ವಿಡಿಯೋ ಮಾಡಲು ಬಾವಿಗೆ ತಳ್ಳಿದ ಸ್ನೇಹಿತರು; ಬೆಂಗಳೂರಿನ ಯುವಕ ಸಾವು!

ಮೋಜು-ಮಸ್ತಿಯಲ್ಲಿ ಮುಳುಗಿದ್ದ ಯುವಕರ ಗುಂಪೊಂದು ತಮ್ಮ ಸ್ನೇಹಿತನೊಬ್ಬನನ್ನು ಬಾವಿಗೆ ತಳ್ಳಿದ್ದಾರೆ. ಈಜು ಬಾರದ ಆತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದೆ.

08 ಮಂದಿ ಸ್ನೇಹಿತರು ಜಾಲಿ ರೈಡ್‌ ಹೋಗಿದ್ದು, ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಸ್ನಾನ ಮಾಡಲು ಬಾವಿಯ ಬಳಿ ತೆರಳಿದ್ದು, ವಿಡಿಯೋ ಮಾಡುವ ಉದ್ದೇಶದಿಂದ ಸ್ನೇಹಿತನೊಬ್ಬನನ್ನು ಬಾವಿಗೆ ತಳ್ಳಿದ್ದಾರೆ.

ಈಜು ಬಾರದ ಆತ ಬಾವಿಯಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ 06 ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಾವನ್ನಪ್ಪಿರುವ ಯುವಕನನ್ನು ಹೆಬ್ಬೂರು ನಿವಾಸಿ ಲಕ್ಷ್ಮೀಕಾಂತ್ (27) ಎಂದು ಗುರುತಿಸಲಾಗಿದೆ.

ಲಕ್ಷ್ಮೀಕಾಂತ್ ನನ್ನು ಬಾವಿಗೆ ತಳ್ಳಿದ್ದ ಬಲರಾಮ್ ಗ್ರಾಮಸ್ಥರ ಸಹಾಯದೊಂದಿಗೆ ಮೃತದೇಹವನ್ನು ಬಾವಿಯಿಂದ ಹೊರಗೆ ತಂದಿದ್ದಾರೆ.

ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಚಾರಣೆ ನಡೆಸಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಲ್ಲದೆ, ಬಲರಾಮ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಂದೆಯ ಬಂಧನಕ್ಕೆ ವಿರೋಧ; ಸರ್ಕಾರದ ಬೈಸಿಕಲ್‌ ಬೇಡವೆಂದ BJP ಮುಖಂಡನ ಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.