BJP ವಿರುದ್ಧವೂ ತಿರುಗಿಬಿದ್ದಿರುವ ವಿಶ್ವನಾಥ್‌ ಯಾವ ಪಕ್ಷಕ್ಕೆ ಹೋಗ್ತಾರೆ? ಹೆಚ್‌ಡಿಕೆ ವ್ಯಂಗ್ಯ

ವಿಧಾನ ಪರಿಷತ್ ಸದಸ್ಯ, ಹಳ್ಳಿಹಕ್ಕಿ ವಿಶ್ವನಾಥ್‌ ಅವರಿಗೆ ಕಾಂಗ್ರೆಸ್‌-ಜೆಡಿಎಸ್‌ ಮುಗಿಯಿತು. ಈಗ ಬಿಜೆಪಿ ಸೇರಿ, ಬಿಜೆಪಿಯ ವಿರುದ್ದವೂ ತಿರುಗಿ ಬಿದ್ದಿದ್ದಾರೆ. ಮತ್ತೆ ಯಾವು ಪಕ್ಷ ಸೇರುತ್ತಾರೋ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ವಿಧಾನ ಪರಿಷತ್ ಉಪಸಭಾಪತಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿಗೆ ಮುಂದಾಗಿವೆ. ಇದನ್ನು ವಿಶ್ವನಾಥ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ್‌ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್‌ಡಿಕೆ, ವಿಶ್ವನಾಥ್‌ಗೆ ಮೂರು ಪಕ್ಷಗಳು ಮುಗಿಯಿತು. ಇನ್ನೊಂದು ಪಕ್ಷ ಇದ್ದಿದ್ದರೆ ಇಷ್ಟೊತ್ತಿಗೆ ಕರ್ಚೀಫ್ ಇಲ್ಲವೇ ಟವೆಲ್ ಹಾಕಿರುತ್ತಿದ್ದರು. ಮುಂದೆ ಯಾವ ಪಕ್ಷಕ್ಕೆ ಹೋಗುತ್ತಾರೆ ಕಾದು ನೋಡೋಣ ಎಂದು ಟೀಕಿಸಿದ್ದಾರೆ.

ಸಾಹಿತಿ ಕೋಟಾದಲ್ಲಿ ವಿಧಾನಪರಿಷತ್ ಸದಸ್ಯರಾಗಿರುವ ಅವರು ಸಾಹಿತ್ಯದ ಪರಿಭಾಷೆಯಲ್ಲಿಯೇ ವಿರೋಧಿಗಳನ್ನು ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Read Also: ಟೊಯೊಟಾ ಕಾರ್ಮಿಕರ ಮೇಲೆ ಜಪಾನ್‌ ಕಾನೂನುಗಳ ಹೇರಿಕೆ ಸಹಿಸಲ್ಲ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights