ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ; ಎರಡನೇ ಸ್ಥಾನಕ್ಕೆ ಬಿಜೆಪಿ ತೃಪ್ತಿ ಹೊಂದುವ ಸಾಧ್ಯತೆ!

ರಾಜಸ್ಥಾನ ಮುನ್ಸಿಪಲ್ (ಪುರಸಭಾ) ಚುನಾವಣೆಯ ಮತ ಎಣಿಕೆ ಭಾನುವಾರ ಬೆಳಿಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಭಾರೀ ಪೈಪೋಟಿ ತೋರುತ್ತಿವೆ.

ರಾಜಸ್ಥಾನದ ಅಜ್ಮೀರ್, ಬನ್ಸ್‌ವಾರ, ಬಿಕಾನೆರ್, ಭಿಲ್ವಾರಾ, ಬುಂಡಿ, ಪ್ರತಾಪ್‌ಗಡ್, ಚಿತ್ತೋರ್‌ಗಡ್, ಚುರು, ಡುಂಗಾರ್‌ಪುರ್, ಹನುಮನ್‌ಗಡ್, ಜೈಸಲ್ಮೇರ್, ಜಲೋರ್, ಹಲಾವರ್, ಜುಂಜುನು, ನಾಗಾರ್‌ಡೌರ್, ನಾಗರೌರ್  ಜಿಲ್ಲೆಗಳ ನಗರಸಭೆಗಳಿಗೆ ಚುನಾವಣೆ ನಡೆದಿದೆ.

ಒಟ್ಟು 3,035 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದೂವರೆಗೂ 2,975 ವಾರ್ಡ್ ಕೌನ್ಸಿಲರ್‌ಗಳ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ಕಾಂಗ್ರೆಸ್ 1,174 ಸ್ಥಾನಗಳನ್ನು ಗೆದ್ದಿದೆ ಮತ್ತು ಬಿಜೆಪಿ 1,123 ವಾರ್ಡ್‌ಗಳನ್ನು ಗೆದ್ದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 51 ವಾರ್ಡ್‌ಗಳ ಅಂತರ ಉಳಿದಿದೆ. ಸ್ವತಂತ್ರರು 615 ವಾರ್ಡ್‌ಗಳನ್ನು ಗೆದ್ದುಕೊಂಡಿದ್ದಾರೆ.  ಎನ್‌ಸಿಪಿ 46 ವಾರ್ಡ್‌ಗಳು, ಆರ್‌ಎಲ್‌ಪಿ 13, ಸಿಪಿಐ (ಎಂ) 3 ಮತ್ತು ಬಿಎಸ್‌ಪಿ 1 ಸ್ಥಾನ ಗೆದ್ದಿದೆ. ಕೇವಲ 60 ವಾರ್ಡ್ ಕೌನ್ಸಿಲರ್‌ಗಳ ಫಲಿತಾಂಶಗಳು ಬಾಕಿ ಉಳಿದಿವೆ.

ರಾಜಸ್ಥಾನದ 20 ಜಿಲ್ಲೆಗಳ 90 ಮುನ್ಸಿಪಲ್‌ಗಳಿಗೆ ಗುರುವಾರ ಮತದಾನ ನಡೆದಿತ್ತು.

ಇದನ್ನೂ ಓದಿ: ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ: ಜೆಡಿ ನಡ್ಡಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights