ಖಾತೆ ಕ್ಯಾತೆ : ಒಂದು ಖಾತೆ ಮೇಲೆ ಇಬ್ಬರ ಕಣ್ಣು : ಬಿಎಸ್ವೈ ಟಿಂಪಲ್ ರನ್!
ಸಚಿವ ಸಂಪುಟ ವಿಸ್ತರಣೆಯಾಗಿ 7 ದಿನ ಕಳಿತಾ ಬಂದರೂ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಈ ವಿಚಾಋದಲ್ಲಿ ಸಿಎಂ ಬಿಎಸ್ವೈ ಮಾತ್ರ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಯಾಕೆಂದರೆ ಬಿಜೆಪಿಯಲ್ಲಿ ಅಸಮಾಧಾನ ಮತ್ತಷ್ಟು ಭುಗಿಲೇಳುವ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ತಡ ಮಾಡುತ್ತಿದ್ದಾರೆ.
ಇತ್ತ ಸಚಿವ ಸಂಪುಟ ವಿಸ್ತರಣೆ ಆಗಿದ್ದೇ ತಡ ಸಪ್ತ ಸಚಿವರ ಕಣ್ಣು ಪ್ರಬಲ ಖಾತೆ ಮೇಲೆ ಬಿದ್ದಿದೆ. ಮಾತ್ರವಲ್ಲ ಪ್ರಬಲ ಖಾತೆ ಪಡೆಯುವುದಕ್ಕೆ ನೂತನ ಸಚಿವರ ಪೈಪೋಟಿ ನಡೆಯುತ್ತಿದೆ. ಈ ವಿಚಾರದಲ್ಲಿ ಸಿಎಂ ಬಿಎಸ್ ವೈ ಹಿರಿಯ ಸಚಿವರಿಗೆ ಬಿಗ್ ಶಾಕ್ ಕೊಡುತ್ತಾರಾ ಎನ್ನುವ ಅನುಮಾನ ಶುರುವಾಗಿದೆ. ಸದ್ಯ ಇರುವ ಇಂಧನ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಸಚಿವರಾದ ಮರುಗೇಶ್ ನಿರಾಣಿ, ಉಮೇಶ್ ಕತ್ತಿ ಇಬ್ಬರು ಕಣ್ಣು ಬಿದ್ದಿದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.
ಹೆಚ್. ನಾಗೇಶ್ ಅವರಿಂದ ತೆರವಾದ ಅಬಕಾರಿ ಖಾತೆ ಮತ್ತು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಪಡೆಯಲು ಮೂರು ಸಚಿವರು ಪೈಪೋಟಿ ನಡೆಸಿದ್ದಾರೆ. ಈ ಹಿಂದೆ ಸಚಿವ ಸಂಪುಟ ವಿಸ್ತರಣೆಯಾದಾಗ ಇಂಧನ ಖಾತೆಗೆ ಸಾಕಷ್ಟು ಪೂಪೋಟಿ ನಡೆದಿತ್ತು. ಹೀಗಾಗಿ ಈ ಖಾತೆ ಹಂಚಿಕೆಯಾಗದೇ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದರು. ಈಗ ಈ ಖಾತೆ ಮೇಲೆ ಇಬ್ಬರು ನೂತನ ಸಚಿವ ಕಣ್ಣು ಬಿದ್ದಿದೆ. ಮೇಲ್ನೋಟಕ್ಕೆ ಯಾವ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಹೇಳುವ ಕತ್ತಿ ಮತ್ತು ನಿರಾಣಿ ಒಳಗೊಳಗೆ ಈ ಖಾತೆ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಮೂರು ಜನ ಸಚಿವರ ಕಣ್ಣು ಬಿದ್ದಿದೆ. ಸಚಿವ ಅರವಿಂದ್ ಲಿಂಬಾವಳಿಗೆ ಈ ಖಾತೆ ಪಡೆಯುವ ಆಸೆ ಇದ್ದರೂ ಇವರಿಗೆ ಉನ್ನತ ಶಿಕ್ಷಣ ಖಾತೆ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಈ ಖಾತೆ ಮೇಲೆ ಕಣ್ಣಿಟ್ಟಿದ್ದ ಬೈರತಿ ಬಸವರಾಜ್ ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆಯುತ್ತಾರಾ ಕಾದು ನೋಡಬೇಕಿದೆ.
ಇನ್ನೂ ಎಸ್. ಅಂಗಾರ ಮೀನುಗಾರಿಕೆ ಖಾತೆ, ಸಿಪಿ ಯೋಗೇಶ್ವರ್ ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಸಿಗುವ ಸಾಧ್ಯತೆ ಇದೆ. ಆದರೆ ಮಂತ್ರಿ ಸ್ಥಾನ, ಖಾತೆ ಹಂಚುವುದು ಸಿಎಂ ಪರಮಾಧಿಕಾರ ಹೊಂದಿದ್ದಾರೆ. ಇದರ ಬಗ್ಗೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಇನ್ನೂ ಕೆಲವೇ ದಿನಗಳಲ್ಲಿ ನೂತನ ಸಪ್ತ ಸಚಿವರಿಗೆ ಖಾತೆ ಹಂಚಿಕೆಯಾಗಲಿದ್ದು, ಖಾತೆ ಹಂಚಿಕೆ ಮುನ್ನ ದೇವರ ಮೊರೆ ಹೋಗಿದ್ದಾರೆ ಸಿಎಂ ಬಿಎಸ್ವೈ. ಉಡುಪಿಯಲ್ಲಿ ಅನೆಗುಡ್ಡೆ ಕುಂಭಾಶಿ ವಿನಾಯ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿದ್ದು 1008 ಕಾಯಿಗಳ ಗಣಹೋಮದಲ್ಲಿ ಸಿಎಂ ಭಾಗಿಯಾಗಿದ್ದಾರೆ.

