ನೌಕಾ ಗುಪ್ತಚರ ಮಾಹಿತಿಗಾಗಿ ನೀರೊಳಗಿನ ಡ್ರೋನ್ ತಯಾರಿಸಿದ ಚೀನಾ…!

ಚೀನಾ ಕುತಂತ್ರದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಈ ಕುತಂತ್ರ ಬುದ್ದಿ ಚೀನಾಕ್ಕೆ ಅದೆಷ್ಟು ಬಾರಿ ಪಾಠ ಕಲಿಸಿದರೂ ಪ್ರಯೋಜನವೇ ಇಲ್ಲ. ಮಾರಣಾಂತಿ ಕೊರೊನಾ ವೈರಸ್ ವಿಶ್ವವ್ಯಾಪಿ ಹರಡಿ, ಭಾರತದ ಗಡಿ ಭಾಗದಲ್ಲಿ ಅಶಾಂತಿ ಸೃಷ್ಟಿಸಿದ ಚೀನಾ ಮತ್ತೊಂದು ಚಾಲಾಕಿತನ ಪ್ರದರ್ಶಿಸಲು ಮುಂದಾಗುತ್ತಿದೆ.

ಹೌದು… ಚೀನಾ ಹಿಂದೂ ಮಹಾಸಾಗರದಲ್ಲಿ ಸೀ ವಿಂಗ್ (ಹೈಯಿ) ಗ್ಲೈಡರ್ ಎಂಬ ನೀರೊಳಗಿನ ಡ್ರೋನ್‌ಗಳನ್ನು ನಿಯೋಜಿಸಿದೆ. ಇದು ತಿಂಗಳುಗಟ್ಟಲೆ ಕಾರ್ಯನಿರ್ವಹಿಸಬಹುದಾದ ಸಾಮಾರ್ಥ್ಯವನ್ನು ಹೊಂದಿದೆ. ನೌಕಾ ಗುಪ್ತಚರ ಮಾಹಿತಿಗಳನ್ನು ಕಲೆ ಹಾಕುವ ಉದ್ದೇಶಗಳಿಗಾಗಿ ಇದನ್ನು ತಯಾರಿಸಲಾಗಿದೆ ಎನ್ನಲಾಗುತ್ತಿದೆ.

ಈ ಸಮುದ್ರ ಗ್ಲೈಡರ್‌ಗಳು ಒಂದು ಬಗೆಯ ಅನ್‌ಕ್ರ್ಯೂವ್ಡ್ ಅಂಡರ್ವಾಟರ್ ವೆಹಿಕಲ್ (ಯುಯುವಿ) ಆಗಿದ್ದು, ಇವುಗಳನ್ನು 2019 ರ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭಿಸಲಾಗಿದೆ. ಇವುಗಳನ್ನು ಫೆಬ್ರವರಿಯಲ್ಲಿ 3,400 ಕ್ಕಿಂತಲೂ ಹೆಚ್ಚು ತಯಾರಿಸುವ ಸಾಧ್ಯತೆ ಇದೆ.

ರಕ್ಷಣಾ ತಜ್ಞರ ಪ್ರಕಾರ ಈ ಗ್ಲೈಡರ್‌ಗಳು ದೊಡ್ಡ ರೆಕ್ಕೆಗಳಿಂದ ಗ್ಲೈಡ್‌ಗೆ ದೀರ್ಘಾವಧಿಯವರೆಗೆ ಚಲಿಸಬಲ್ಲವು. ಅವು ವೇಗವಾಗಿ ಅಥವಾ ಚುರುಕಾಗಿರುವುದಿಲ್ಲ. ಆದಾಗ್ಯೂ ಅವುಗಳನ್ನು ದೀರ್ಘ-ಶ್ರೇಣಿಯ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಇದಲ್ಲದೆ ಹಿಂದೂ ಮಹಾಸಾಗರದಲ್ಲಿ ಇರಿಸಲಾಗಿರುವ ಈ ಚೀನೀ ಗ್ಲೈಡರ್‌ಗಳು ಸಮುದ್ರಶಾಸ್ತ್ರದ ದತ್ತಾಂಶವನ್ನು ಸಂಗ್ರಹಿಸುತ್ತಿವೆ ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಸವಾಲುಗಳನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಈ ತಿಂಗಳ ಆರಂಭದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿನ (ಐಒಆರ್) ಕಾರ್ಯತಂತ್ರದ ನೆಲೆಗಳ ಸ್ಪರ್ಧೆಗೆ ಜಗತ್ತು ಸಾಕ್ಷಿಯಾಗುತ್ತಿದೆ ಎಂದು ಹೇಳಿದ್ದು, ಇದು ಮುಂದಿನ ಕಾಲದಲ್ಲಿ ವೇಗವನ್ನು ಪಡೆಯಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಚೀನೀ ಗ್ಲೈಡರ್‌ಗಳ ತಯಾರಿಕೆಯ ಸುಳಿವು ದೇಶಕ್ಕೆ ಎಚ್ಚರಿಕೆಯ ಸಂಕೇತಗಳಾದಂತೆ ತೋರುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights