ಅಯ್ಯೋ ಕಾಪಾಡಿ…! : ಗಂಡನೆದುರೇ ಐದು ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ!

ಪತಿಯ ಮುಂದೆ 17 ಮಂದಿ ಕಾಮುಕರು ಐದು ಮಕ್ಕಳ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಜಾರ್ಖಂಡ್‌ನ ರಾಂಚಿಯಿಂದ ಈಶಾನ್ಯಕ್ಕೆ 300 ಕಿ.ಮೀ ದೂರದಲ್ಲಿರುವ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ.

ಮಂಗಳವಾರ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಈ ಅಪರಾಧ ದಾಖಲಾಗಿದ್ದು, ಮಹಿಳೆ ತನ್ನ ಪತಿಯೊಂದಿಗೆ ಜಾತ್ರೆಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಆರೋಪಿಗಳು ಜಾತ್ರೆಗೆ ಹೋಗಿ ವಾಪಾಸ್ಸಾಗುತ್ತಿದ್ದ ದಂಪತಿಗಳನ್ನು ದಾರಿಪ್ಪಿಸಿದ್ದಾರೆ. ನಂತರ ಅಟ್ಯಾಕ್ ಮಾಡಿದ ಕಾಮುಕರು ಗಂಡನಿಗೆ ತಳಿಸಿ ಆತನೆದುರೇ ಪತ್ನಿ ಮೇಲೆ ಎರಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.  ಸದ್ಯ ಅತ್ಯಾಚಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಹೆಡೆಮುರುಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ.

ಅಪರಾಧದ ಬಗ್ಗೆ ತಿಳಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಮಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಮ್ಯಾನ್‌ಹಂಟ್ ಪ್ರಾರಂಭಿಸಿದ್ದು, ಐದು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಯ ದಾಖಲೆಗಳ ಪ್ರಕಾರ ಪ್ರತಿದಿನ ಸರಾಸರಿ ನಾಲ್ಕು ಪ್ರಕರಣಗಳು ಈ ಪ್ರದೇಶದಲ್ಲಿ ದಾಖಲಾಗಿವೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಈ ವರ್ಷದ ಜುಲೈ ಅಂತ್ಯದವರೆಗೆ 1,033 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. 2019 ರಲ್ಲಿ ಒಟ್ಟು 1,416 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2018 ರಲ್ಲಿ 1,090, 2017 ರಲ್ಲಿ 914, 2016 ರಲ್ಲಿ 1,032 ಮತ್ತು 2015 ರಲ್ಲಿ 1,053 ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights