ಕಾರಿನ ಡೋರ್ ತೆಗೆಯಲು ಹೋದ ಮಹಿಳೆ ಶಾಕ್ : ಡೋರ್ ಹ್ಯಾಂಡಲ್‌ನಲ್ಲಿತ್ತು ಅಪಾಯಕಾರಿ ಪ್ರಾಣಿ..

ಲಾಕ್ ಡೌನ್ ನಿಂದಾಗಿ ಜನ ವಾಹನಗಳನ್ನು ನಿಲ್ಲಿಸಿದ ಜಾಗದಿಂದ ತೆಗೆದು ತಿಂಗಳುಗಳೇ ಕಳೆದಿವೆ. ಕೆಲವರಂತೂ ಲಾಕ್ ಡೌನ್ ಸಡಿಲಗೊಂಡರೂ ವಾಹನಗಳನ್ನು ರಸ್ತೆಗಿಳಿಸಿಲ್ಲ. ತಿಂಗಳುಗಳ ವರೆಗೆ ವಾಹನಗಳು ಚಲಿಸದೇ ಜೇಡುಕಟ್ಟಿರುವ ಸುದ್ದಿಗಳು ಸಾಕಷ್ಟು ಕೇಳಿದ್ದೇವೆ ನೋಡೊದ್ದೇವೆ. ಹೀಗೆ ನ್ಯೂ ಸೌತ್ ವೇಲ್ಸ್‌ನ ಆರ್ಮಿಡೇಲ್‌ನ ಮಹಿಳೆಯೊಬ್ಬರು ಕಾರ್ ಡೋರ್ ತೆಗೆಯಲು ಹೋಗಿ ಶಾಕ್ ಆಗಿದ್ದಾರೆ. ಅವರ ಕಾರ್ ಹ್ಯಾಂಡಲ್ ನಲ್ಲಿಯೇ ಅಪಾಯಕಾರಿ ಹುಳವೊಂದು ಅವಿತು ಕುಳಿತಿತ್ತು.

ಹೌದು…  ಆಕೆ ಎಂದಿನಂತೆ ತನ್ನ ಕಾರಿನ ಡೋರ್ ತೆರೆಯಲು ಕೈ ಹಾಕಿದ್ದಾಳೆ. ಕೈಗೆ ಏನೋ ತಾಕಿದ ಹಾಗೆ ಆಕೆಗೆ ಬಾಸವಾಗಿ ತಕ್ಷಣ ಕೈಯನ್ನು ಹಿಂತೆಗೆದುಕೊಂಡಿದ್ದಾಳೆ. ಗಮನವಿಟ್ಟು ನೋಡಿದಾಗ ಅಪಾಯಕಾರಿ ಜೇಡರ ಹುಳ ಕಾರ್ ಡೋರ್ ಹ್ಯಾಂಡಲ್ ನಲ್ಲಿ ಅವಿತು ಕುಳಿತಿರುವುದನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಜೋರಾಗಿ ಕಿರುಚಿದ್ದಾಳೆ. ಪ್ರಜ್ಞೆಯನ್ನೇ ಕಳುದುಕೊಂಡಿದ್ದಾಳೆ. ನಂತರ ಆಕೆ ಸುಧಾರಿಸಿಕೊಂಡ ಬಳಿಕ ಒಂದು ವಾರ ಆಕೆ ಕಾರಿನ ಕಡೆಗೆ ಹೋಗಲೇ ಇಲ್ಲ.

ಈ ಘಟನೆಯ ನಂತರ, ಮಹಿಳೆ ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋದಲ್ಲಿ ನೀವು ಮಹಿಳೆಯ ಕಾರಿನ ಗೇಟ್‌ನಲ್ಲಿದ್ದ ಕೂದಲುಳ್ಳ ಜೇಡವನ್ನು ನೋಡಬಹುದು. ಆದಾಗ್ಯೂ ಈ ಪ್ರಾಣಿಯನ್ನು ಆಸ್ಟ್ರೇಲಿಯಾದ ಜೇಡ ಎಂದು ಗುರುತಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಅಂದಹಾಗೆ ಜೇಡವನ್ನು ನೋಡಿದ ನಂತರ ಅವರು ಸುಮಾರು ಒಂದು ವಾರದವರೆಗೆ ಕಾರಿನ ಸುತ್ತಲೂ ಚಲಿಸಲಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *