಟರ್‌ ಹಾಗೂ ಕರಪತ್ರಗಳು ತಯಾರಾಗಿದ್ದು ಈಗಾಗಲೇ ಹಂಚುತ್ತಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಅಭಿಯಾನದ ಅಂಗವಾಗಿ ಮಸೂದೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕಾರ್ನರ್‌ ಮೀಟಿಂಗ್, ಕಟ್ಟೆ ಚರ್ಚೆ ಸೇರಿದಂತೆ ಸಮಾಲೋಚನಾ ಸಭೆಯನ್ನು ಎಲ್ಲಾ ಹಳ್ಳಿಗಳಲ್ಲಿ ನಡೆಸಲಿದ್ದೇವೆ” ಎಂದು ಅಭಿಯಾನದ ರಾಜ್ಯ ಕವ್ವೀನರ್‌ ಅಬ್ರಾರ್ ಅಹ್ಮದ್ ಹೇಳಿದ್ದಾರೆ.

ಅಭಿಯಾನದ ಕೊನೆಯ ದಿನ ಅಕ್ಟೋಬರ್‌ 31 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಅಭಿಯಾನಕ್ಕೆ ತಾತ್ಕಾಲಿಕ ತೆರೆ ಎಳೆಯಲಿದ್ದೇವೆ ಎಂದು ಅಬ್ರಾರ್‌ ತಿಳಿಸಿದ್ದಾರೆ.


ಇದನ್ನೂ ಓದಿ: SDPI ಬಗ್ಗೆ ಬಿಜೆಪಿಗರು ಮಾತನಾಡದಂತೆ ಬಿಎಸ್‌ವೈ ಆದೇಶಿದ್ದಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights