ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡುವುದಕ್ಕಿಂತ ಸನ್ಯಾಸ ಸ್ವೇಕಾರವೇ ಮೇಲು: ಮಾಯಾವತಿ

ಉತ್ತರ ಪ್ರದೇಶ ಎಂಎಲ್‌ಸಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗೆ ಬೇಕಾದರೂ ಮತಚಲಾಯಿಸುತ್ತೇವೆ ಎಂದು ಹೇಳಿದ್ದ ಹೇಳಿಕೆಯನ್ನು ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಗಳು ದುರುಪಯೋಗ ಮಾಡಿಕೊಂಡಿವೆ. ಬಿಎಸ್‌ಪಿಯು ಯಾವುದೇ ಕಾರಣಕ್ಕೂ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷ (ಬಿಜೆಪಿ) ದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎರಡೂ ಪಕ್ಷಗಳ ಸಿದ್ಧಾಂತಗಳು ವಿರುದ್ಧವಾಗಿವೆ. ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ರೀಜಕೀಯದಿಂದ ಸನ್ಯಾಸ (ನಿವೃತ್ತಿ) ತೆಗೆದುಕೊಳ್ಳುವುದೇ ಮೇಲು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ರಾಜ್ಯದಲ್ಲಿ ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಗಳನ್ನು ಸೋಲಿಸಲು ತಮ್ಮ ಪಕ್ಷ(ಬಿಎಸ್‌ಪಿ)ವು ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ ಎಂದು ಕಳೆದ ವಾರ ಮಾಯಾವತಿ ಹೇಳಿದ್ದರು.

ತಮ್ಮ ಹೇಳಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವ ಕಾಂಗ್ರೆಸ್‌ ಮತ್ತು ಎಸ್‌ಪಿ ಪಕ್ಷಗಳು, ಮುಸ್ಲಿಂ ಸಮುದಾಯ ಬಿಎಸ್‌ಪಿಯಿಂದ ದೂರ ಉಳಿಯುವಂತೆ ಮಾಡುತ್ತಿವೆ. ಅದಕ್ಕಾಗಿ ಅಪಪ್ರಚಾರ ಮಾಡುತ್ತಿವೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ MLC ಚುನಾವಣೆಯಲ್ಲಿ SP ಅಭ್ಯರ್ಥಿಯನ್ನು ಸೋಲಿಸಲು BJPಗೆ ಬೆಂಬಲ: ಮಾಯಾವತಿ

“ಭವಿಷ್ಯದಲ್ಲಿ ಯಾವುದೇ ಚುನಾವಣೆಗಳಲ್ಲಿ ಬಿಜೆಪಿಯ ಜೊತೆಗೆ ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಎಸ್‌ಪಿ ಕೋಮು ಪಕ್ಷದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ.  ನಮ್ಮ ಸಿದ್ದಾಂತ ಸರ್ವಜನ, ಸರ್ವ ಧರ್ಮದ ಹಿತವನ್ನು ಒಳಗೊಂಡಿದೆ. ನಮ್ಮ ಸಿದ್ಧಾಂತಕ್ಕೆ ಬಿಜೆಪಿಯ ಸಿದ್ಧಾಂತ ವಿರುದ್ಧವಾಗಿದೆ. ಕೋಮು, ಜಾತಿ, ಬಂಡವಾಳ ಶಾಹಿ ಸಿದ್ಶಾಂತವನ್ನು ಹೊಂದಿರುವ ಬಿಜೆಪಿಯ ಜೊತೆಗೆ ಬಿಎಸ್‌ಪಿ ಮೃತ್ರಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಾನು ಕೋಮುವಾದಿ, ಜಾತಿವಾದಿ, ಬಂಡವಾಳಶಾಹಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ನನ್ನ ಹಿಂದಿನ ಹೇಳಿಗೆ ನಾನು ಬದ್ದವಾಗಿದ್ದೇನೆ. ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಎರಡನೇ ಅಭ್ಯರ್ಥಿಯ ಸೋಲು ಖಚಿತ. ಎಸ್‌ಪಿ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದ ನಮ್ಮ ಪಕ್ಷವು ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ. ನನ್ನ ಹೇಳಿಯನ್ನು ಕಾಂಗ್ರೆಸ್‌ ಮತ್ತು ಎಸ್‌ಪಿ ಪಕ್ಷಗಳು ದುರುಪಯೋಗ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದರು.


ಇದನ್ನೂ ಓದಿ: ಸಂತನ ಆಡಳಿತದಲ್ಲಿ ಸಾಧುಗಳಿಗೂ ರಕ್ಷಣೆಯಿಲ್ಲ: ಯೋಗಿ ವಿರುದ್ಧ ಮಾಯಾವತಿ ಆಕ್ರೋಶ


ಇದನ್ನೂ ಓದಿ: “ಈ ಮುಖ್ಯಮಂತ್ರಿ ಯಾವ ರೀತಿಯ ರಾಮ ರಾಜ್ಯ ಕಟ್ಟುತ್ತಾರೆ?” ಯೋಗಿ ಮೇಲೆ ಪ್ರತಿಪಕ್ಷಗಳ ಕಿಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights