ಭಾರತದಲ್ಲಿ 20 ಜನರಿಗೆ ಬ್ರಿಟನ್ ಹೊಸ ರೂಪಾಂತರಿ ಕೊರೊನಾ..!
ಬ್ರಿಟನ್ ನಿಂದ ದ ಭಾರತಕ್ಕೆ ಮರಳಿದ ಕನಿಷ್ಠ 20 ಜನರು ಹೊಸ ರೂಪಾಂತರಿ ಕೊರೊನಾವೈರಸ್ ತಗುಲಿರುವುದು ದೃಢವಾಗಿದೆ. ಯುಕೆಯಿಂದ ಹಿಂದಿರುಗಿದ ಆರು ಪ್ರಯಾಣಿಕರಲ್ಲಿ ಹೊಸ ಕೋವಿಡ್ -19 ಕಾಣಿಸಿಕೊಂಡು ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಬೆಂಗಳೂರಿನಲ್ಲಿ 3 ಜನರಲ್ಲಿ, ಶಿವಮೊಗ್ಗದಲ್ಲಿ 4 ಜನರಿಗೆ ಹೊಸ ರೂಪಾಂತರಿ ಕೊರೊನಾ ಕಾಣಿಸಿಕೊಂಡಿದೆ.
ಯುಕೆಯಲ್ಲಿ ವೇಗವಾಗಿ ಹರಡುವ ಹೊಸ ಕೋವಿಡ್ ಪತ್ತೆಯಾದ ನಂತರ ಭಾರತ ಸರ್ಕಾರ ಎಚ್ಚರಗೊಂಡಿದೆ. ಹೀಗಾಗಿ ಇತ್ತೀಚೆಗೆ ಡಿಸೆಂಬರ್ 31 ರವರೆಗೆ ಯುಕೆಗೆ ಎಲ್ಲಾ ವಿಮಾನಗಳನ್ನು ನಿಷೇಧಿಸಿತ್ತು. ಮಾತ್ರವಲ್ಲದೇ ನಿಷೇಧಕ್ಕೆ ಮುಂಚಿತವಾಗಿ ಯುಕೆಯಿಂದ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಸಕ್ರಿಯವಾಗಿ ಪರೀಕ್ಷಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಯುಕೆ ಯಿಂದ ವಿಮಾನಗಳ ನಿಷೇಧವನ್ನು ವಿಸ್ತರಿಸುವ ಸಾಧ್ಯತೆ ಇದೆ. “ವಿಮಾನಗಳ ನಿಷೇಧ ಕಾಲಾವಧಿ ಸ್ವಲ್ಪ ವಿಸ್ತರಣೆಯನ್ನು ನಾನು ಊಹಿಸುತ್ತೇನೆ. ಆದರೆ ವಿಸ್ತರಣೆ ದೀರ್ಘ ಅಥವಾ ಅನಿರ್ದಿಷ್ಟ ವಿಸ್ತರಣೆಯಾಗಿದೆ ಎಂದು ನಾನು ನಿರೀಕ್ಷಿಸುವುದಿಲ್ಲ” ಎಂದು ಹರ್ದೀಪ್ ಸಿಂಗ್ ಪುರಿ ಸುದ್ದಿಗಾರರಿಗೆ ತಿಳಿಸಿದರು.
ಆದರೆ ಹೊಸ ಕೋವಿಡ್ ಸ್ಟ್ರೈನ್ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ ಮತ್ತು ಸ್ವೀಡನ್‌ನಂತಹ ಅನೇಕ ದೇಶಗಳಲ್ಲಿಯೂ ಹರಡಿರುವುದರಿಂದ ಯುಕೆ ಯಿಂದ ನಿರ್ದಿಷ್ಟವಾಗಿ ಮರಳಿದ ಜನರನ್ನು ಪರೀಕ್ಷಿಸುವುದು ಸಾಕಾಗುವುದಿಲ್ಲ. ಭಾರತದ ಆರೋಗ್ಯ ಸಚಿವಾಲಯ ಈಗ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇಕಡ 5 ರಷ್ಟು ಹೊಸ ಕೋವಿಡ್ -19 ರೂಪಾಂತರವನ್ನು ಪರೀಕ್ಷಿಸಲು ನಿರ್ಧರಿಸಿದೆ.

