ಬಂದರೆ ಸೇರಿಸಿಕೊಳ್ಳುತ್ತೇವೆ: ಬಿಜೆಪಿ-ಜೆಡಿಎಸ್‌ ವಿಲೀನಕ್ಕೂ ರೆಡಿ ಇದೆ ಬಿಜೆಪಿ!

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ವಿಲೀನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಫುಲ್‌ಸ್ಟಾಪ್‌ ಇಡುವ ಉದ್ದೇಶದಿಂದ ಉಭಯ ಪಕ್ಷಗಳ ನಾಯಕರು ಯಾವುದೇ ಕಾರಣಕ್ಕೂ ವಿಲೀನವಾಗುವುದಿಲ್ಲ. ವಿಷಯಾಧಾರಿತ ಬೆಂಬಲ ನೀಡುತ್ತೇವೆ-ಪಡೆಯುತ್ತೇವೆ ಎಂದು ಹೇಳಿದ್ದರು.

ಆದರೂ, ಈ ಚರ್ಚೆ ಇನ್ನೂ ನಿಂತಿಲ್ಲ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ನಮ್ಮ ತತ್ವ-ವಿಚಾರ ಒಪ್ಪಿಕೊಂಡು ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಶನಿವಾರ ಹೇಳಿದ್ದಾರೆ.

ನಮ್ಮ ಮನೆಯೊಳಗಿನ ಸಂಗತಿಯನ್ನು ಬಾಹ್ಯವಾಗಿ ಚರ್ಚೆ ಮಾಡಲು ಆಗಲ್ಲ. ಚರ್ಚೆ ಮಾಡಿದರೆ ಶಿಸ್ತಿನ ವ್ಯಾಪ್ತಿಯಿಂದ ಹೊರಗೆ ಹೋಗುತ್ತೆ. ಸೇರಿಸಿಕೊಂಡು ನಮ್ಮ ತತ್ವ ವಿಚಾರಕ್ಕೆ ಬದ್ಧರಾಗಿರುವಂತೆ ಹೇಳುತ್ತೇವೆ. ಕೇಂದ್ರದಲ್ಲಿ ಮಾತುಕತೆ ಮಾಡಬೇಕು. ಕೇಂದ್ರದಲ್ಲಿ ಎಸ್ ಎಂದರೆ ಆಗುತ್ತದೆ ಎಂದು ಹೇಳಿದರು.

ವಿಧಾನಪರಿಷತ್‌ ಮೇಲ್ಮನೆಯಲ್ಲಿ ಸಂಖ್ಯೆ ಕಡಿಮೆ ಹಿನ್ನೆಲೆ ಜೆಡಿಎಸ್‌ ನವರು ನಮ್ಮ ಜೊತೆ ಬರುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಉಪಸಭಾಪತಿ ನಮಗೆ. ಇನ್ನು ಸಭಾಪತಿ ವಿಚಾರದಲ್ಲಿ ಇನ್ನು ಕೂಡ ಚೌಕಾಸಿ ನಡೆಯುತ್ತಿದೆ ಎಂದು ತಿಳಿಸಿದರು.

ಇದೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸಚಿವ ಸಂಪುಟ ರಚನೆ ಸಿಎಂ ಅವರ ಪರಮಾಧಿಕಾರ, ಕ್ಯಾಪ್ಟನ್‌ ಆದವರು ಬೌಲಿಂಗ್‌, ಬ್ಯಾಟಿಂಗ್‌, ಫೀಲ್ಡಿಂಗ್‌, ವಿಕೆಟ್‌ ಕೀಪರ್‌ ನೇಮಿಸುತ್ತಾರೆ. ನಮ್ಮ ಸರ್ಕಾರ ಬರಲು ಕೆಲವರು ಬೇರೆ ಪಕ್ಷದಿಂದ ಬಂದಿದ್ದಾರೆ. ರಾಜೀನಾಮೆ ನೀಡಿ ಪಕ್ಷಕ್ಕೆ ಬಂದವರಿಗೆ ಹೆಚ್ಚಿನ ಆದ್ಯತೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: BJP ಮತ್ತು JDS ವಿಲೀನವಲ್ಲದ ಹೊಂದಾಣಿಕೆ BJPಗೆ ಹೆಚ್ಚು ಲಾಭ: ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights