ನವರಾತ್ರಿ: ಪೂಜೆ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!

ನವರಾತ್ರಿ ಪೂಜೆ ಮುಗಿಸಿ ಮನೆಗೆ ತೆರೆಳುತ್ತಿದ್ದ 19 ವರ್ಷದ ಯುವತಿಯ ಮೇಲೆ ಸಾಮಾಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಮಹೊಬಾ ಜಿಲ್ಲೆಯ ಪಾನ್ವಾಡಿಯಲ್ಲಿ ನಡೆದಿದೆ.

ಬುಧವಾರ ರಾತ್ರಿ ನವರಾತ್ರಿ ಹಬ್ಬದ ದುರ್ಗಾ ಪೂಜೆಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಯುವತಿಯ ಮೇಲೆ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪನ್ವಾಡಿ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ವರದಿಯಾಗಿದ್ದು. ಪೊಲೀಸರು ಕೂಡಲೇ ಕ್ರಮ ಕೈಗೊಂಡಿದ್ದಾರೆ ಮತ್ತು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಆರೋಪಿಗಳನ್ನು ಬುಧವಾರ ರಾತ್ರಿ ಬಂಧಿಸಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂತಹ ಕ್ರುತ್ಯಗಳನ್ನು ವಿರೋಧಿಸಿ, ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ವಕೀಲೆ ದೀಪಿಕಾ ಸಿಂಗ್‌ ರಜಾವತ್ ಅವರು ವ್ಯಂಗ್ಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ವ್ಯಂಗ್ಯ ಚಿತ್ರವು ಎರಡು ವಿರೋಧಾಭಾಸದ ದೃಶ್ಯಗಳನ್ನು ಸಾರಾಸಗಟಾಗಿ ತೋರಿಸಿದೆ. ಒಂದು ಚಿತ್ರದಲ್ಲಿ, ನವರಾತ್ರಿಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯೊಬ್ಬ ಹಿಂದೂ ದೇವತೆಯ ಪಾದಗಳನ್ನು ಸ್ಪರ್ಶಿಸಿ ನಮಿಸುತ್ತಾನೆ. ಪಕ್ಕದ ಚಿತ್ರದಲ್ಲಿ, “ಇತರೆ ದಿನಗಳು” ಎಂಬ ಶೀರ್ಷಿಕೆಯೊಂದಿಗೆ, ಅದೇ ಪುರುಷನು ಮಹಿಳೆಯ ಎರಡೂ ಕಾಲುಗಳನ್ನು ಆಕ್ರಮಣಕಾರಿಯಾಗಿ ಹಿಡಿದುಕೊಂಡಿರುತ್ತಾನೆ. ಇದು ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಧ್ವನಿಸುತ್ತದೆ ಎಂಬುದು ವ್ಯಂಗ್ಯಚಿತ್ರದ ಸಾರವಾಗಿತ್ತು.

ಅವರ ಟ್ವೀಟ್‌ ನೋಡಿದ ಸಂಘಪರಿವಾರ ಗುಂಪೊಂದು ಅವರ ಮನೆ ಮುಂದೆ ದಾಂದಲೆ ನಡೆದಿ, ಕೊಲೆ ಬೆದರಿಕೆ ಹಾಕಿತ್ತು. ದೀಪಿಕಾ ಸಿಂಗ್‌ ಅವರು ಈ ದೇಶದ ವಾಸ್ತವವೇನು ಎಂದು ಟ್ವೀಟ್‌ ಮಾಡಿದ್ದರೋ, ಅದಕ್ಕೆ ಸಾಕ್ಷಿ ಎಂಬಂತೆ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಇದು ವ್ಯಂಗ್ಯಚಿತ್ರ ಹೇಳಹೊರಟಿದ್ದ ಸತ್ಯವನ್ನು ಹೊರಗಿಟ್ಟಿದೆ.


ಇದನ್ನೂ ಓದಿ: ಗೌರಿ ಲಂಕೇಶರಂತೆ ನನ್ನನ್ನೂ ಕೊಲ್ಲಬಹುದು ಎನ್ನಿಸಿತ್ತು: ವಕೀಲೆ ದೀಪಿಕಾ ಸಿಂಗ್‌ ರಜಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights