ಬೀದಿ ಕಾಮಣ್ಣನಿಗೆ ಬಿಸಿಬಿಸಿ ಕಜ್ಜಾಯ ! ಹುಡುಗಿಗೆ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ..!

ಕಂಡ ಕಂಡ ಹುಡುಗಿಯರನ್ನು ಕಾಡಿಸಿ ಪೀಡಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರೇ ಬಿಸಿಬಿಸಿ ಕಜ್ಜಾಯ ಕೊಟ್ಟ ಘಟನೆ ಬೆಳಗಾವಿಯ ಬಾಪಟ ಗಲ್ಲಿಯಲ್ಲಿ ನಡೆದಿದೆ.

ಇತ್ತೀಚೆಗೆ ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ಅಧಿಕವಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಹೀಗಿರುವಾಗ ಜನರೇ ಇಂತಹ ಘಟನೆಗಳ ತಡೆಗೆ ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಳಗಾವಿ ಬಾಪಟ ಗಲ್ಲಿಯಲ್ಲಿ  ಹುಡುಗೀಯರಿಗೆ ಕಾಡಿಸುತ್ತಿದ್ದ ಕಾಮುಕನಿಗೆ ಸಾರ್ವಜನಿಕರೇ ಗೂಸಾ ಕೊಟ್ಟಿದ್ದಾರೆ.

ಸದಾ ಬಾಪಟ ಗಲ್ಲಿಯಲ್ಲಿ ನಿಂತುಕೊಂಡು ಹುಡುಗಿಯರಿಗೆ ಕಿರಿಕಿರಿಯಾಗಿದ್ದ ವ್ಯಕ್ತಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಸದ್ಯ ಧರ್ಮದೇಟು ಕೊಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಯ, ಮಹಿಳೆಯರು ಸಾರ್ವಜನಿಕರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights