ಕೊರೊನಾ ಮಧ್ಯೆ ವೈರಲ್ ಆಯ್ತು ಒಡಿಶಾದ ‘ಆಂಟಿವೈರಸ್ ಟಿಫಿನ್ ಸೆಂಟರ್’…!
ಕೊರೊನಾ ಮಧ್ಯೆ ಉಪಾಹಾರ ಗೃಹವೊಂದು ಭಾರೀ ಸುದ್ದಿ ಮಾಡಿದ್ದು ಇದರ ಹೆಸರಿನಿಂದ ಅಂತರ್ಜಾಲದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಹೌದು… ಒಡಿಶಾದಲ್ಲಿ ‘ಆಂಟಿವೈರಸ್ ಟಿಫಿನ್ ಸೆಂಟರ್’ ಎಂಬ ಉಪಾಹಾರ ಗೃಹವಿದೆ. ಈ ಉಪಾಹಾರ ಗೃಹದ ಹೆಸರಿನ ಪೋಸ್ಟ್ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ. ಆಂಟಿವೈರಸ್ ಟಿಫಿನ್ ಕೇಂದ್ರದ ಚಿತ್ರ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟಾಗಿನಿಂದಲೂ ಸಾಮಾಜಿಕ ಮಾಧ್ಯಮ ಇದನ್ನು ಚರ್ಚಿಸುವಲ್ಲಿ ನಿರತವಾಗಿದೆ.
ಆಂಟಿವೈರಸ್ ಟಿಫಿನ್ ಸೆಂಟರ್ ಎಂದರೇನು?
ಆಂಟಿವೈರಸ್ ಟಿಫಿನ್ ಸೆಂಟರ್ ಎಂಬ ರಸ್ತೆಬದಿಯ ಉಪಾಹಾರ ಗೃಹದ ಚಿತ್ರವನ್ನು ಮಂಗಳವಾರ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಅದು ಶೀಘ್ರದಲ್ಲೇ ವೈರಲ್ ಆಗಿದೆ. ಚಿತ್ರದಲ್ಲಿ ನೋಡಿದಂತೆ ಉಪಾಹಾರ ಗೃಹದ ಮುಂದೆ ಇರಿಸಲಾಗಿರುವ ಮೆನು ಬೋರ್ಡ್ ಪ್ರಕಾರ, ಆಂಟಿವೈರಸ್ ಟಿಫಿನ್ ಸೆಂಟರ್ ಬರ್ಹಾಂಪುರದ ಗಾಂಧಿನಗರ ಮುಖ್ಯ ರಸ್ತೆಯಲ್ಲಿದೆ. ಆದರೆ ಆಂಟಿವೈರಸ್ ಟಿಫಿನ್ ಸೆಂಟರ್ ಎಂಬ ಹೆಸರು ಯಾಕೆ ಎಂಬುದು ಸ್ಪಷ್ಟವಾಗಿಲ್ಲ.
ಮೆನುವಿನಲ್ಲಿ ಏನಿದೆ?
ಆಂಟಿವೈರಸ್ ಟಿಫಿನ್ ಕೇಂದ್ರದಲ್ಲಿ ಇಡ್ಲಿ, ದೋಸೆ, ಸಮೋಸಾ, ಉಪ್ಮಾ, ವಡಾ, ಪುರಿ ಮತ್ತು ಪಕೋಡಿ ಮುಂತಾದ ಆಹಾರ ಪದಾರ್ಥಗಳು ಲಭ್ಯವಿದೆ ಎಂದು ಮೆನು ಬೋರ್ಡ್ ನಲ್ಲಿ ತಿಳಿಸಲಾಗಿದೆ.
ಉಪಾಹಾರ ಗೃಹದ ಮುಂದೆ ಹಲವಾರು ಜನರು ಊಟ ಮಾಡುವ ಫೋಟೋ ತೆಗೆಯಲಾಗಿದೆ. ಇಲ್ಲಿ ಆಸನ ವ್ಯವಸ್ಥೆ ಇಲ್ಲ.
ಪೋಸ್ಟ್ ಅನ್ನು ಇಲ್ಲಿ ನೋಡಿ:

ವೈರಲ್ ಪೋಸ್ಟ್ ಬಗ್ಗೆ ಇಂಟರ್ನೆಟ್ ಏನು ಹೇಳಿದೆ?
ಕೊರೋನವೈರಸ್ ಹಿನ್ನೆಲೆಯಲ್ಲಿ ವಿಲಕ್ಷಣ ಸುದ್ದಿಗಳಿಗೆ ಯಾವುದೇ ಕೊರತೆಯಿಲ್ಲ. ಹಲವಾರು ಬಳಕೆದಾರರು ತಮ್ಮ ಆಲೋಚನೆಗಳನ್ನು ಮತ್ತು ಅಭಿಪ್ರಾಯಗಳನ್ನು ಪೋಸ್ಟ್ನ ಕಾಮೆಂಟ್ಗಳ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
“ಅವರು ಊಟಕ್ಕೂ ಮುನ್ನ ಸ್ಯಾನಿಟೈಸರ್ ಅನ್ನು ಬಳಸಿಲ್ಲ” ಎಂದು ಬಳಕೆದಾರರೊಬ್ಬರು ಹೇಳಿದರು.
“ಯಾರೂ ಮುಖವಾಡ ಧರಿಸಿದಿಲ್ಲ ಅಥವಾ ಸಾಮಾಜಿಕ ದೂರವಿಲ್ಲ” ಎಂದು ಮತ್ತೊಂದು ಕಾಮೆಂಟ್ ಬರೆಯಲಾಗಿದೆ.

